ಪೊಲೀಸ್ ಇಲಾಖೆಯಲ್ಲಿ ಭಾರಿ ವರ್ಗಾವಣೆ, ಎಲ್ಲಿಗೆ ಯಾರು?

Posted By:
Subscribe to Oneindia Kannada

ಬೆಂಗಳೂರು, ಜನವರಿ 01: ಕರ್ನಾಟಕ ಸರ್ಕಾರ ಹೊಸ ವರ್ಷದ ಆರಂಭದಲ್ಲೇ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ಎಡಿಜಿಪಿ ದರ್ಜೆಯ ಅಧಿಕಾರಿಗಳೂ ಸೇರಿದಂತೆ 40 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಜತೆಗೆ 7 ಅಧಿಕಾರಿಗಳಿಗೆ ಪದೋನ್ನತಿ ನೀಡಿ, ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಪೊಲೀಸ್ ಇಲಾಖೆಯ ನಾಲ್ಕು ವಲಯಗಳ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪೂರ್ವ ವಲಯಕ್ಕೆ ಎಂ.ಎ. ಸಲೀಂ, ಪಶ್ಚಿಮ ವಲಯಕ್ಕೆ ಪಿ. ಹರಿಶೇಖರನ್, ದಕ್ಷಿಣ ವಲಯಕ್ಕೆ ವಿಪುಲ್ ಕುಮಾರ್, ಈಶಾನ್ಯ ವಲಯಕ್ಕೆ ಅಲೋಕ್ ಕುಮಾರ್ ಅವರನ್ನು ನೇಮಿಸಲಾಗಿದೆ. [ಬೆಂಗಳೂರು ನಗರದ ಹೊಸ ಪೊಲೀಸ್ ಕಮಿಷನರ್]

ಬೆಂಗಳೂರಿಗರಿಗೆ ಹೊಸ ವರ್ಷಕ್ಕೆ ಹೊಸ ಪೊಲೀಸ್ ಆಯುಕ್ತರನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಪ್ರವೀಣ್ ಸೂದ್ ರನ್ನು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.[33 ಐಎಎಸ್ ಅಧಿಕಾರಿಗಳಿಗೆ ಬಡ್ತಿ, 7 ಐಎಫ್ಎಸ್ ಗೆ ವರ್ಗ]

Major reshuffle in Karnataka police as Govt transfers 40 IPS officers

ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
ಪ್ರವೀಣ್ ಸೂದ್- ನಗರ ಪೊಲೀಸ್ ಕಮಿಷನರ್, ಬೆಂಗಳೂರು.
ಕೆ.ವಿ. ಗಗನದೀಪ್-ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳು.
ಎನ್.ಎಸ್. ಮೇಘರಿಕ್-ಎಡಿಜಿಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು.
ಎ.ಎಂ. ಪ್ರಸಾದ್- ಎಡಿಜಿಪಿ, ಸಂವಹನ ಮತ್ತು ಆಧುನೀಕರಣ.

ಆರ್.ಪಿ. ಶರ್ಮ-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ.
ಕಮಲಪಂತ್-ಎಡಿಜಿಪಿ, ಆಡಳಿತ, ಬೆಂಗಳೂರು.
ಭಾಸ್ಕರರಾವ್-ಎಡಿಜಿಪಿ, ಕರ್ನಾಟಕ ಮೀಸಲು ಪೊಲೀಸ್ .
ಪ್ರಶಾಂತ್ ಕುಮಾರ್‌ ಠಾಕೂರ್-ಎಡಿಜಿಪಿ, ಬಿಎಂಟಿಎಫ್‌.

ಎ.ಎಸ್.ಎನ್. ಮೂರ್ತಿ- ಕಮಿಷನರ್‌, ಸಂಚಾರ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು.
ಎಂ.ಎ. ಸಲೀಮ್-ಐಜಿಪಿ, ಪೂರ್ವ ವಲಯ, ದಾವಣಗೆರೆ.
ಕೆ.ಎಸ್.ಆರ್.ಚರಣ ರೆಡ್ಡಿ-ಐಜಿಪಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಬೆಂಗಳೂರು.
ಮಾಲಿನಿ ಕೃಷ್ಣಮೂರ್ತಿ-ಹೆಚ್ಚುವರಿ ಪೊಲೀಸ್ ಕಮಿಷನರ್, ಪಶ್ಚಿಮ ವಿಭಾಗ, ಬೆಂಗಳೂರು ನಗರ.

ಅಲೋಕ್ ಕುಮಾರ್‌-ಐಜಿಪಿ, ಈಶಾನ್ಯ ವಲಯ, ಕಲಬುರ್ಗಿ.
ಜೆ. ಅರುಣ್ ಚಕ್ರವರ್ತಿ-ಐಜಿಪಿ, ಆಂತರಿಕ ಭದ್ರತೆ, ಬೆಂಗಳೂರು.
ಬಿ.ಕೆ. ಸಿಂಗ್-ಐಜಿಪಿ, ತರಬೇತಿ, ಬೆಂಗಳೂರು.
ಪಿ. ಹರಿಶೇಖರನ್-ಐಜಿಪಿ, ಪಶ್ಚಿಮ ವಲಯ, ಮಂಗಳೂರು.

