ಮಂಗಳೂರು ರೈಲ್ವೆ ಅಪ್‌ಡೇಟ್: ಇದೇ ವಾರ ವಿಭಾಗೀಯ ಅಧಿಕಾರಿಗಳ ಸಭೆ, ಅ.1ರಿಂದ ಹೊಸ ಕಾರ್ಯವಿಧಾನ

ಮಂಗಳೂರು; ಕೇರಳದ ಪಾಲಕ್ಕಾಡ್ ವಿಭಾಗದಿಂದ ಮಂಗಳೂರು ಸೆಂಟ್ರಲ್ ರೈಲ್ವೆ ಮತ್ತು ಜಂಕ್ಷನ್‌ ನಿಲ್ದಾಣಗಳನ್ನು ಮೈಸೂರು ವಿಭಾಗಕ್ಕೆ ಸೇರಿಸಲಾಗುತ್ತಿದೆ. ಈ ಸಂಬಂಧ ಇದೇ ವಾರದಿಂದ ಮೈಸೂರು ಮತ್ತು ಪಾಲಕ್ಕಾಡ್ ವಿಭಾಗಗಳ ಕಾರ್ಯಾಚರಣೆ, ಜವಾಬ್ದಾರಿ, ಆಸ್ತಿ ವರ್ಗಾವಣೆ ಸಂಬಂಧ ಮಹತ್ವದ ಸಭೆ ಮಂಗಳೂರಿನಲ್ಲಿ ನಡೆಯಲಿದೆ. ಪರಿವರ್ತನೆ ಬಳಿಕ ಮಂಗಳೂರು ಜಂಕ್ಷನ್ ಪ್ರಮುಖ ರೈಲ್ವೆ ಹಬ್ ಆಗಿ ಬದಲಾಗಲಿದೆ.

ಆಗಸ್ಟ್ 21ರಂದು ಕೇಂದ್ರ ರೈಲ್ವೆ ಸಚಿವಾಲಯವು ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ವಿಭಾಗದೊಂದಿಗೆ ಸಂಯೋಜಿಸಲು ನಿರ್ಧರಿಸಿ ಆದೇಶಿಸಿದ ಬೆನ್ನಲ್ಲೆ ನಡೆಯುತ್ತಿರುವ ಎರಡು ವಿಭಾಗಗಳ ಮುಖ್ಯಸ್ಥರ ಸಭೆ ಇದಾಗಿದ್ದು, ಹೆಚ್ಚು ಮಹತ್ವ ಪಡೆದುಕೊಂಡಿದೆ. ಪರಿವರ್ತನೆಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಗಳಾಗಲಿವೆ.

Mangaluru Railway Hub

ಅಕ್ಟೋಬರ್ 1ರಿಂದ ಪ್ರತ್ಯೇಕ ಕಾರ್ಯ ನಿರ್ವಹಣೆ

ಪಾಲಕ್ಕಾಡ್‌ನ ಪ್ರಮುಖ ಕೋಚಿಂಗ್ ಡಿಪೋ ಇದ್ದು, ಸುಮಾರು 17 ಜೋಡಿ ಕೋಚಿಂಗ್‌ಗಳು (ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್) ಸುಮಾರು 450 ಬೋಗಿಗಳನ್ನು ಹೊಂದಿದೆ. ಮೂರು ಪಿಟ್ ಲೈನ್‌ಗಳು ಮತ್ತು ಒಂದು ಸಿಕ್ ಲೈನ್‌ನಲ್ಲಿ ಪ್ರಾಥಮಿಕ ನಿರ್ವಹಣೆಗಳು ಮಂಗಳೂರು ಸೆಂಟ್ರಲ್ ವ್ಯಾಪ್ತಿಗೆ ಬರುತ್ತವೆ. ಅಧಿಕಾರಿಗಳ ಜವಾಬ್ದಾರಿ ಸೇರಿ ಎಲ್ಲ ವಿಧಾನಗಳು ಇನ್ನೊಂದು ವಾರದಲ್ಲಿ ಅಂತಿಮಗೊಳ್ಳುವ ನಿರೀಕ್ಷೆ ಇದೆ. ಮುಂದಿನ ಅಕ್ಟೋಬರ್ 1ರಿಂದ ಪಾಲಕ್ಕಾಡ್, ಮಂಗಳೂರು ಸೆಂಟ್ರಲ್ ನಲ್ಲಿ ಪ್ರತ್ಯೇಕವಾಗಿ ಹೊಸ ಕಾರ್ಯವಿಧಾನಗಳು, ಬದಲಾವಣೆ ಜಾರಿಯಾಗಲಿದೆ. ಕೋಚಿಂಗ್ ಮತ್ತು ಸರಕು ರೈಲುಗಳ ಸುಗಮ ಕಾರ್ಯಾಚರಣೆ ಖಚಿತಪಡಿಸಿಕೊಳ್ಳಲಾಗುತ್ತದೆ ಎಂದು ರೈಲ್ವೆ ವ್ಯವಸ್ಥಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

ಮೈಸೂರು ವಿಭಾಗಕ್ಕೆ ಸೇರ್ಪಡೆಯ ಆದೇಶದಲ್ಲಿ ತಿಳಿಸಿರುವಂತೆ ನೈಋತ್ಯ ರೈಲ್ವೆಯ ಅಧಿಕಾರ ವ್ಯಾಪ್ತಿ ದಕ್ಷಿಣದ ಕಡೆಗೆ ಉಳ್ಳಾಲ ರೈಲು ನಿಲ್ದಾಣದವರೆಗೆ (ಸೇರಿದಂತೆ), ಇಂದಿನ ಪಡೀಲ್‌ನಿಂದ ಮತ್ತು ಉತ್ತರದಲ್ಲಿ ಥೋಕೂರು (ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಕಡೆಗೆ) ವರೆಗೆ ವಿಸ್ತರಣೆಯಾಗಿದೆ. ಮಂಗಳೂರು ರೈಲ್ವೆ ಪ್ರದೇಶ 39 ಕಿ.ಮೀ ಮಾರ್ಗದಲ್ಲಿ ಮೈಸೂರು ವಿಭಾಗದ ವ್ಯಾಪ್ತಿಯು ಉಳ್ಳಾಲದವರೆಗೆ 30 ಕಿ.ಮೀ. ವಿಸ್ತರಣೆ ಆಗಲಿದೆ ಎಂದು ತಿಳಿಸಲಾಗಿದೆ.

