Property: ಖಾಲಿ ಸೈಟ್‌ನಲ್ಲಿ ಕಸ ಹಾಕಿದ್ರೆ ಹುಷಾರ್: ಮಾಲೀಕರ ಆಸ್ತಿ ವಶಕ್ಕೆ ಪಡೆಯಲು ಜಿಬಿಎ ಪ್ಲ್ಯಾನ್

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಖಡಕ್ ಎಚ್ಚರಿಕೆ ನೀಡಿದರೂ ಅನೇಕ ಖಾಲಿ ಆಸ್ತಿ ಮಾಲೀಕರು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಅವರ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಪಡೆಯುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಎಚ್‌ಎಸ್‌ಆರ್ ಲೇಔಟ್ ನಲ್ಲಿರುವ ಖಾಲಿ ನಿವೇಶನಗಳಲ್ಲಿ ಕಸ ಸುರಿದು ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಸ್ಥಳಗಳ ಸ್ವಚ್ಛತೆಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ. ಈ ಸಂಬಂಧ ಜಿಬಿಎ ಮುಖ್ಯ ಆಯುಕ್ತರು ಅನೈರ್ಮಲ್ಯ ಹೊಂದಿರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಸಂಬಂಧಪಟ್ಟ ಮಾಲೀಕರಿಗೆ ತಿಳಿಸಿ. ಇಲ್ಲವಾದರೆ ಅವರಿಂದ ಆಸ್ತಿ ವಶ ಪಡೆಯಲು ಸೂಚನೆ ನೀಡಿದ್ದಾರೆ.

Bengaluru Empty Plot

ಕಸ ಹಾಕುವವರಿಗೆ ದಂಡ

ಇದೇ ಆಗಸ್ಟ್ 22 ರವರೆಗೂ ನಿಮ್ಮ ಖಾಲಿ ಆಸ್ತಿಗಳಲ್ಲಿರುವ ಕಸ, ತ್ಯಾಜ್ಯ ತೆರವು ಮಾಡುವಂತೆ ಜಿಬಿಎ ಗಡುವು ನೀಡಿತ್ತು. ಈ ಗಡುವು ಮುಗಿದ ಹಿನ್ನೆಲೆಯಲ್ಲಿ ಎಚ್ಎಸ್ಆರ್ ಬಡಾವಣೆಗಳಲ್ಲಿ ಖಾಲಿ ನಿವೇಶನಗಳನ್ನು ಆಯುಕ್ತರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ಮುನಿಯಪ್ಪ ಕಾಂಪ್ಲೆಕ್ಸ್ ಸಮೀಪವಿರುವ ಖಾಲಿ ನಿವೇಶನಗಳಿಗೆ ಭೇಟಿ ನೀಡಿದ ವೇಳೆ ಖಾಸಗಿ ನಿವೇಶನಗಳಲ್ಲಿ ಕಸ ಎಸೆದು ಅನೈರ್ಮಲ್ಯ ಉಂಟು ಮಾಡಲಾಗಿದೆ. ಇದನ್ನು ಗಮನಿಸಿದ ಆಯುಕ್ತರು, ಕಸ ಹಾಕುವವರಿಗೆ ಹೆಚ್ಚಿನ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸೈಟ್ ಮಾಲೀಕರಿಗೆ ನೋಟಿಸ್

ಖಾಲಿ ನಿವೇಶನಗಳ ಸ್ವಚ್ಛತೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವಂತಹ ಮಾಲೀಕರಿಗೆ ತಕ್ಷಣವೇ ನೋಟಿಸ್ ಜಾರಿಗೊಳಿಸಿ, ಸ್ವಂತ ಖರ್ಚಿನಲ್ಲಿ ತ್ಯಾಜ್ಯ ತೆರವುಗೊಳಿಸಿ ಖಾಲಿ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ. ಈ ಸೂಚನೆ ಪಾಲಿಸದಿದ್ದರೆ, ಅನೈರ್ಮಲ್ಯ ಹೊಂದಿರುವ ನಿವೇಶನಗಳನ್ನು ಪಾಲಿಕೆ ವಶಕ್ಕೆ ಪಡೆಯುವುದಾಗಿ ಎಚ್ಚರಿಕೆ ನೋಟಿಸ್ ನೀಡುವಂತೆ ಹೇಳಿದರು. ಅದಾದ ನಂತರವೂ ನಿಗದಿತ ಅವಧಿಯೊಳಗೆ ನಿವೇಶನಗಳನ್ನು ಸ್ವಚ್ಛಗೊಳಿಸದಿದ್ದರೆ, ಅಂತಹ ಖಾಲಿ ನಿವೇಶನಗಳನ್ನು ಪಾಲಿಕೆಯ ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆಯ ಸೂಚನಾ ಫಲಕಗಳನ್ನು ಆ ಜಾಗದಲ್ಲಿ ಹಾಕುವಂತೆ ತಿಳಿಸಿದರು.

₹1,700 ಕೋಟಿ ವೆಚ್ಚದ ವೈಟ್ ಟಾಪಿಂಗ್ ಎಲ್ಲಿಗೆ ಬಂತು?

ಜಿಬಿಎ ವ್ಯಾಪ್ತಿಯಲ್ಲಿ 1,700 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಬವಾದ ವೈಟ್ ಟಾಪಿಂಗ್ ಕಾಮಗಾರಿ ಶೇ. 51ರಷ್ಟು ಪೂರ್ಣವಾಗಿದೆ. ಉಳಿದ ಬಾಕಿ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು. ಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎನ್.ಡಿ.ಎಂ.ಎಫ್. ಅಡಿ 237.25 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 20 ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಶೇ. 55ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ ಕಾಮಗಾರಿಗಳನ್ನು ಇದೇ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು. ನಗರದಲ್ಲಿ 2,000 ಕೋಟಿ ರೂ. ವರ್ಲ್ಡ್ ಬ್ಯಾಂಕ್ ಅನುದಾನದಲ್ಲಿ ಒಟ್ಟು 16 ಪ್ಯಾಕೇಜ್‌ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 15 ಪ್ಯಾಕೇಜ್‌ಗಳಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದೆ. ಇದುವರೆಗೆ ಶೇ. 13ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+