ಶ್ರೀ ಕುಕ್ಕೆ ಸುಬ್ರಹ್ಮಣ್ಯ ಭಕ್ತರಿಗೆ ಸಿಹಿ ಸುದ್ದಿ: ದೇವಸ್ಥಾನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ರಾಮಲಿಂಗಾ ರೆಡ್ಡಿ
Sri Kukke Subrahmanya Temple: ಪಶ್ಚಿಮ ಘಟ್ಟಗಳಲ್ಲಿನ ಪ್ರಮುಖ ಹಿಂದೂ ದೇವಾಲಯಗಳು ಸಮಗ್ರ ಅಭಿವೃದ್ಧಿ ಆಗುತ್ತಿವೆ. ಇತ್ತೀಚೆಗೆ ಧರ್ಮಸ್ಥಳ ಶ್ರೀ ಮಂಜುನಾಥ್ ದೇಗುದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ತಿರುಪತಿ ಮಾದರಿಯಲ್ಲಿ ವಿಶಾಲ ಸಂಕೀರ್ಣ ನಿರ್ಮಿಸಲಾಗಿದೆ. ಅದೇ ರೀತಿ ಭಕ್ತರ ಆರಾಧ್ಯಧೈವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಭಕ್ತ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮಹತ್ವದ ಕಾಮಗಾರಿ ಕೈಗೊಳ್ಳಲಾಗಿದೆ. ಆಧುನಿಕ ಮೂಲಸೌಕರ್ಯ ಒದಗಿಸಲು ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.
ರಾಜ್ಯ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಸಭೆ ನಡೆಸಿದರು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 77 ರನ್ವಯ 15 ಜನ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಮತ್ತು ಹೆಚ್ಚುವರಿಯಾಗಿ 3 ಜನ ಸದಸ್ಯರುಗಳನ್ನು ಒಳಗೊಂಡಂತೆ ಮೇಲ್ವಿಚಾರಣಾ ಸಮಿತಿ ರಚಸಿ ಆದೇಶಿಸಲಾಗಿದೆ.

ಸಭೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಮಹತ್ವದ ತಿರ್ಮಾನ ಕೈಗೊಳ್ಳಲಾಗಿದೆ. ಆಯುಕ್ತರು, ಮುಜರಾಯಿ ಇಲಾಖೆ ಅವರು ಸಮಿತಿ ಅಧ್ಯಕ್ಷರಾಗಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಕೈಗೊಂಡ ತಿರ್ಮಾನಗಳು: ಅಂಶಗಳು
* ದೇವಳದ ಸುತ್ತು ಗೋಪುರ (ಸುತ್ತುಪೌಳಿ) ನಿರ್ಮಾಣ
ಇದನ್ನು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯದ ಕಟ್ಟಡದ ವಿನ್ಯಾಸಕ್ಕೆ ಸರಿ ಹೊಂದುವಂತೆ, ಮರು ವಿನ್ಯಾಸ ಮಾಡಿ, ಅನುಮತಿ ಪಡೆದು ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ.