ಮಂಗಳೂರು ಸೆಂಟ್ರಲ್ ರೈಲ್ವೆ ಹಬ್: ಸಿಬ್ಬಂದಿ ಬದಲಾವಣೆ ಇಲ್ಲ!

ಮೈಸೂರಿಗೆ ಮಂಗಳೂರು ರೈಲ್ವೆ ಪ್ರದೇಶದ ಸೇರ್ಪಡೆ ಬಳಿಕ ಅಲ್ಲಿನ ಸಿಬ್ಬಂದಿ ಹಾಗೂ ದೈನಂದಿನ ಕಾರ್ಯಾಚರಣೆಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಈಗಿರುವ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಇಂದಿನ ಸಭೆಯಲ್ಲಿ ಯಶಸ್ವಿಯಾಗಿ ಪಾಲಕ್ಕಾಡ್ ನಿಂದ ಮಂಗಳೂರು ಸೆಂಟ್ರಲ್ ಪ್ರದೇಶವನ್ನು ಮೈಸೂರಿಗೆ ಸೇರಿಸಿಕೊಳ್ಳುವುದಷ್ಟೇ ಪ್ರಮುಖವಾಗಿ ಚರ್ಚೆ ಆಗಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ದರಿಂದ ರೈಲ್ವೆ ಸಿಬ್ಬಂದಿಗಳು ಚಿಂತಿಸುವ ಅಗತ್ಯವಿಲ್ಲ, ಸಿಬ್ಬಂದಿ ವರ್ಗಾವಣೆ, ಸ್ಥಳಾಂತರ ಇಲ್ಲ ಎಂಬ ಭರವಸೆ ನೀಡಲಾಗಿದೆ.

ಮಂಗಳೂರು ಪ್ರದೇಶದಲ್ಲಿ ಕಾರ್ಯಾಚರಣೆ, ವಾಣಿಜ್ಯ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಸುಮಾರು 2,000 ಸಿಬ್ಬಂದಿ ಸಕ್ರಿಯವಾಗಿದ್ದಾರೆ. ಅವರು ಎಂದಿನಂತೆ ತಮ್ಮ ಕೆಲಸ ಮುಂದುವರಿಸಲಿದ್ದಾರೆ. ಪರಿವರ್ತನೆ ಬಳಿಕ ಮಂಗಳೂರು ಸೆಂಟ್ರಲ್ ವಿಭಾಗದ ಪ್ರಮುಖ ಕೋಚಿಂಗ್ ಡಿಪೋ ಇರಲಿದೆ. ಪಿಟ್ ಲೈನ್‌ಗಳು, ವಂದೇ ಭಾರತ್ ನಿರ್ವಹಣಾ ಸೌಲಭ್ಯಗಳು, ಸಿಕ್ ಲೈನ್‌ಗಳು ನಿರ್ವಹಣೆ ಮಾಡಲಿದೆ. ಈ ಮೂಲಕ ಪ್ರಮುಖ ರೈಲ್ವೆ ಹಬ್ ಆಗಿ ಬದಲಾಗಲಿದೆ. ಸರಕು ಸಾಗಣೆಯ ಕೇಂದ್ರವಾಗಿ, ಕೇರಳಕ್ಕೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಲಿದೆ. ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಹತ್ತಾರು ರೈಲುಗಳ ನಿಲುಗಡೆ, ಮೂರು ಪ್ಲ್ಯಾಟ್‌ ಫಾರ್ಮ್‌ನಲ್ಲಿ 10 ರೈಲು ಅಲ್ಲಿಂದ ಹೊರಟು/ಅಂತ್ಯಗೊಳ್ಳುವ ರೈಲುಗಳನ್ನು ನಿರ್ವಹಿಸುತ್ತಿದೆ.

ಪಾಲಕ್ಕಾಡ್‌ನ ಪ್ರಮುಖ ಕೋಚಿಂಗ್ ಡಿಪೋ ಹೊಂದಿದ್ದು, ಇಲ್ಲಿ 17 ಜೋಡಿ ಕೋಚಿಂಗ್ (ಪ್ರಯಾಣಿಕ ಮತ್ತು ಎಕ್ಸ್‌ಪ್ರೆಸ್) ಸುಮಾರು 450 ಬೋಗಿಗಳನ್ನು ಮೂರು ಪಿಟ್ ಲೈನ್‌ಗಳು ನಿರ್ವಹಿಸಲಾಗುತ್ತದೆ. ನಿತ್ಯ ಸುಮಾರು 240 ಬೋಗಿಗಳೊಂದಿಗೆ ಸುಮಾರು 20 ರೈಲುಗಳಿಗೆ ಪ್ಲಾಟ್‌ಫಾರ್ಮ್ ರೈಲು ಪರೀಕ್ಷೆ (PFTR) ನಡೆಸಲಾಗುತ್ತದೆ. ರೈಲ್ವೆ ಸಿಬ್ಬಂದಿಗೆ ವಿಶೇಷ ಸೌಲಭ್ಯಗಳು ಇಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+