ರೈತ ಮಹಿಳೆಯರಿಂದ ಮಣ್ಣಿನ ಗೆಳತಿ ಕೃತಿ ಬಿಡುಗಡೆ
ಬೆಂಗಳೂರು, ಆ. 16: ಮಹಿಳೆ ಮುನ್ನೆಲೆಗೆ ಬಾರದೆ ಕೃಷಿಯಲ್ಲಿ ಕೆಲಸ ಮಾಡುತ್ತ ಬಂದಿದ್ದಾಳೆ. ಅವಳೆಂದೂ ಮಣ್ಣಿಗೆ ಹತ್ತಿರವಾದವಳು. ಹಾಗಾಗಿ ಅವಳು ಮಣ್ಣಿನ ಗೆಳತಿ. ಹೀಗೆ ಮಣ್ಣಿನೊಂದಿಗೆ ಸಖ್ಯ ಬೆಳೆಸಿದ 38 ಸಾಧಕಿಯರನ್ನು ಸಂದರ್ಶಿಸಿ ಬರೆದ ಮಣ್ಣಿನ ಗೆಳತಿ ಪುಸ್ತಕವು ರೈತ ಮಹಿಳೆಯರಿಂದ ಆಗಸ್ಟ್ 16 ಸಂಜೆ ಫೇಸ್ಬುಕ್ ಲೈವ್ ಮೂಲಕ ಬಿಡುಗಡೆ ಮಾಡಲಾಗುತ್ತದೆ.
Recommended Video
ವಿಕಾಸ ಪ್ರಕಾಶನ ಪ್ರಕಟಿಸಿರುವ, ಭಾರತಿ ಹೆಗಡೆ ಬರೆದಿರುವ "ಮಣ್ಣಿನ ಗೆಳತಿ" ಪುಸ್ತಕ face book live ನಲ್ಲಿ ಬಿಡುಗಡೆ.
ಪುಸ್ತಕ ಬಿಡುಗಡೆ:
ರೈತ ಮಹಿಳೆಯರಾದ ಅಕ್ಕಮ್ಮ, ಮೀನಾಕ್ಷಿ ಭಟ್ಟ ಅವರಿಂದ
ಉಪಸ್ಥಿತಿ:
ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತ
ಆರ್ ಪೂರ್ಣಿಮಾ, ಪ್ರಕಾಶಕಿ, ಪತ್ರಕರ್ತೆ
ಭಾರತಿ ಹೆಗಡೆ, ಲೇಖಕಿ.

ಪ್ರಕಾಶಕಿ ಆರ್ ಪೂರ್ಣಿಮಾ ಅವರು ಪುಸ್ತಕದ ಬಗ್ಗೆ:
ಹೆಣ್ಣಿಗೂ ಮಣ್ಣಿಗೂ ಹೊನ್ನಿನ ಸಂಬಂಧವಿದೆ. ಕೃಷಿ ಎಂದೊಡನೆ ಪುರುಷನ ಕೆಲಸ ಎಂದು ಅನ್ನಿಸಿಬಿಡುವುದು ಸಾಮಾನ್ಯ. ಆದರೆ ಕೃಷಿ ಕೆಲಸದ ಎಲ್ಲಾ ಹಂತಗಳಲ್ಲೂ ಹೆಣ್ಣಿನ ಪಾಲು ಇದ್ದೇ ಇರುತ್ತದೆ. ಹಾಗಾಗಿ ಅವಳು ಎಂದೆಂದಿಗೂ ಮಣ್ಣಿನ ಗೆಳತಿ.
ವಿಶೇಷ ಆಸಕ್ತಿಯಿಂದ ಮಣ್ಣಿನ ಸಖ್ಯ ಬೆಳೆಸಿಕೊಂಡ 38 ಸಾಧಕಿಯರನ್ನು ಭೇಟಿ ಮಾಡಿ ಬರೆದಿರುವ ಲೇಖನಗಳ ಸಂಕಲನವೇ "ಮಣ್ಣಿನ ಗೆಳತಿ" - ಇದು ಕನ್ನಡದಲ್ಲಿ ಕೃಷಿ ಮಹಿಳೆಯರನ್ನು ಕುರಿತ ಮೊದಲ ಪುಸ್ತಕ.
