Get Updates
Get notified of breaking news, exclusive insights, and must-see stories!

ಬಳ್ಳಾರಿ ಬಾಣಂತಿಯರ ಸಾವು : ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ

ಬೆಳಗಾವಿ, ಡಿಸೆಂಬರ್‌ 20: ಬಳ್ಳಾರಿಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರಲ್ಲಿ ತಪ್ಪಿತಸ್ಥರಾದವರನ್ನು ಸುಮ್ಮನೆ ಬಿಡುವುದಿಲ್ಲ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬಾಣಂತಿಯರ ಸಾವಿನ ಕುರಿತು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ, ವಿರೋಧ ಪಕ್ಷದ ನಾಯಕರು ನಿಯಮ 69 ಅಡಿ ಬಾಣಂತಿಯರ ಸಾವಿನ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಮಾತನಾಡಿ, ಒಂದು ವೇಳೆ ನಾನು ತಪ್ಪಿತಸ್ಥನೆಂದು ತಿಳಿದು ಬಂದರೆ, ಯಾವುದೇ ಮುಲಾಜು ಇಲ್ಲದೇ, ನನ್ನ ಮೇಲಿನ ಕ್ರಮಕ್ಕೂ ಸಿದ್ಧ. ಕಳೆದ ನವೆಂಬರ್ ತಿಂಗಳ 9, 10 ಹಾಗೂ 11 ತಾರೀಖಿನಂದು ಬಳ್ಳಾರಿ ಆಸ್ಪತ್ರೆಯಲ್ಲಿ 34 ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಈ ಪೈಕಿ 7 ಬಾಣಂತಿಯರು ಹೆರಿಗೆ ನಂತರ ತೀವ್ರ ತರನಾಗಿ ಅಸ್ವಸ್ಥಗೊಂಡರು. ಇದರಲ್ಲಿ 5 ಬಾಣಂತಿಯರು ಸಾವನಪ್ಪಿದರೆ, ಇಬ್ಬರು ಸಾವಿನಿಂದ ಪಾರಾದರು.

Maternal Death Case To Be Ivestigated By Retired Judge Says Dinesh Gundu Rao

ಘಟನೆ ತಿಳಿದ ತಕ್ಷಣವೇ, ಸಾವಿನ ಕಾರಣ ತಿಳಿಯಲು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವೈದ್ಯರ ತಂಡ ರಚಿಸಿ ಬಳ್ಳಾರಿಗೆ ಕಳುಹಿಸಿಕೊಡಲಾಯಿತು. ಈ ತಂಡ ನವೆಂಬರ್ 12 ಹಾಗೂ 13 ರಂದು ಕೂಲಂಕಷವಾಗಿ ಅಧ್ಯಯನ ನಡೆಸಿ, ನವೆಂಬರ್ 14 ರಂದು ವರದಿ ನೀಡಿದೆ. ಇದರಲ್ಲಿ ವೈದ್ಯರು ಶಸ್ತçಚಿಕಿತ್ಸೆಯ ಎಲ್ಲ ಶಿಷ್ಟಾಚಾರ ನಿಯಮಗಳನ್ನು ಪಾಲಿಸಿದ್ದಾರೆ. ವೈದ್ಯರಿಂದ ಲೋಪವಾಗಿಲ್ಲ, ಬದಲಾಗಿ ಸಿಜೇರಿಯನ್ ನಂತರ ಬಾಣಂತಿಯರಿಗೆ ನೀಡಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಪ್ರತಿಕೂಲ ಪರಿಣಾಮದಿಂದ ಸಾವು ಸಂಭವಿಸಿರುವುದಾಗಿ ವರದಿ ನೀಡಿದರು.

ಇದರ ಆಧಾರದಲ್ಲಿ ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ಪರೀಕ್ಷೆಗಾಗಿ ಲ್ಯಾಬಿಗೆ ಕಳುಹಿಸಿಕೊಟ್ಟಾಗ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾಗಿದೆ. ಹೈದರಾಬಾದ್ ಲ್ಯಾಬ್‌ನಲ್ಲಿ ನಡೆಸಿದ ಪರೀಕ್ಷೆಯಲ್ಲಿ ರಿಂಗರ್ ಲ್ಯಾಕ್ಟೇಟ್ ಐವಿಯಲ್ಲಿ ಎಂಡೋ ಟಾಕ್ಸಿಕ್ ಅಂಶ ಇರುವುದಾಗಿ ತಿಳಿದು ಬಂದಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆ :

ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣವನ್ನು ರಾಜ್ಯದ ಇತರೆ ಆಸ್ಪತ್ರೆಗಳಿಗೂ ಪೂರೈಸಲಾಗಿದೆ, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸಂಭವಿಸಿದ ಬಾಣಂತಿಯರ ಸಾವಿನ ಲೆಕ್ಕ ಪರಿಶೋಧನೆಗೂ ಸೂಚನೆ ನೀಡಿದ್ದೇನೆ. ಮುಖ್ಯಮಂತ್ರಿಗಳು ಈಗಾಗಲೇ ಅಭಿವೃದ್ಧಿ ಆಯುಕ್ತರನ್ನು ಪ್ರಕರಣದ ಪರಿಶೀಲನೆ ನಡೆಸಿ ವರದಿ ನೀಡಲು ನೇಮಿಸಿದ್ದಾರೆ. ತಜ್ಞ ವೈದ್ಯರಿಂದಲೂ ತನಿಖೆ ನಡೆಯುತ್ತಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ಆಡಳಿತದಲ್ಲಿ ಸುಧಾರಣೆಗೆ ವರದಿ ನೀಡಲು ಹಿರಿಯ ಐ.ಎ.ಎಸ್ ಅಧಿಕಾರಿಯನ್ನು ಸಹ ನೇಮಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಳಪೆ ಐವಿ ದ್ರಾವಣ ಪೂರೈಕೆ ಹೇಗೆ?

ಪಶ್ಚಿಮ್ ಬಂಗಾ ಕಂಪನಿ ಪೂರೈಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ಪತ್ತೆಯಾದ ಮೇಲೂ ಐವಿ ದ್ರಾವಣ ಪೂರೈಕೆ ಹೇಗೆ ಆಯಿತು ಎನ್ನವುದರ ಕುರಿತು ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ವಿಸ್ತೃತ ಮಾಹಿತಿ ನೀಡಿದರು.

ಕಳೆದ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿಯೇ ಐವಿ ದ್ರಾವಣದ ಗುಣಮಟ್ಟದ ಕುರಿತು ಸರ್ಕಾರಕ್ಕೆ ಮಾಹಿತಿ ದೊರಕಿತ್ತು. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಐವಿ ದ್ರಾವಣ ನೀಡಿದವರಿಗೆ ಚಳಿ ಹಾಗೂ ನಡುಕ ಉಂಟಾಗುತಿತ್ತು. ಇದೇ ಮಾದರಿಯಲ್ಲಿ ಗುಂಡ್ಲಪೇಟೆ ಆಸ್ಪತ್ರೆಯಲ್ಲಿಯು ರೋಗಿಗಳಿಗೆ ತೊಂದರೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಸರ್ಕಾರ ಎನ್.ಎ.ಬಿ.ಎಲ್ ಹಾಗೂ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದಾಗ ಐವಿ ದ್ರಾವಣ ಕಳಪೆ ಗುಣಮಟ್ಟದ್ದು ಎಂದು ವರದಿ ಬಂದಿದೆ. ಇದನ್ನು ಆಧರಿಸಿ ಪಶ್ಚಿಮ್ ಬಂಗಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರು ಪೂರೈಹಿಸಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ 192 ಬ್ಯಾಚುಗಳ ಸರಬರಾಜನ್ನು ತಡೆ ಹಿಡಿಯಲಾಯಿತು.

ಇದನ್ನು ವಿರೋಧಿ ಪಶ್ಚಿಮ್ ಬಂಗಾ ಕಂಪನಿ ಕೇಂದ್ರ ಔಷಧ ಲ್ಯಾಬೋರೆಟರಿಯಿಂದ ಗುಣಮಟ್ಟದ ಪರೀಕ್ಷೆಯ ವರದಿ ಆಧರಿಸಿ ನ್ಯಾಯಾಲಯದಲ್ಲಿ ಸರ್ಕಾರ ದಾವೆ ಹೂಡಿದೆ. ಇದರೊಂದಿಗೆ ಎನ್.ಎ.ಬಿ.ಲ್ ಲ್ಯಾಬ್‌ಗಳು ಸಹ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಗುಣಮಟ್ಟ ಸರಿಯಿದೆ ಎಂದು ವರದಿ ನೀಡಿದವು.

ಜೂನ್ ತಿಂಗಳ ವೇಳೆಗೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಇತರೆ ಶಸ್ತçಚಿಕತ್ಸೆ ಮಾಡಿದವರಿಗೆ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣ ನೀಡಲು ಬೇಡಿಕೆ ಹೆಚ್ಚಾಯಿತು. ಈ ವೇಳೆ ಸರ್ಕಾರ ಪಶ್ಚಿಮ್ ಬಂಗಾ ಕಂಪನಿ ಐವಿ ದ್ರಾವಣದ 192 ಬ್ಯಾಚುಗಳ ಗುಣಮಟ್ಟವನ್ನು ಮತ್ತೊಮ್ಮೆ ಪರಿಶೀಲಿಸಿ, 22 ಬ್ಯಾಚ್‌ಗಳನ್ನು ಕಳಪೆ ಎಂದು ತಡೆಹಿಡಿದು ಉಳಿದ ಬ್ಯಾಚುಗಳ ಐವಿ ದ್ರಾವಣವನ್ನು ಆಸ್ಪತ್ರೆಗಳಿಗೆ ಸರಬರಾಜು ಮಾಡಿದೆ. ನಂತರ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಐವಿ ದ್ರಾವಣದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+