'ಸೆ.15ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ'
Recommended Video

ಬೆಂಗಳೂರು, ಆಗಸ್ಟ್ 31 : 'ಗಣಪತಿ ಹಬ್ಬದ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಲಿದೆ. ಅದನ್ನು ನೀವು ನೋಡುತ್ತಾ ಇರಿ' ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅಚ್ಚರಿಯ ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ದ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. 'ನಮ್ಮ ಸಮುದಾಯ ಉತ್ಸವಮೂರ್ತಿಯಾಗಿದೆ. ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ' ಎಂದು ದೂರಿದರು.
'ಸರ್ಕಾರದಲ್ಲಿ ಲಿಂಗಾಯತರು, ಬ್ರಾಹ್ಮಣರು, ಒಕ್ಕಲಿಗರೇ ಹೆಚ್ಚಿದ್ದಾರೆ. ಸರ್ಕಾರದಲ್ಲಿ ಉನ್ನತ ಸ್ಥಾನ ಸಿಕ್ಕಿಲ್ಲ, ನಿರ್ಧಾರ ಕೈಗೊಳ್ಳುವ ಅಧಿಕಾರ ಸಿಕ್ಕಿಲ್ಲ' ಎಂದು ಸಿ.ಎಂ.ಇಬ್ರಾಹಿಂ ಆರೋಪಿಸಿದರು.
ಸದ್ಯ, ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಯು.ಟಿ.ಖಾದರ್ (ನಗರಾಭಿವೃದ್ಧಿ), ಜಮೀರ್ ಅಹಮದ್ ಖಾನ್ (ಆಹಾರ ಮತ್ತು ನಾಗರಿಕ ಪೂರೈಕೆ) ಸಚಿವರಾಗಿದ್ದಾರೆ.

'ನಾನು ಸದ್ಯ ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದೇನೆ. ಸೆಪ್ಟೆಂಬರ್‌ನಲ್ಲಿ ಅದು ಮುಗಿದ ಬಳಿಕ ನನ್ನ ಶಕ್ತಿ ತೋರಿಸುತ್ತೇನೆ. ನಾನು ಸಚಿವ ಸ್ಥಾನ ಕೇಳುವುದಿಲ್ಲ. ನನ್ನ ಸಾಮರ್ಥ್ಯ ಏನೂ ಎಂಬುದು ಎಲ್ಲರಿಗೂ ತಿಳಿದಿದೆ' ಎಂದರು.
'ನನ್ನ ಬಹುದೊಡ್ಡ ಗಂಟು ಕಳೆದುಹೋಗಿದೆ. ಸಮುದ್ರದಲ್ಲಿ ಅದನ್ನು ಹುಡುಕುತ್ತಿದ್ದೇನೆ. ಸೆಪ್ಟೆಂಬರ್‌ನಲ್ಲಿ ಅದು ನನಗೆ ಸಿಗಲಿದೆ' ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.












Click it and Unblock the Notifications