ಆಗಸ್ಟ್ 16 ಭಾನುವಾರ ಸಂಜೆ 4 ಗಂಟೆಗೆ ರೈತ ಮಹಿಳೆಯರಾದ ಅಕ್ಕಮ್ಮ ಮತ್ತು ಮೀನಾಕ್ಷಿ ಭಟ್ಟ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಾರೆ. ಕೃಷಿ ಹಿತಚಿಂತಕ ಪತ್ರಕರ್ತ ನಾಗೇಶ್ ಹೆಗಡೆ ಅಲ್ಲಿ ಇರುತ್ತಾರೆ.
ನನ್ನ ಫೇಸ್ ಬುಕ್ ಖಾತೆಯ ಲೈವ್ ಕಾರ್ಯಕ್ರಮದಲ್ಲಿ ನೀವೆಲ್ಲ ಖಂಡಿತ ಭಾಗಿಯಾಗಬೇಕು ಎನ್ನುವುದು
ನಮ್ಮ ಪ್ರೀತಿಯ ಆಹ್ವಾನ.
ನವಕರ್ನಾಟಕ ಮತ್ತು ಇನ್ನಿತರ ಪುಸ್ತಕ ಮಳಿಗೆಗಳಲ್ಲಿ, Navakarnataka online ಮತ್ತು Booksloka online ನಲ್ಲಿ ಈ ಪುಸ್ತಕ ಸಿಗುತ್ತದೆ. (ಪುಟ 192, ಬೆಲೆ ರೂ. 180.)
-
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಯುದ್ಧದ ಬಿಸಿ: ಬೆಂಗಳೂರಿಗೆ ಅರಬ್ ರಾಷ್ಟ್ರಗಳ ವಿಮಾನ ಸಂಚಾರ ಕಡಿತ; ರಾಜ್ಯ ಟ್ರಾವೆಲ್ಸ್ ಮಾಲೀಕರಲ್ಲಿ ಆತಂಕ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
Property Mutation: ಆಸ್ತಿ ನೋಂದಣಿ ನಂತರ ಶೇ.98ರಷ್ಟು ಖಾತೆಗಳು ಸ್ವಯಂ ಚಾಲಿತವಾಗಿ ಬದಲಾವಣೆ: ಸಚಿವ ಕೃಷ್ಣ ಬೈರೇಗೌಡ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Karnataka: ಧಾರ್ಮಿಕ ಮೆರವಣಿಗೆ, ಜಯಂತಿಗಳಲ್ಲಿ DJ ಸದ್ದಿಗೆ ಬ್ರೇಕ್? 'ಐಟಂ ಸಾಂಗ್' ಬ್ಯಾನ್ ಮಾಡಲು ರಾಜ್ಯ ಸರ್ಕಾರ ಒಲವು -
ಲಂಡನ್ ಮೆಟ್ರೋಗಿಂತ ಬೆಂಗಳೂರಿನ 'ನಮ್ಮ ಮೆಟ್ರೋ' ಬೆಸ್ಟ್: Viral ಪೋಸ್ಟ್ನಲ್ಲಿ ಅಚ್ಚರಿಯ ಸತ್ಯ ಬಿಚ್ಚಿಟ್ಟ ಯುವತಿ -
ಉನ್ನತ ಶಿಕ್ಷಣಕ್ಕೆ ಭಾರತದ ಯಾವ ನಗರ ಬೆಸ್ಟ್? QS ರ್ಯಾಂಕಿಂಗ್ ಪಟ್ಟಿಯಲ್ಲಿದೆ ಬೆಂಗಳೂರು ಸೇರಿದಂತೆ 4 ನಗರಗಳ ಹೆಸರು -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ












Click it and Unblock the Notifications