ಕೆ.ವಿ. ಶರತ್ ಚಂದ್ರ-ಐಜಿಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು.
ಎಂ. ನಂಜುಂಡಸ್ವಾಮಿ- ಹೆಚ್ಚುವರಿ ಪೊಲೀಸ್ ಕಮಿಷನರ್(ಆಡಳಿತ), ಬೆಂಗಳೂರು ನಗರ.
ಹೇಮಂತ್ ನಿಂಬಾಳ್ಕರ-ಹೆಚ್ಚುವರಿ ಪೊಲೀಸ್ ಕಮಿಷನರ್, ಪೂರ್ವ ವಿಭಾಗ, ಬೆಂಗಳೂರು ನಗರ.
ಎಸ್. ರವಿ-ಹೆಚ್ಚುವರಿ ಪೊಲೀಸ್ ಆಯುಕ್ತ(ಅಪರಾಧ), ಬೆಂಗಳೂರು ನಗರ.

ಕೆ. ಮಧುಕರ ಶೆಟ್ಟಿ-ನಿರ್ದೇಶಕ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು.
ವಿಪುಲ್ ಕುಮಾರ್-ಐಜಿಪಿ, ದಕ್ಷಿಣ ವಲಯ, ಮೈಸೂರು.
ಡಿ.ರೂಪ-ಡಿಐಜಿ, ಬಂಧೀಖಾನೆ, ಬೆಂಗಳೂರು.
ಎಚ್.ಎಸ್. ರೇವಣ್ಣ-ಡಿಐಜಿ, ರಾಜ್ಯ ಮೀಸಲು ಪೊಲೀಸ್.

ಎನ್. ಸತೀಶ್‌ಕುಮಾರ್-ಡಿಐಜಿ, ಗುಪ್ತಚರ, ಬೆಂಗಳೂರು.
ಬಿ.ಎ. ಮಹೇಶ್-ಡಿಐಜಿ, ನೇಮಕಾತಿ, ಬೆಂಗಳೂರು.
ಡಿ.ಸಿ. ರಾಜಪ್ಪ- ಜಂಟಿ ಪೊಲೀಸ್‌ ಕಮಿಷನರ್‌ , ನಗರ ಸಶಸ್ತ್ರ ಮೀಸಲು ಪಡೆ, ಬೆಂಗಳೂರು .
ಟಿ.ಆರ್. ಸುರೇಶ್-ಡಿಐಜಿ, ಅಗ್ನಿ ಶಾಮಕ ಸೇವೆಗಳು, ಬೆಂಗಳೂರು.

ಎಂ.ಎನ್. ನಾಗರಾಜ್-ಡಿಐಜಿ, ಸಿಐಡಿ, ಬೆಂಗಳೂರು.
ಸಂದೀಪ್ ಪಾಟೀಲ್- ಎಸ್‌ಪಿ, ಗುಪ್ತಚರ, ಬೆಂಗಳೂರು.
ಚಂದ್ರಗುಪ್ತ-ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು.
ಬಿ.ಎಸ್. ಲೋಕೇಶ್ ಕುಮಾರ್‌ -ಎಸ್‌ಪಿ, ಕೆಜಿಎಫ್.

ವೈ.ಎಸ್. ರವಿಕುಮಾರ್-ಎಸ್‌ಪಿ, ಆಂತರಿಕ ಭದ್ರತೆ ವಿಭಾಗ, ಬೆಂಗಳೂರು.
ಸಿ. ವಂಶಿ ಕೃಷ್ಣ-ಎಸ್‌ಪಿ, ಹಾವೇರಿ.
ಬಿ. ರಮೇಶ್-ಎಸ್‌ಪಿ, ರಾಮನಗರ.
ಇಡಾ ಮಾರ್ಟಿನ್ -ಎಸ್‌ಪಿ, ಯಾದಗಿರಿ,

ವರ್ತಿಕಾ ಕಟಿಯಾರ್-ಎಸ್‌ಪಿ, ವಿಶೇ ಷ ತನಿಖಾ ತಂಡ, ಲೋಕಾಯುಕ್ತ, ಬೆಂಗಳೂರು ನಗರ.
ಕಾರ್ತಿಕ್‌ ರೆಡ್ಡಿ - ಡಿಸಿಪಿ ಆಡಳಿತ, ಬೆಂಗಳೂರು ನಗರ
ವಿನಾಯಕ್ ವಸಂತರಾವ್ ಪಾಟೀಲ್-ಎಸ್‌ಪಿ, ಉತ್ತರಕನ್ನಡ.
ಇಶಾ ಪಂತ್-ಎಸ್‌ಪಿ, ತುಮಕೂರು

ಬಡ್ತಿ ಪಡೆದು, ಅದೇ ಹುದ್ದೆಯಲ್ಲಿ ಮುಂದುವರಿದವರು
ಪಿ.ಎಸ್. ಹರ್ಷ-ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು.
ಲಾಬೂರಾಮ್-ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು.
ವಿಕಾಸಕುಮಾರ್ ವಿಕಾಸ್-ಆಯುಕ್ತ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು.
ಟಿ.ಡಿ. ಪವಾರ್-ಎಸ್‌ಪಿ, ಆಂತರಿಕ ಭದ್ರತೆ, ಬೆಂಗಳೂರು.
ಮಂಜುನಾಥ್ ಅಣ್ಣಿಗೇರಿ -ಎಸ್‌ಪಿ, ವಿಶೇಷಾ ತನಿಖಾ ತಂಡ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು.
ರವಿಕುಮಾರ್ ಎಚ್ ನಾಯ್ಕ್-ಎಸ್‌ಪಿ, ಕರ್ನಾಟಕ ಲೋಕಾಯುಕ್ತ, ಬೆಳಗಾವಿ.
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major reshuffle of the police top brass, chief minister Siddaramaiah has transferred more than 40 IPS officers.
Please Wait while comments are loading...