ಶಾಲಿನಿ ರಜನೀಶ್ ಸೇರಿ 23 ಐಎಎಸ್ ಆಫೀಸರ್ಸ್ ವರ್ಗ
ಬೆಂಗಳೂರು, ಆ.10: ಕರ್ನಾಟಕ ಸರಕಾರದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಲಾಗಿದೆ. 23 ಐಎಎಸ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ಈ ಪೈಕಿ ರಶ್ಮಿ ಮಹೇಶ್, ಡಾ.ಶಾಲಿನಿ ರಜನೀಶ್, ರಾಜೀವ್ ಚಾವ್ಲಾ ಅವರ ವರ್ಗಾವಣೆ ಪ್ರಮುಖವಾಗಿದೆ.
ಡಿ.ಪ್ರಕಾಶ್-ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಿ.ಎಚ್.ಸುಧೀರ್‌ಕುಮಾರ್ ರೆಡ್ಡಿ-ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ಉಳಿದಂತೆ ಐಎಎಸ್ ಅಧಿಕಾರಿಗಳ ಹೊಸ ಹುದ್ದೆಯ ವಿವರ ಇಂತಿದೆ:
* ರಾಜೀವ್ ಚಾವ್ಲಾ: ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ,
* ಎಂ.ವಿ.ಜಯಂತಿ: ಡಿಪಿಎಆರ್ ಸರ್ಕಾರದ ಪ್ರಧಾನ ಕಾರ್ಯದರ್ಶಿ,
* ಡಾ.ಶಾಲಿನಿ ರಜನೀಶ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ.
* ಎಂ.ಎಸ್.ರವಿಶಂಕರ್ :ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಕಾರ್ಯದರ್ಶಿ
* ಅಂಜುಮ್ ಫರ್ವೇಝ್ : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲುಎಸ್‌ಎಸ್‌ಬಿ) ಅಧ್ಯಕ್ಷ,
* ರಶ್ಮಿ ವಿ.ಮಹೇಶ್: ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತೆ.[ದಕ್ಷ ಅಧಿಕಾರಿ ರಶ್ಮಿಗೆ ವರ್ಗಾವಣೆ ಶಿಕ್ಷೆ]

* ಡಾ.ಏಕ್‌ರೂಪ್ ಕೌರ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವ್ಯವಸ್ಥಾಪಕ ನಿರ್ದೇಶಕಿ.
* ವಿ.ಶಂಕರ್: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ
* ಎನ್.ಎಂ.ಪನಳಿ : ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
* ಮೀರ್ ಅನೀಸ್ ಅಹ್ಮದ್ : ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ. [ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿ]
* ನೀಲಾ ಮಂಜುನಾಥ್: ರಾಜ್ಯ ರೇಷ್ಮೆ ಕೈಗಾರಿಕಾ ನಿಗಮ(ಕೆಎಸ್‌ಐಸಿ)ದ ವ್ಯವಸ್ಥಾಪಕ ನಿರ್ದೇಶಕಿ
* ಎಸ್.ಎ.ಜೀಲಾನಿ : ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ (ಕೆಎಸ್‌ಎಂಬಿಎಲ್)ಯ ವ್ಯವಸ್ಥಾಪಕ ನಿರ್ದೇಶಕ
* ಸಲ್ಮಾ ಕೆ.ಫಾಹಿಮ್ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ
* ಡಾ.ಜಿ.ಸಿ.ಪ್ರಕಾಶ್ :ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ.
* ಪಲ್ಲವಿ ಆಕೃತಿ : ಮುಜುರಾಯಿ ಇಲಾಖೆ ಆಯುಕ್ತೆ ಹಾಗೂ ಕಂದಾಯ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ
* ಎಸ್.ಶಶಿಕಾಂತ್ ಸೆಂಥಿಲ್ : ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ
* ಕೃಷ್ಣಾ ಬಾಜ್‌ಪೈ : ಇಡಿಸಿಎಸ್ ಹಾಗೂ ಡಿಪಿಎಆರ್(ಇ-ಆಡಳಿತ) ನಿರ್ದೇಶಕ
* ಬಿ.ಬಿ.ಕಾವೇರಿ : ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.
* ಸುಷ್ಮಾ ಗೋಡ್ಬೋಲೆ :ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಹಾಗೂ ರಾಜ್ಯ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯಕಾರಿ ನಿರ್ದೇಶಕಿ
* ಎಸ್.ಬಿ. ಶೆಟ್ಟಣ್ಣನವರ್ : ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* ಷಡಕ್ಷರಿ ಸ್ವಾಮಿ : ತೋಟಗಾರಿಕೆ ಇಲಾಖೆಯ ನಿರ್ದೇಶಕ
* ಎಸ್.ಬಿ. ಬೊಮ್ಮನ ಹಳ್ಳಿ : ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
* ಬಿ.ರಾಮು : ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ.












Click it and Unblock the Notifications