ಬಾಲ್ಯ ವಿವಾಹ: ಶಾಲೆ ಬಿಟ್ಟ ಬಾಲಕಿಯರ ಮೇಲೆ ಸರ್ಕಾರ ನಿಗಾ

ಬೆಂಗಳೂರು, ನವೆಂಬರ್ 26: ಸಾವಿರಾರು ಮಂದಿ ಅನೇಕ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿಯುತ್ತಾರೆ. ಅಂತಹ ಮಕ್ಕಳನ್ನು ಪುನಃ ಶಾಲೆಯೆಡೆಗೆ ಕರೆತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.

ಆದರೆ ಶಾಲೆಯಿಂದ ಹೊರಗುಳಿದಿರುವ ಬಾಲಕರು ಕೂಲಿ ಕೆಲಸ ಇನ್ನಿತರೆ ಕೆಲಸಗಳಿಗೆ ತೆರಳುತ್ತಾರೆ ಹಾಗಾದರೆ ಆ ಪುಟ್ಟ ಹೆಣ್ಣುಮಕ್ಕಳು ಏನು ಮಾಡುತ್ತಾರೆ ಎಂದು ಕೆಲವರು ಪ್ರಶ್ನಿಸಬಹುದು ಅಂತಹ ಮಕ್ಕಳನ್ನು ಪೋಷಕರು ಬಾಲ್ಯ ವಿವಾಹ ಮಾಡಿ ಮನೆಯಿಂದ ಕಳುಹಿಸುವ ಸಾಕಷ್ಟು ಘಟನೆಗಳು ಬೆಳಕಿಗೆ ಬರುತ್ತಿವೆ.

ಹಾಗಾಗಿ ಇಂತಹ ಬಾಲಕಿಯರನ್ನು ರಕ್ಷಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ. ಶಾಲೆಯಿಂದ ಹೊರಗುಳಿದ ಎಲ್ಲ ವಿದ್ಯಾರ್ಥಿನಿಯರ ಮಾಹಿತಿಯನ್ನು ಮಕ್ಕಳ ಕಲ್ಯಾಣ ಸಮಿತಿ ಕಡ್ಡಾಯವಾಗಿ ಸಲ್ಲಿಸಲು ಆದೇಶಿಸಿದೆ. ಇದನ್ನು ಪಾಲಿಸಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಿದೆ.

Mandatory to keep inform about drop out girl students

ಯಾವುದೇ ವಿದ್ಯಾರ್ಥಿನಿ ಪೂರ್ವ ಸೂಚನೆಯಿಲ್ಲದೆ ದೀರ್ಘಕಾಲ ಗೈರು ಹಾಜರಾಗುವುದನ್ನು ಗಮನಿಸಲು ಸೂಚಿಸಲಾಗಿದೆ. ಅವರು ಎಲ್ಲಿದ್ದಾರೆ ಎಂಬುದು ಪತ್ತೆ ಹಚ್ಚಲು ಸಾಧ್ವಾಗದೆ ಇದ್ದರೆ ಶಾಲೆಯ ಮುಖ್ಯಸ್ಥೃಉ ಆಯಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+