ಗುತ್ತಿಗೆ ನೌಕರರಿಗೂ ಮಾತೃತ್ವ ರಜೆ ಸೌಲಭ್ಯ; ಆದೇಶ

ಬೆಂಗಳೂರು, ಜೂನ್ 05; ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಲ್ಲಿ ಗುತ್ತಿಗೆ (Contract) ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮಾತೃತ್ವ (ಹೆರಿಗೆ) ರಜೆ ಸೌಲಭ್ಯವನ್ನು ವಿಸ್ತರಿಸುವ ಕುರಿತು ಆದೇಶ ಹೊರಡಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆಯ (ಸೇವೆಗಳು-1) ಅಜಯ್ ಎಸ್. ಕೊರಡೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಹಲವು ಷರತ್ತುಗಳಿಗೊಳಪಟ್ಟು ಮಾತೃತ್ವ ರಜೆಯ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಸಹಮತಿಸಿದೆ. ಈ ಸೌಲಭ್ಯವನ್ನು ದಿನಾಂಕ 01/14/2022 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ.

maternity leave for woman contract employees

ಈ ಆದೇಶ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಅಂಗ ಸಂಸ್ಥೆಗಳಾದ ನಿಗಮ, ಮಂಡಳಿ ಸ್ವಾಯತ್ತ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಹಿಳಾ ನೌಕರರಿಗೆ ಷರತ್ತುಗಳಿಗೊಳಪಟ್ಟು ಮಾತೃತ್ವ ರಜೆಯ ಸೌಲಭ್ಯವನ್ನು ವಿಸ್ತರಿಸಲು ಸಹಮತಿಸಿದೆ ಎಂದು ಹೇಳಿದೆ.

ಷರತ್ತುಗಳು ಹೀಗಿವೆ...

* ಮಾತೃತ್ವ ರಜೆಯನ್ನು ರಜೆಯ ಪ್ರಾರಂಭದ ದಿನಾಂಕದಿಂದ ಗರಿಷ್ಠ 180 ದಿನಗಳವರೆಗೆ ಮಂಜೂರು ಮಾಡಬಹುದು.

* ಗರ್ಭಸ್ರಾವ ಅಥವಾ ಗರ್ಭಪಾತದಿಂದ ಗರ್ಭಧಾರಣೆಯು ಪರ್ಯಾವಸಾನಗೊಂಡ ಸಂದರ್ಭದಲ್ಲಿ ಮಾತೃತ್ವ ರಜೆಯು 6 ವಾರಗಳನ್ನು ಮೀರಬಾರದು.

maternity leave for woman contract employees

* ಇಂತಹ ರಜೆಗಾಗಿ ಸಲ್ಲಿಸಿದ ಅರ್ಜಿಯು ನೋಂದಾಯಿಕ ವೃತ್ತಿನಿರತ ವೈದ್ಯರಿಂದ ಪಡೆದ ಪ್ರಮಾಣ ಪತ್ರದಿಂದ ಸಮರ್ಥಿಕವಾಗಿರಬೇಕು.

* ಮಾತೃತ್ವ ರಜೆಯ ಮೇಲೆ ತೆರಳುವ ನೌಕರರು ರಜೆಯ ನಿಕಟಪೂರ್ವದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಸಮನಾದ ವೇತನವನ್ನು ರಜೆಯ ಅವಧಿಯಲ್ಲಿ ಪಡೆಯಲು ಅರ್ಹರಿರುತ್ತಾರೆ.

* ಎರಡು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಮಹಿಳಾ ಗುತ್ತಿಗೆ ನೌಕರರಿಗೆ ಈ ಮಾತೃತ್ವ ರಜೆಯನ್ನು ಮಂಜೂರು ಮಾಡದಕ್ಕದ್ದಲ್ಲ, ಮಾತೃತ್ವ ರಜೆಗಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಿತ ಗುತ್ತಿಗೆ ಮಹಿಳಾ ನೌಕರರು ಈ ಕುರಿತು ಸ್ವಯಂ-ಘೋಷಣೆಯನ್ನು ಮಾತೃತ್ವ ರಜೆಯನ್ನು ಮಂಜೂರು ಮಾಡುವ ಅಧಿಕಾರಿಗೆ ಸಲ್ಲಿಸತಕ್ಕದ್ದು.

180 ದಿನದ ನಿಯಮ; ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಮಹಿಳಾ ನೌಕರರಿಗೆ ಗರಿಷ್ಠ 180 ದಿನಗಳವರೆಗೆ ಮಾತೃತ್ವ ರಜೆಯನ್ನು ನೀಡಬಹುದು. ಶ್ರೀಮತಿ (ಉದ್ಯೋಗಿ ಹೆಸರು) ಇವರ ಒಪ್ಪಂದದ ಅವಧಿ ದಿನಾಂಕ 15/07/2021 ರಿಂದ ಪ್ರಾರಂಭವಾಗಿ ದಿನಾಂಕ 14/07/2022ಕ್ಕೆ ಮುಕ್ತಾಯವಾಗುತ್ತದೆ. ಅವರು ದಿನಾಂಕ 01/05/2022 ರಂದು ಮಾತೃತ್ವ ರಜೆಯ ಮೇಲೆ ತೆರಳಿದ್ದಲ್ಲಿ ಹಾಗೂ ಅವರ ಗುತ್ತಿಗೆ ಅವಧಿಯ ವಿಸ್ತರಿಸಲ್ಪಡದಿದ್ದಲ್ಲಿ ಅವರ ಮಾತೃತ್ವ ರಜೆಯ ಅವಧಿಯನ್ನು ಒಪ್ಪಂದದ ಗರಿಷ್ಠ ಅವಧಿಯವರೆಗೆ ಅಂದರೆ ದಿನಾಂಕ 14/07/2022 ರವರೆಗೆ ಸೀಮಿತಗೊಳಿಸತಕ್ಕದ್ದು, ಒಂದು ವೇಳೆ ಅವರ ಗುತ್ತಿಗೆ ಅವಧಿಯು ವಿಸ್ತರಿಸಲ್ಪಟ್ಟಲ್ಲಿ ಆಗ ಅವರು ಗರಿಷ್ಠ 180 ದಿನಗಳ ಮಾತೃತ್ವ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.

ಸರ್ಕಾರ ತನ್ನ ಆದೇಶದಲ್ಲಿ ಈ ಮಾತೃತ್ವ ರಜೆಯ ಸೌಲಭ್ಯವನ್ನು ದಿನಾಂಕ 01/14/2022 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ ಎಂದು ಹೇಳಿದೆ.

ಪತ್ರ ಬರೆಯಲಾಗಿದೆ; ಕೆಲವು ದಿನಗಳ ಹಿಂದೆ ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸಲು ಮನವಿ ಮಾಡಲಾಗಿತ್ತು. ಈ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಮತ್ತು ಸಾಕ್ಷರತಾ ಇಲಾಖೆ ಇವರಿಗೆ ಪತ್ರವನ್ನು ಬರೆಯಲಾಗಿತ್ತು.

ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರು ಸರ್ಕಾರದ ಅನುದಾನದಿಂದಲೇ ವೇತನ, ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ಸರ್ಕಾರಿ ಮಹಿಳಾ ನೌಕರರ ಮತ್ತು ಅನುದಾನಿತ ಪ್ರೌಢಶಾಲಾ ಮಹಿಳಾ ನೌಕರರ ಕರ್ತವ್ಯದ ಸ್ವರೂಪ ಒಂದೇ ರೀತಿಯಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸಬೇಕು ಎಂದು ಕೋರಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+