ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಬದಲಾವಣೆ: ಸಿದ್ದರಾಮಯ್ಯಗೆ ಹಿಂಬಡ್ತಿ?
Recommended Video
ಬೆಂಗಳೂರು, ಜೂನ್ 13: ಸಂಪುಟ ವಿಸ್ತರಣೆ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಸಿದ್ದರಾಮಯ್ಯ ಸುತ್ತಲೇ ಸುತ್ತುತ್ತಿರುವ ರಾಜ್ಯ ಕಾಂಗ್ರೆಸ್ ರಾಜಕೀಯವನ್ನು ಅಂತ್ಯಗೊಳಿಸಿ ಒಗ್ಗಟ್ಟಿನ ಮುಖಂಡತ್ವಕ್ಕೆ ಮಹತ್ವ ನೀಡಲು ಎಐಸಿಸಿ ಚಿಂತಿಸಿದೆ.
ಸಂಪುಟ ವಿಸ್ತರಣೆ ಬಳಿಕ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಂದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರ್ಗಾಯಿಸಲಾಗುತ್ತದೆ. ಖರ್ಗೆ ಅವರು ಕಳೆದ ಚುನಾವಣೆ ಸೋತಿದ್ದು, ಅವರು ರಾಜ್ಯ ರಾಜಕರಾಣದಲ್ಲಿ ಇನ್ನು ಮುಂದೆ ಸಕ್ರಿಯರಾಗಲಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರೇ ಅಧ್ಯಕ್ಷರಾಗಿರುವ ಕಾಂಗ್ರೆಸ್ ಶಾಸಕಾಂಗಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರೂ ಸಹ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಸ್ತರಣೆ ಬಳಿಕ ಅಸಮಾಧಾನ ಬುಗಿಲೇಳಬಹುದು
ಸಂಪುಟ ವಿಸ್ತರಣೆ ಬಳಿಕ ಮತ್ತೆ ಪಕ್ಷದಲ್ಲಿ ಅಸಮಾಧಾನಗಳು ಹೊರ ಬೀಳಬಹುದು ಹಾಗಾಗಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ನೀಡಬೇಕು ಎಂಬ ಕೂಗುಗಳು ಕೇಳಿಬರುತ್ತಿವೆ. ಆದರೆ ಇದಕ್ಕೆ ಕೆಲವು ಹಿರಿಯರ ವಿರೋಧವಿದೆ ಎನ್ನಲಾಗಿದೆ.

ಸಿದ್ದರಾಮಯ್ಯ ಸುತ್ತ ರಾಜ್ಯ ರಾಜಕಾರಣ ಸುತ್ತುತ್ತಿದೆ?
ಸಿದ್ದರಾಮಯ್ಯ ಅವರ ಸುತ್ತಲೇ ರಾಜ್ಯ ರಾಜಕಾರಣ ಸುತ್ತುತ್ತಿದ್ದು, ಈ ರೀತಿಯ ಏಕ ವ್ಯಕ್ತಿ ಪ್ರದರ್ಶನ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಮನಗಂಡಿರುವ ಎಐಸಿಸಿ ಈ ನಿರ್ಣಯ ತಳೆಯುತ್ತಿದೆ.

ಸಿದ್ದರಾಮಯ್ಯ ಪ್ರಭಾವ ಮೊಟಕುಗೊಳಿಸುವ ಯತ್ನ?
ಪ್ರಸ್ತುತ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಹುತೇಕರು ಸಿದ್ದರಾಮಯ್ಯ ಅವರ ಬೆಂಬಲಿಗರೇ ಹಾಗಾಗಿ ಸಿದ್ದರಾಮಯ್ಯ ಅವರ ಅಧಿಕಾರವನ್ನೇ ಮೊಟಕುಗೊಳಿಸಿದರೆ ಅವರ ಪ್ರಭಾವ ಕಡಿಮೆಯಾಗಿ ಶಾಸಕರು ಹಿಡಿತಕ್ಕೆ ಸಿಗುತ್ತಾರೆ ಎಂಬ ಲೆಕ್ಕಾಚಾರ ಎಐಸಿಸಿಯದ್ದು.

ಜೂನ್ 14 ರಂದು ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆಯು ನಾಳೆ (ಜೂನ್ 14) ರಂದು ನಡೆಯಲಿದ್ದು, ಒಟ್ಟು ನಾಲ್ಕು ಮಂದಿ ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಸಂಪುಟ ಸೇರಲಿರುವವರ ಪಟ್ಟಿ ಇನ್ನೂ ಗೌಪ್ಯವಾಗಿದೆ. ಕಾಂಗ್ರೆಸ್‌ನಿಂದ ರಾಮಲಿಂಗಾ ರೆಡ್ಡಿ, ಪಕ್ಷೇತರರಾದ ಆರ್.ಶಂಕರ್, ಎಚ್.ನಾಗೇಶ್‌ಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗುತ್ತಿದೆ.












Click it and Unblock the Notifications