ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಚುಕು ಗೆಳೆಯನ ಸಾವಿನ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ಖರ್ಗೆ

|
Google Oneindia Kannada News

ಬೆಂಗಳೂರು, ಜುಲೈ 27 : "ಕಾಂಗ್ರೆಸ್ ನಲ್ಲಿ ಸುಮಾರು 50 ವರ್ಷಗಳ ಕಾಲ ಜೊತೆಗಿದ್ದ ಗೆಳೆಯ ಧರಂ ಸಿಂಗ್ ಅವರ ನಿಧನದ ಸುದ್ದಿ ಕೇಳಿ ನನಗೆ ಅಣ್ಣನನ್ನು ಕಳೆದುಕೊಂಡಷ್ಟು ನೋವಾಗಿದೆ. ನಾನೇ ಎಷ್ಟೋ ಸಾರಿ ಅವರ ಜತೆ ಜಗಳ ಮಾಡಿಕೊಂಡ್ರೂ, ಮರುದಿನ ಅವರೇ ನನಗೆ ಫೋನ್ ಮಾಡಿ ಸಮಾಧಾನ ಮಾಡುತ್ತಿದ್ದರು" ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದುಃಖವನ್ನು ತೆಡೆದುಕೊಳ್ಳಲಾಗದೆ ಗಳಗಳನೆ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟರು.

ಒಂದೇ ಪಕ್ಷದಲ್ಲಿ ಸುಮಾರು 50 ವರ್ಷಗಳ ವರೆಗೆ ಜೊತೆಯಾಗಿದ್ದ ಆಪ್ತಮಿತ್ರ ಧರಂ ಸಿಂಗ್ ಅವರನ್ನು ಕಳೆದುಕೊಂಡ ದುಃಖ ಉಮ್ಮಳಿಸಿ ಬರುತ್ತಿತ್ತು. ಕಣ್ಣೀರಿಡುತ್ತಲೇ ಕುಚುಕು ಧರಂಸಿಂಗ್ ಅವರಿಗೆ ಶೋಕ ವ್ಯಕ್ತಪಡಿಸಿದರು.

ಮಾಜಿ ಸಿಎಂ ಧರಂ ಸಿಂಗ್ ಅವರ ನಿಧನಕ್ಕೆ ಗಣ್ಯರ ಕಂಬನಿ ಮಾಜಿ ಸಿಎಂ ಧರಂ ಸಿಂಗ್ ಅವರ ನಿಧನಕ್ಕೆ ಗಣ್ಯರ ಕಂಬನಿ

ಹೈದರಾಬಾದ್ ಕರ್ನಾಟಕ ಪ್ರಭಾವಿ ರಾಜಕಾರಣಿಗಳೆಂದೆ ಬಿಂಬಿಸಿಕೊಂಡಿದ್ದ ಧರಂಸಿಗ್ ಹಾಗೂ ಮಲ್ಲಿಕಾರ್ಜನ ಖರ್ಗೆ ಲವ-ಕುಶರೆಂದೇ ಖ್ಯಾತರಾಗಿದ್ದರು. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ, ಹೈದರಾಬಾದ್ ಕರ್ನಾಟಕ ಭಾಗದ ಪ್ರಗತಿಯಲ್ಲಿ ಇವರಿಬ್ಬರ ಸೇವೆ ಅಪಾರ.

ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ

ರಾಜಕಾರಣದಲ್ಲಿ, ಅಧಿಕಾರದಲ್ಲಿ, ವೈಯಕ್ತಿಕವಾಗಿ ಎಲ್ಲಿಯೂ ಕೂಡ ಇವರ ನಡುವೆ ವೈಮನಸ್ಸು ಬಂದಿರಲಿಲ್ಲ. ಇಂದು ಪರಮಾಪ್ತನನ್ನು ಕಳೆದುಕೊಂಡ ದುಃಖವನ್ನು ಖರ್ಗೆ ವ್ಯಕ್ತಪಡಿಸಿದ್ದನ್ನು ನೋಡಿದರೆ ಇವರ ಸ್ನೇಹ ಹೇಗಿತ್ತು ಎಂಬುವುದು ಹೇಳಿಕೊಡುತ್ತದೆ. ಇನ್ನು ಈ ಪರಮಾಪ್ತರ 50 ವರ್ಷಗಳ ರಾಜಕೀಯ ಒಡನಾಟ ಹೇಗಿತ್ತು ಎಂಬುವುದನ್ನು ಮುಂದೆ ಓದಿ

ಲವ-ಕುಶರಂತಿದ್ದ ಖರ್ಗೆ-ಧರಂ

ಲವ-ಕುಶರಂತಿದ್ದ ಖರ್ಗೆ-ಧರಂ

ಸುಮಾರು ಐವತ್ತು ವರ್ಷಗಳ ಕಾಲ ಒಂದೇ ಪಕ್ಷದಲ್ಲಿದ್ದ ಧರಂ ಸಿಂಗ್ ಹಾಗೂ ಮಲ್ಲಿಕಾರ್ಜನ ಖರ್ಗೆ ಹೈಕ ಭಾಗದ ಕ್ಷೇತ್ರಗಳಲ್ಲಿ ಯಾವು ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ತೀರ್ಮಾನಿಸುತ್ತಿದ್ದರು. ಒಂದು ರೀತಿಯಲ್ಲಿ ಈ ಜೋಡಿ ಮೂರನೇ ಅಂಪೈರ್ ನಂತಿತ್ತು.

