• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾನುವಾರ ಮಲೆನಾಡು ಮಿತ್ರವೃಂದದ ಕ್ರೀಡಾಕೂಟ

|

ಬೆಂಗಳೂರು, ಜ.3 : ಮಲೆನಾಡು ಮಿತ್ರವೃಂದ ಆರನೇ ವರ್ಷದ ಮಲೆನಾಡಿಗರ ಕ್ರೀಡಾಕೂಟವನ್ನು ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಜಾಲಹಳ್ಳಿ ಬಳಿಯ ಎಚ್‌ಎಂಟಿ ಆಟದ ಮೈದಾನದಲ್ಲಿ ಜ.3ರ ಭಾನುವಾರ ಈ ಕ್ರೀಡಾಕೂಟ ನಡೆಯಲಿದೆ.

ಎಚ್‌ಎಂಟಿ ಆಟದ ಮೈದಾನದಲ್ಲಿ ಭಾನುವಾರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿವಿಧ ಕ್ರೀಡಾಕೂಟಗಳು ನಡೆಯಲಿವೆ ಎಂದು ಮಲೆನಾಡು ಮಿತ್ರವೃಂದದ ಕಾರ್ಯದರ್ಶಿ ಸಂದೇಶ್ ಗೌಡ ಹೇಳಿದ್ದಾರೆ. 5ರಿಂದ 35 ವರ್ಷದ ತನಕ ವಿವಿಧ ವಯೋಮಾನದವರು ಕ್ರೀಡಾಕೂಟದಲ್ಲಿ ಕುಟುಂಬದವರೊಂದಿಗೆ ಪಾಲ್ಗೊಳ್ಳಬಹುದಾಗಿದೆ.

ಆಯಾ ವಯೋಮಾನದವರಿಗೆ ಅನುಗುಣವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರೂ ಬೆಳಗ್ಗೆ 9 ಗಂಟೆಗೆ ಆಟದ ಮೈದಾನದಲ್ಲಿ ಹಾಜರಿಬೇಕೆಂದು ಮನವಿ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ.

ಆಟಗಳು : 50 ಮೀಟರ್ ಮತ್ತು 100 ಮೀಟರ್ ಓಟ, ಲೆಮನ್ ಇನ್ ದ ಸ್ಪೂನ್, ಮ್ಯೂಜಿಕಲ್ ಛೇರ್, ಥ್ರೋ ಬಾಲ್, ಮಡಕೆ ಒಡೆಯುವುದು, ಪಾಸಿಂಗ್ ದ ಬಾಲ್, ವಾಲಿಬಾಲ್, ಸ್ಲೋ ಬೈಕ್ ರೇಸ್ ಮುಂತಾದ ಆಟಗಳನ್ನು ಏರ್ಪಡಿಸಲಾಗಿದೆ.

ಬಿಎಂಟಿಸಿ ಬಸ್ಸಿನ ಮಾರ್ಗ : ಎಚ್‌ಎಂಟಿ ಆಟದ ಮೈದಾನಕ್ಕೆ ಹೋಗಲು ಮೆಜೆಸ್ಟಿಕ್‌ನಿಂದ 273, ಶಿವಾಜಿನಗರದಿಂದ 270 ಹಾಗೂ ಮಾರ್ಕೆಟ್‌ನಿಂದ 275ನೇ ಬಸ್‌ನಲ್ಲಿ ಬಂದು ಎಚ್‌ಎಂಟಿ ಆಡಿಟೋರಿಯಂ ನಿಲ್ದಾಣದಲ್ಲಿ ಇಳಿಯಬೇಕು. ಹೆಚ್ಚಿನ ವಿವರಗಳಿಗೆ ಕೆ.ಸಿ.ಕರುಣಾಕರ 9900111345 ಅಥವಾ ಸಂದೇಶ್‌ಗೌಡ 9945211401 ಅವರನ್ನು ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Malnad Mitra Vrinda invite you and your family and friends on grand celebration of sixth year annual sports meets in Bengaluru On January 4th, At HMT ground Jalahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more