ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಪ್ರತಿನಿಧಿಯಾಗಿ ಡಾ.ಶಿವಶರಣ್ ಶೆಟ್ಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 28: ಮುಂದಿನ 5 ವರ್ಷಗಳ ಅವಧಿಗೆ ದೇಶದ ಪ್ರತಿಷ್ಠಿತ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಕರ್ನಾಟಕ ರಾಜ್ಯ ಪ್ರತಿನಿಧಿಯಾಗಿ ಇಂಡಿಯನ್ ಡೆಂಟಲ್ ಎಸೋಸಿಯೇಷನ್ ಕೇಂದ್ರ ಸಮಿತಿ ಸದಸ್ಯ ಡಾ. ಶಿವಶರಣ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ದಂತ ವೈದ್ಯರಾಗಿರುವ ಇವರು ಪ್ರಸ್ತುತ ಪ್ರೇಮಕಾಂತಿ ಎಜ್ಯುಕೇಶನ್ ಟ್ರಸ್ಟ್ ನ ನಿರ್ದೇಶಕರಾಗಿ, ನಮ್ಮ ಟಿ.ವಿ. ವಾಹಿನಿಯ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.[ಝಾಕೀರ್ ನಾಯ್ಕ್ ಮಂಗಳೂರು ಪ್ರವೇಶಕ್ಕೆ ನಿಷೇಧ]

Dr Shivasharan Shetty

50 ಕ್ಕೂ ಹೆಚ್ಚು ಐಪಿಎಸ್,ಐಎಎಸ್ ಅಧಿಕಾರಿಗಳ ವರ್ಗಾವಣೆ

ಉಡುಪಿ, ಡಿಸೆಂಬರ್,28: ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿದ್ದು, ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳು ವರ್ಗಾವಣೆಯಾಗುವ ಸಾಧ್ಯತೆ ಇದೆ.

ಡಿ.31ರ ಗುರುವಾರ ಸಂಜೆಯ ವೇಳೆಗೆ ವರ್ಗಾವಣೆ ಪಟ್ಟಿ ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇವುಗಳಲ್ಲಿ 15 ಐಪಿ ಎಸ್ ಅಧಿಕಾರಿಗಳ ವರ್ಗಾವಣೆಯಾಗಲಿದ್ದು, ಲೋಕಾಯುಕ್ತ ಸ್ಥಾನಕ್ಕೆ ಎಸ್.ಪಿ. ಲಾಬೂರಾಮ್ ನೇಮಕವಾಗಲಿದ್ದು, ಅವರ ಸ್ಥಾನದಲ್ಲಿ ಉಡುಪಿ ಎಸ್.ಪಿ. ಅಣ್ಣಾಮಲೈ ಯವರನ್ನು ನೇಮಿಸಬಹುದೆಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.[ಮಂಗಳೂರಲ್ಲಿ ಡಿ. 30ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru Dr Shivasharan Shetty indicate to Karnataka in Dental council of India. He is director of Premakanthi Education Trust and administrater director of Namma TV Mangaluru. More than 50 IAS, IPS officials transfer to as coming days.
Please Wait while comments are loading...