* ಆಶ್ಲೇಷಬಲಿ, ಪೂಜಾ ಮಂದಿರ ನಿರ್ಮಾಣ
ಮಾಸ್ಟರ್ ಪ್ಲಾನ್ ಪ್ರಕಾರ ತುಳಸಿತೋಟದಲ್ಲಿ ಸ್ಥಳ ಗುರುತಿಸಲಾಗಿದೆ. ದೇವಾಲಯದ ಕಟ್ಟಡದ ವಿನ್ಯಾಸಕ್ಕೆ ಹೊಂದಾಣಿಕೆಯಾಗುವಂತೆ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ದೇವಾಲಯದ ವತಿಯಿಂದ ಅಂದಾಜು ಮತ್ತು ನಕ್ಷೆ ತಯಾರಿಸಿ ಇದರಂತೆ ನಿರ್ಮಿಸಲು ದಾನಿಗಳು ಮುಂದೆ ಬಂದಲ್ಲಿ ಅವರಿಗೆ ಅನುಮತಿ ನೀಡಲು, ಇಲ್ಲವಾದಲ್ಲಿ ದೇವಾಲಯದ ವತಿಯಿಂದ ನಿರ್ಮಿಸಲು ತೀರ್ಮಾನ.
* ಅನ್ನದಾಸೋಹ, ಹಾಲಿ ಇರುವ ದಾಸೋಹ
ಹಾಲಿ ಇರುವ ದಾಸೋಹ ಉಳಿಸಿಕೊಳ್ಳಲು ಸಾಧ್ಯವಿದ್ದರೆ ಉಳಿಸಿಕೊಂಡು ವಿಸ್ತರಿಸಲು ಅಥವಾ ಹೊಸದಾಗಿ ದೊಡ್ಡದಾದ ದಾಸೋಹ ಭವನ ನಿರ್ಮಿಸಲು ಅಗತ್ಯ ಅಂದಾಜು ನಕ್ಷೆ ಸಲ್ಲಿಸಲಾಗುವುದು.
* ರಥ ಬೀದಿಗೆ ಆದ್ಯತೆ
ಉತ್ತಮ ವಿನ್ಯಾಸದಲ್ಲಿ ಸ್ಥಳೀಯ ಸಂಸ್ಕೃತಿ ಬಿಂಬಿಸುವ ದೇವಾಲಯದ ವಿನ್ಯಾಸಕ್ಕೆ ಸರಿ ಹೊಂದುವಂತೆ ಒಂದು ಉತ್ತಮವಾದ ರಥದ ಬೀದಿ ನಿರ್ಮಿಸಲಾಗುವುದು. ಇಲ್ಲಿ ಭಕ್ತರು ಕೂರಲು ಉತ್ತಮ ವ್ಯವಸ್ಥೆ ಮಾಡಲಾಗುವುದು.
* 800 ಕೊಠಡಿಗಳ ನಿರ್ಮಾಣ
ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ತಲಾ 200 ಕೊಠಡಿಗಳ 4 ಬ್ಲಾಕ್‌ನಲ್ಲಿ ಒಟ್ಟು ತೀರ್ಮಾನಿಸಲಾಯಿತು. 800 ಕೊಠಡಿಗಳ 4 ಸಂಕೀರ್ಣ ನಿರ್ಮಿಸಲು ತೀರ್ಮಾನಿಸಲಾಗಿದೆ.
* ಶೌಚಾಲಯ ಮತ್ತು ಸ್ನಾನ ಗೃಹಗಳು
ಶೌಚಾಲಯ ಮತ್ತು ಸ್ನಾನಗೃಹಗಳ ಒಟ್ಟು 4 ಬ್ಲಾಕ್‌ಗಳಲ್ಲಿ ತಲಾ 24 ಶೌಚಾಲಯ ಹಾಗೂ 16 ಸ್ನಾನಗೃಹಗಳನ್ನು ನಿರ್ಮಿಸಲಾಗುವುದು. ಇದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದ ವೇಳೆ ಅನುಕೂಲವಾಗಲಿವೆ.
* ವಾಣಿಜ್ಯ ಸಂಕೀರ್ಣ ಕಾರ್ಯ
ಕುಕ್ಕೆ ಶ್ರೀ ದೇವಸ್ಥಾನಕ್ಕೆ ವರ್ಷವಿಡೀ ಭಕ್ತರು ಆಗಮಿಸುತ್ತಲೇ ಇರುತ್ತಾರೆ. ಹೀಗೆ ದೇವಾಲಯಕ್ಕೆ ಬರುವ ದಾರಿಯಲ್ಲಿ ಸೂಕ್ತ ಸ್ಥಳದಲ್ಲಿ, ರಸ್ತೆ ಬದಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿದೆ.
* ಪಾರ್ಕಿಂಗ್ ನಿರ್ಮಾಣ: ದೇಗುಲಕ್ಕೆ ವೈಯಕ್ತಿಕ ವಾಹನಗಳ ಸಮೇತ ಬರುವ ಭಕ್ತಾದಿಗಳು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಜಮೀನು ಖರೀದಿಸಲು ಕ್ರಮವಹಿಸಲಾಗುವುದು.
* ಡಾರ್ಮೆಟರಿ ನಿರ್ಮಾಣ: 50 ಕೊಠಡಿ ಹೊಂದಿರುವ ಡಾರ್ಮೆಟರಿಗಳನ್ನು ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
* ಕ್ಯೂ ಲೈನ್ ನಿರ್ಮಾಣ: ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿರುವ ಕ್ಯೂ-ಲೈನ್ ಕಾಂಪ್ಲೆಕ್ಸ್ ಗಳಲ್ಲಿ ಆಧುನಿಕ ವ್ಯವಸ್ಥೆ ಮಾಡಲಾಗುವುದು. ಶೀಘ್ರವೇ ಇಲ್ಲಿನ ಕ್ಯೂ-ಲೈನ್ ಸಂಕೀರ್ಣಗಳು ಆಧುನಿಕವಾಗಿರಲಿವೆ.












Click it and Unblock the Notifications