ಮಂಡ್ಯ : ಸಿಗರೇಟ್ ಸೇದಿದ ಪೇದೆಗೆ ಅಮಾನತು ಶಿಕ್ಷೆ!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮಂಡ್ಯ, ಫೆಬ್ರವರಿ 02 : ಸಿಗರೇಟ್ ಸೇದಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿದ್ದ ಪೇದೆಯನ್ನು ಅಮಾನತು ಮಾಡಲಾಗಿದೆ. ಎಸ್ಪಿಯವರು ಹೊರಡಿಸಿರುವ ಈ ಅಮಾನತು ಆದೇಶ ಧೂಮಪಾನ ಮಾಡುತ್ತಾ, ಕರ್ತವ್ಯಲೋಪ ಎಸಗುವ ಸಿಬ್ಬಂದಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಮಳವಳ್ಳಿ ಪಟ್ಟಣ ಠಾಣೆಯ ಮುಖ್ಯಪೇದೆ ಚಿಕ್ಕಪುಟ್ಟಶೆಟ್ಟಿ ಅವರನ್ನು ಅಮಾನತುಗೊಳಿಸಿ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಶನಿವಾರ ಆದೇಶ ಹೊರಡಿಸಿದ್ದಾರೆ. ಸುಧೀರ್ ಕುಮಾರ್ ರೆಡ್ಡಿ ಅವರ ಈ ಕ್ರಮ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

smoking

ಆಗಿದ್ದೇನು? : ಮುಖ್ಯಪೇದೆ ಚಿಕ್ಕಪುಟ್ಟಶೆಟ್ಟಿಯವರು ಶನಿವಾರ ಕೆಲಸದ ಮೇರೆಗೆ ಎಸ್ಪಿ ಕಚೇರಿಗೆ ತೆರಳಿದ್ದರು. ಕಚೇರಿಗೆ ತೆರಳುವ ಕೆಲವು ಸಮಯ ಮೊದಲು ಸಿಗರೇಟ್ ಸೇದಿದ್ದರು. ಎಸ್ಪಿ ಕಚೇರಿಗೆ ತೆರಳಿದರೂ ಸಿಗರೇಟ್ ವಾಸನೆ ಹಾಗೆ ಇತ್ತು. ಇದನ್ನು ಗಮನಿಸಿದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಚಿಕ್ಕಪುಟ್ಟಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. [ಟೆಕ್ಕಿಗಳ ಕೈಯಿಂದ ಸಿಗರೇಟ್ ಕಿತ್ತುಕೊಂಡ ಸರ್ಕಾರ]

ಇಂದು ದೇಶಾದ್ಯಂತ ಹುತಾತ್ಮರ ದಿನಾಚರಣೆಗಾಗಿ ಗೌರವ ಸಲ್ಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಒಂದು ನಿಮಿಷ ಮೌನಾಚರಣೆ ಮಾಡಿ ಹುತಾತ್ಮರಿಗೆ ಗೌರವ ಸಲ್ಲಿಸುವಂತೆ ಆದೇಶ ಹೊರಡಿಸಿದೆ. ಇಂತಹ ದಿನವೇ ನೀವು ಶಿಸ್ತು ಪಾಲಿಸುವುದಿಲ್ಲವೇ?, ಶಿಸ್ತು ಪಾಲಿಸದ ನೀವು ಸಾರ್ವಜನಿಕವಾಗಿ ಹೇಗೆ ಕಾರ್ಯ ನಿರ್ವಹಣೆ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ. [ತಂಬಾಕು ತ್ಯಜಿಸಿದರೆ ಯಾರಿಗೆ ಲಾಭ? ಯಾರಿಗೆ ನಷ್ಟ?]

ಜವಾಬ್ದಾರಿ ಸ್ಥಾನದಲ್ಲಿರುವ ನೀವು ದುರಭ್ಯಾಸದಲ್ಲಿ ತೊಡಗಿದ್ದೀರಿ. ನಿಮ್ಮನ್ನು ಅಮಾನತು ಮಾಡುತ್ತಿರುವುದಾಗಿ ಹೇಳಿದ ಎಸ್ಪಿ ಅವರು, ಸ್ಥಳದಲ್ಲಿಯೇ ಚಿಕ್ಕಪುಟ್ಟಶೆಟ್ಟಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಎಸ್ಪಿ ಅವರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manday Superintendent of Police (SP) Sudheer Kumar Reddy suspended Malavalli police station head constable Chikkaputta Shetty for smoking cigarette.
Please Wait while comments are loading...