ಸೆ.20ರ ತನಕ ಬೆಂಗಳೂರು-ಮಂಗಳೂರು ರೈಲು ಸಂಚಾರವಿಲ್ಲ

Recommended Video

      Mangaluru : ಬೆಂಗಳೂರು ನಡುವಿನ ರೈಲು ಸಂಚಾರ ಸೆಪ್ಟೆಂಬರ್ 20ರ ತನಕ ಬಂದ್ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 13 : ಮಂಗಳೂರು-ಬೆಂಗಳೂರು ರೈಲು ಸೇವೆಯನ್ನು ಸೆ.20ರ ತನಕ ನಿರ್ಬಂಧಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

      ಸಕಲೇಶಪುರ ಮತ್ತು ಸುಬ್ರಮಣ್ಯ ನಡುವೆ ರೈಲ್ವೆ ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಬೇಕಾದ ಕಾರಣ ರೈಲು ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ರೈಲ್ವೆ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.

      ಆಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆ, ಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು ಮಾರ್ಗಕ್ಕೆ ಹಾನಿಯಾಗಿತ್ತು. ಸಕಲೇಶಪುರ-ಸುಬ್ರಮಣ್ಯ ನಡುವಿನ 57 ಕಿ.ಮೀ.ಮಾರ್ಗದಲ್ಲಿ 67 ಕಡೆ ಮಣ್ಣು ಮತ್ತು ಕಲ್ಲು ಕುಸಿದುಬಿದ್ದಿತ್ತು.

      Mangaluru-Bengaluru train service suspended till Sep 20

      ಹಲವು ಕಡೆ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸಿ ರೈಲ್ವೆ ಹಳಿಗಳನ್ನು ಸರಿಪಡಿಸಲಾಗಿದೆ. ಇನ್ನೂ ಕೆಲವು ಕಡೆ ಮಣ್ಣನ್ನು ತೆರವುಗೊಳಿಸುವ ಕಾರ್ಯ ಬಾಕಿ ಇದೆ. ಆದ್ದರಿಂದ, ರೈಲ್ವೆ ಸಂಚಾರವನ್ನು ನಿರ್ಬಂಧಿಸಲಾಗಿದೆ.

      ಆಗಸ್ಟ್ 15ರ ಬಳಿಕ ಹಾಸನ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ರೈಲು ಮಾರ್ಗಕ್ಕೆ ಹಾನಿಯಾಗಿತ್ತು. ಸಕಲೇಶಪುರದ ಯಡಕುಮರಿ ರೈಲ್ವೆ ನಿಲ್ದಾಣದಲ್ಲಿ ಹಳಿ ದುರಸ್ಥಿ ಮಾಡಲು ಹೋಗಿದ್ದ ಇಲಾಖೆಯ ನೌಕರರು ಸಿಕ್ಕಿಬಿದ್ದಿದ್ದರು.

      ಗುಡ್ಡ ಕುಸಿತದ ಕಾರಣ ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮಳೆ ಕಡಿಮೆಯಾಗಿದ್ದು, ಮಣ್ಣನ್ನು ತೆರವುಗೊಳಿಸಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+