ಮಂಡ್ಯ ಕಾಂಗೈ ಭಿನ್ನಮತ: ಅಭಿಮಾನಿ ಕಾಲು ಮುರಿತ

ಮಂಡ್ಯ, ಏ.5: ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮತ್ತೆ ಭುಗಿಲೆದ್ದಿದೆ. ಜಿಲ್ಲೆಯಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳುವ ಕಾಂಗ್ರೆಸ್‍ನಲ್ಲಿ ಏನೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಅದೂ ಅಭ್ಯರ್ಥಿ ರಮ್ಯಾ ಅವರೆದುರೇ ಈ ಎಡವಟ್ಟುಗಳು ನಡೆದಿವೆ. ಈ ಮಧ್ಯೆ, ಅಂಬರೀಷ್ ಅಂಕಲ್ ಪ್ರಚಾರಕ್ಕೆ ಬರುವುದು ಗ್ಯಾರಂಟಿ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಂಸದೆ ರಮ್ಯಾ ಅವರು ಇಂದು ಮಂಡ್ಯ ತಾಲೂಕಿನ ಬೇಲೂರು ಗ್ರಾಮದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಪ್ರಚಾರ ನಡೆಸುತ್ತಿದ್ದರು.

ರವೀಂದ್ರ ಶ್ರೀಕಂಠಯ್ಯ ವರ್ಸಸ್ ಲಿಂಗರಾಜು

ರವೀಂದ್ರ ಶ್ರೀಕಂಠಯ್ಯ ವರ್ಸಸ್ ಲಿಂಗರಾಜು

ಆ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರು ರಮ್ಯಾ ಅವರಿಗೆ ಪ್ರಚಾರದಲ್ಲಿ ಸಾಥ್ ನೀಡಿದ್ದರು. ಆದರೆ ಅದೇ ವೇಳೆ ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್ ಎಲ್ ಲಿಂಗರಾಜು ಅವರೂ ಪ್ರಚಾರದ ವಾಹನವನ್ನು ಹತ್ತಲು ಪ್ರಯತ್ನಿಸಿದರು.

ಲಿಂಗರಾಜುರನ್ನು ಕೆಳಕ್ಕೆ ತಳ್ಳಿದ ಶ್ರೀಕಂಠಯ್ಯ

ಲಿಂಗರಾಜುರನ್ನು ಕೆಳಕ್ಕೆ ತಳ್ಳಿದ ಶ್ರೀಕಂಠಯ್ಯ

ತಕ್ಷಣ ರವೀಂದ್ರ ಶ್ರೀಕಂಠಯ್ಯ ಅವರು ಯಾರೂ ವಾಹನವನ್ನು ಹತ್ತ ಬಾರದು ಎಂದು ಲಿಂಗರಾಜು ಅವರನ್ನು ಕೆಳಕ್ಕೆ ತಳ್ಳಿದ್ದಾರೆ. ಈ ಸಂದರ್ಭ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ಪ್ರಾರಂಭವಾಗಿದೆ.

ಲಿಂಗರಾಜುಗೆ ಪಕ್ಕದಲ್ಲೇ ನಿಂತುಕೊಳ್ಳುವಂತೆ ಸೂಚಿಸಿದ ರಮ್ಯಾ

ಲಿಂಗರಾಜುಗೆ ಪಕ್ಕದಲ್ಲೇ ನಿಂತುಕೊಳ್ಳುವಂತೆ ಸೂಚಿಸಿದ ರಮ್ಯಾ

ಸುಮಾರು 20 ನಿಮಿಷಗಳು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೇನು ಪರಿಸ್ಥಿತಿ ಕೈಮೀರುತ್ತಿದೆ ಅನ್ನುವಾಗ ಮಧ್ಯೆ ಪ್ರವೇಶಿಸಿದ ಹಿರಿಯ ಮುಖಂಡರು ಹಾಗೂ ಜಿಲ್ಲಾಧ್ಯಕ್ಷ ಎಂಎಸ್ ಆತ್ಮಾನಂದ ಅವರು ಇಬ್ಬರನ್ನೂ ಸಮಾಧಾನಪಡಿಸಿದರು. ಇದರಿಂದ ತೀವ್ರ ಮುಜುಗರಕ್ಕೀಡಾದ ರಮ್ಯಾ ಸಹ ಲಿಂಗರಾಜು ಅವರನ್ನು ಸಮಧಾನಪಡಿಸಿ, ತಮ್ಮ ಪಕ್ಕದಲ್ಲೇ ನಿಂತುಕೊಳ್ಳುವಂತೆ ಸೂಚಿಸಿದರು.

ಪ್ರಚಾರದ ವಾಹನ ಡಿಕ್ಕಿಯಾಗಿ ಅವಾಂತರ

ಪ್ರಚಾರದ ವಾಹನ ಡಿಕ್ಕಿಯಾಗಿ ಅವಾಂತರ

ಬಳಿಕ, ಪ್ರಚಾರ ಶಾಂತಿಯುತವಾಗಿ ಮುಂದುವರಿಯತೊಡಗಿತು. ಆಗಲೇ, ರಸ್ತೆ ಬದಿ ನಿಂತಿದ್ದ ಗ್ರಾಮದ ಶ್ರೀನಿವಾಸ್ ಎಂಬುವವರಿಗೆ ಪ್ರಚಾರದ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ರಮ್ಯಾ ಸಹ ಗಾಯಾಳುವನ್ನು ವಿಚಾರಿಸಿಕೊಂಡರು.

ಗಿರೀಶ್ ಕಾರ್ನಾಡ್, ಮರುಳಸಿದ್ದಯ್ಯ ಪ್ರಚಾರಕ್ಕೆ -ರಮ್ಯಾ

ಗಿರೀಶ್ ಕಾರ್ನಾಡ್, ಮರುಳಸಿದ್ದಯ್ಯ ಪ್ರಚಾರಕ್ಕೆ -ರಮ್ಯಾ

ಮತ್ತೆ ಪ್ರಚಾರ ಪ್ರಾರಂಭವಾಯಿತು. ಮಧ್ಯೆ, ಮಾಧ್ಯಮದವರ ಜತೆ ಮಾತನಾಡಿದ ಸಂಸದೆ ರಮ್ಯಾ ಅವರು ಇಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್, ಮರುಳಸಿದ್ದಯ್ಯ ಸೇರಿದಂತೆ ಹಲವಾರು ಹಿರಿಯ ಸಾಹಿತಿಗಳು ಪ್ರಚಾರಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಅಂಬರೀಷ್ ಅಂಕಲ್ ಪ್ರಚಾರಕ್ಕೆ ಬರ್ತಾರೆ- ರಮ್ಯಾ

ಅಂಬರೀಷ್ ಅಂಕಲ್ ಪ್ರಚಾರಕ್ಕೆ ಬರ್ತಾರೆ- ರಮ್ಯಾ

ತಮ್ಮ ಪರವಾಗಿ ಅಂಬರೀಷ್ ಅಂಕಲ್ ಅವರು ಪ್ರಚಾರ ಕಾರ್ಯಕ್ಕೆ ಬರುತ್ತಿದ್ದು, ಏಪ್ರಿಲ್ 14ರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಟಿ/ ಸಂಸದೆ ರಮ್ಯಾ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+