ಸೋಲಿಲ್ಲದ ಸರದಾರರು

ಸೋಲಿಲ್ಲದ ಸರದಾರರು

ಸುಮಾರು ಐವತ್ತು ವರ್ಷಗಳ ಕಾಲ ಒಂದೇ ಪಕ್ಷದಲ್ಲಿದ್ದುಕೊಂಡು ಜೇವರ್ಗಿ ಹಾಗೂ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರಗಳಿಂದ ಸತತವಾಗಿ ಜಯಗಳಿಸುತ್ತಿದ್ದ ಈ ಧರಂ ಮತ್ತು ಖರ್ಗೆ ಜೋಡಿ ಬೇರೆಯವರಿಗೆ ಅಸೂಯೆ ಮೂಡಿಸುವಂತಿತ್ತು. ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಈ ಇಬ್ಬರ ಗೆಲುವು ಮಾತ್ರ ಎರಡು ಕ್ಷೇತ್ರಗಳಲ್ಲಿ ನಿಶ್ಚಿತವಾಗಿರುತ್ತಿತ್ತು.

371(ಜೆ) ತಿದ್ದುಪಡಿ ತರಲು ಖರ್ಗೆ, ಧರಂ ಪ್ರಯತ್ನ

371(ಜೆ) ತಿದ್ದುಪಡಿ ತರಲು ಖರ್ಗೆ, ಧರಂ ಪ್ರಯತ್ನ

ಉಕ ಭಾಗದ ಪ್ರಬಾವಿ ರಾಜಕಾರಣಿಗಳೆಂದೇ ಗುರುತಿಸಿಕೊಂಡಿರುವು ಖರ್ಗೆ ಹಾಗೂ ಧರ್ಮಸಿಂಗ್ ಅವರು ಸಂಸತ್ತು ಪ್ರವೇಶಿಸಿದ ನಂತರ ಸೋನಿಯಾ ಗಾಂಧಿ ಹಾಗೂ ಅಂದಿನ ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್‌ ಅವರ ಮನವೊಲಿಸಿ 371(ಜೆ) ಕಲಂ ತಿದ್ದುಪಡಿ ತರಲು ಕಾರಣಕರ್ತರಾಗಿದ್ದರು.

ಖರ್ಗೆ 9. ಧರಂ 7 ಬಾರಿ ಸತತ ಗೆಲುವು

ಖರ್ಗೆ 9. ಧರಂ 7 ಬಾರಿ ಸತತ ಗೆಲುವು

ರಾಜಕಾರಣದಲ್ಲಿ ಸೋಲಿಲ್ಲದ ಸರದಾರರು ಎಂದೇ ಖ್ಯಾತಿ ಪಡೆದಿರುವ ಈ ಕುಚುಕು ಜೋಡಿ ಪಕ್ಷ ಅಧಿಕಾರದಲ್ಲಿರಲಿ, ಇಲ್ಲದಿರಲಿ ಈ ಇಬ್ಬರ ಗೆಲುವು ಮಾತ್ರ ಎರಡು ಕ್ಷೇತ್ರಗಳಲ್ಲಿ ನಿಶ್ಚಿತವಾಗಿರುತ್ತಿತ್ತು. ಖರ್ಗೆ ಅವರು ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ 9 ಬಾರಿ ಗೆಲುವು ಸಾಧಿಸಿದ್ದಾರೆ. ಇನ್ನು ಧರಂ ಸಿಂಗ್ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಸತತ ಏಳು ಬಾರಿ ಗೆದ್ದು ಸೋಲಿಲ್ಲದ ಸರದಾರರು ಎನಿಸಿಕೊಂಡಿದ್ದಾರೆ.

ಹೈಕ ಭಾಗದ ಕಾಂಗ್ರೆಸ್ ಹೈಕಮಾಂಡ್ ಆಗಿದ್ದ ಖರ್ಗೆ, ಧರಂ

ಹೈಕ ಭಾಗದ ಕಾಂಗ್ರೆಸ್ ಹೈಕಮಾಂಡ್ ಆಗಿದ್ದ ಖರ್ಗೆ, ಧರಂ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಏನೇ ಭಿನ್ನಾಭಿಪ್ರಾಯಗಳು ಎದ್ದರೇ ಅವುಗಳಿಗೆ ಖರ್ಗೆ, ಧರಂ ತಮಣಿ ಮಾಡುತ್ತಿದ್ದರು. ಅಷ್ಟೊಂದು ಪ್ರಭಾವಿಗಳಾಗಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೇ ಈ ಜೋಡಿಯನ್ನು ಹೈಕ ಭಾಗದ ಕಾಂಗ್ರೆಸ್ ಹೈಕಮಾಂಡ್ ಎಂದೇ ಹೇಳಬಹುದು.

English summary
Central opposition leader Mallikarjun Kharge express deep condolence over the demise of his close aid Dharam Singh. He rembered his 50 year old friend with tears.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X