ಜಮ್ಮು: ಮಂಡ್ಯ ಯೋಧ ದಂಪತಿ ಆತ್ಮಹತ್ಯೆ

Jammu BSF drill inspector Prasanna from Mandya commit suicide alongwith wife
ಜಮ್ಮು, ಫೆ.20: ಗಡಿ ಭದ್ರತಾ ಪಡೆಯಲ್ಲಿ (ಬಿಎಸ್ಎಫ್) ಸೇವೆ ಸಲ್ಲಿಸುತ್ತಿದ್ದ ಯುವ ಅಧಿಕಾರಿಯೊಬ್ಬರು ಪತ್ನಿ ಜತೆ ಜಮ್ಮುವಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಡ್ಯ ಮೂಲದ ಈ ದಂಪತಿಗೆ ಒಂದೂವರೆ ವರ್ಷದ ಹೆಣ್ಣುಮಗುವಿದೆ.

ಮಂಡ್ಯದ ಮದ್ದೂರು ತಾಲೂಕಿನ ಮಾದರಹಳ್ಳಿಯ ಪ್ರಸನ್ನ (30) ಮತ್ತು ಆತನ ಪತ್ನಿ ಸಾಧನಾ (28) ಮಂಗಳವಾರ ಜಮ್ಮುವಿನಲ್ಲಿ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಿಳಿದುಬಂದಿಲ್ಲ. ಪ್ರಸನ್ನ 2002ರಲ್ಲಿ ಬಿಎಸ್ಎಫ್ ಗೆ ಸೇರ್ಪಡೆಗೊಂಡಿದ್ದರು.

ಪ್ರಸ್ತುತ, ಡ್ರಿಲ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸನ್ನ ಮತ್ತು ಸಾಧನಾ ಪ್ರೀತಿಸಿ, ಮದುವೆಯಾಗಿದ್ದು ಅನ್ಯೋನ್ಯವಾಗಿದ್ದರು. ಸಾಧನಾ, ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಿಪುರದವರು. ಯಾಕೆ ಹೀಂಗೆ ಮಾಡಿಕೊಂಡರೋ ತಿಳಿಯದಾಗಿದೆ ಎಂದು ಪ್ರಸನ್ನ ಬಂಧುಗಳು ತಿಳಿಸಿದ್ದಾರೆ. ಪ್ರಸನ್ನ ಅವರ ಅಣ್ಣ ಜಗದೀಶ್ ಸಹ ಬಿಎಸ್ಎಫ್ ಗೆ ಸೇರಿದ್ದರು. ಆದರೆ 2 ವರ್ಷಗಳ ಹಿಂದೆ ಮಂಡ್ಯದಲ್ಲಿ ರಸ್ತೆ ಅಪಘಾತವೊಂದರಲ್ಲಿ ಅಸುನೀಗಿದ್ದರು.

BSF ಅಧಿಕಾರಿಗಳು ಪ್ರಸನ್ನ ಕುಟುಂಬದವರನ್ನೂ ಫೋನ್ ಮೂಲಕ ಸಂಪರ್ಕಸಿದ್ದು, ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ಗುರುವಾರ ಮೃತ ದೇಹಗಳನ್ನು ಊರಿಗೆ ತರುವ ಸಾಧ್ಯತೆಯಿದೆ.

ತುಮಕೂರು ವರದಿ: ಕರ್ತವ್ಯನಿರತ ಪೇದೆಯೊಬ್ಬರು ನಿನ್ನೆ ರಾತ್ರಿ ಪೊಲೀಸ್ ಠಾಣೆಯೆದುರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+