ಕಲಬುರಗಿ ದಕ್ಷಿಣ ಕ್ಷೇತ್ರ : ಟಿಕೆಟ್‌ಗೆ ಎಲ್ಲಾ ಪಕ್ಷದಲ್ಲೂ ಪೈಪೋಟಿ!
ಕಲಬುರಗಿ, ಜನವರಿ 29 : ಕಲಬುರಗಿ ದಕ್ಷಿಣ ಕ್ಷೇತ್ರದ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ. ಎಲ್ಲಾ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ದತ್ತಾತ್ರೇಯ ಸಿ.ಪಾಟೀಲ್ ರೇವುರ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಟಿಕೆಟ್‌ಗೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಪ್ರತಿ ಪಕ್ಷದಲ್ಲಿಯೂ ಎರಡಕ್ಕಿಂತಲೂ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಆದ್ದರಿಂದ, ಟಿಕೆಟ್ ಯಾರಿಗೆ ಎಂಬುದು ಕುತೂಹಲ ಕ್ಷೇತ್ರದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆ ಹಲವು ಗೊಂದಲ, ಗಲಾಟೆಗಳ ನಡುವೆ ಪೂರ್ಣಗೊಂಡಿದೆ.
ಯಾತ್ರೆ ಮುಗಿದ ಬಳಿಕ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಜಿಲ್ಲೆಯಿದು. ಹಿಂದೆ ಜೆಡಿಎಸ್‍ಗೆ ಕಲಬುರಗಿ ದಕ್ಷಿಣ ಕ್ಷೇತ್ರ ನೆಲೆ ಕಲ್ಪಿಸಿತ್ತು. ಆದ್ದರಿಂದ, ಜೆಡಿಎಸ್ ಸಹ ಕ್ಷೇತ್ರದಲ್ಲಿ ಗೆಲ್ಲಲು ತಂತ್ರ ರೂಪಿಸುತ್ತಿದೆ.
2013ರ ಚುನಾವಣೆಯಲ್ಲಿ ದತ್ತಾತ್ರೇಯ ಸಿ.ಪಾಟೀಲ್ ರೇವೂರ್ 36,850 ಮತಗಳನ್ನು ಪಡೆದು ಗೆದ್ದಿದ್ದರು. ಜೆಡಿಎಸ್‌ನ ಶಶಿಲ್ ನಮೋಶಿ 26,880 ಮತ, ಕಾಂಗ್ರೆಸ್‌ನ ಕೈಲೇಶ್ ವಿರೇಂದ್ರ ಪಾಟೀಲ್ 22,074 ಮತ ಪಡೆದಿದ್ದರು. ವಿವರಗಳು ಚಿತ್ರಗಳಲ್ಲಿವೆ..

ಹಾಲಿ ಶಾಸಕರ ಸ್ಪರ್ಧೆ ಖಚಿತ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಯಾರಿಗೆ ಟಿಕೆಟ್ ಕಾದು ನೋಡಬೇಕು.

ಬಿಜೆಪಿ ಸೇರಬೇಕಾಗಿತ್ತು
ಶ್ರೀ ಗುರು ವಿದ್ಯಾಪೀಠದ ಸಂಸ್ಥಾಪಕ ಹಾಗೂ ಸಮಾಜ ಸೇವಕ ಬಸವರಾಜ ದಿಗ್ಗಾವಿ ಅವರು ಕೂಡ ಬಿಜೆಪಿಗೆ ಸೇರ್ಪಡೆ ಯಾಗಬೇಕಿತ್ತು. ಡಿಸೆಂಬರ್ 9ರಂದು ಕಲಬುರಗಿಯಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಅವರು ಬಿಜೆಪಿ ಸೇರ್ಪಡೆಗೆ ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಸೇರ್ಪಡೆಯನ್ನು ಮುಂದೂಡುವಂತೆ ಪಕ್ಷದ ಕೆಲವು ನಾಯಕರು ಒತ್ತಡ ಹೇರಿದ್ದಾರೆ ಎಂಬುದು ಹೊಸ ಸುದ್ದಿ.

ಕಾಂಗ್ರೆಸ್‌ನಲ್ಲೂ ಆಕಾಂಕ್ಷಿಗಳು
ಕಾಂಗ್ರೆಸ್‍ನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶರಣು ಮೋದಿ ಅವರು ಟಿಕೆಟ್ ಆಕಾಂಕ್ಷಿಗಳು.

ದಿಲೀಪ್ ಪಾಟೀಲ್ ಹೆಸರು
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ್ ಪಾಟೀಲ್ ಹೆಸರು ಟಿಕೆಟ್‌ಗಾಗಿ ಮುಂಚೂಣಿಯಲ್ಲಿ ಕೇಳಿಬರುತ್ತಿವೆ.

ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು
ಹಾಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ತಾಯಿ ಅರುಣಾ ಪಾಟೀಲ್ ಈ ಹಿಂದೆ ಕ್ಷೇತ್ರದಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದ್ದರಿಂದ, ಜೆಡಿಎಸ್ ಸಹ ಕ್ಷೇತ್ರವನ್ನು ಗೆಲ್ಲಬೇಕು ಎಂದು ಪ್ರಯತ್ನ ನಡೆಸಿದೆ.

ಕೃಷ್ಣಾ ರೆಡ್ಡಿ ಅವರು ಆಕಾಂಕ್ಷಿ
ಜೆಡಿಎಸ್ ನಾಯಕ ಕೃಷ್ಣಾರೆಡ್ಡಿ ಅವರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಮನೆ-ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ನಿರಂತರವಾಗಿ ನಡೆಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಅಚ್ಚರಿ ನೀಡುವುದಕ್ಕೆ ಮತ್ತೊಂದಿಷ್ಟು ನಾಯಕರು ತೆರೆಮರೆಯಲ್ಲಿ ಪ್ರಯತ್ನ ನಡೆಸಿರುವುದಂತೂ ಸತ್ಯ.











Click it and Unblock the Notifications