ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರ; ಬಿಜೆಪಿ ಅಭ್ಯರ್ಥಿಯಾಗಲು ಪೊಲೀಸ್ ಕೆಲಸಕ್ಕೆ ಗುಡ್‌ ಬೈ!

ಬಾಗಲಕೋಟೆಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ನಾಯಕ್ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 02; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿದೆ. ಹಲವಾರು ಜನರು ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ತಯಾರಿ ನಡೆಸುತ್ತಿದ್ದಾರೆ. ವಿವಿಧ ಪಕ್ಷಗಳ ಟಿಕೆಟ್ ಪಡೆಯಲು ಲಾಬಿ ಮಾಡುತ್ತಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಲು ಪೊಲೀಸ್ ಅಧಿಕಾರಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಾ, ಜನರನ್ನು ಭೇಟಿ ಮಾಡಿ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ತಯಾರಿ ಆರಂಭಿಸಿದ್ದಾರೆ.

ವಿಜಯಪುರ; ಫೆಬ್ರವರಿಯಲ್ಲಿ ಮೋದಿ ಉದ್ಘಾಟಿಸಲಿದ್ದಾರೆ ಏರ್‌ಪೋರ್ಟ್‌ವಿಜಯಪುರ; ಫೆಬ್ರವರಿಯಲ್ಲಿ ಮೋದಿ ಉದ್ಘಾಟಿಸಲಿದ್ದಾರೆ ಏರ್‌ಪೋರ್ಟ್‌

ಬಾಗಲಕೋಟೆಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ನಾಯಕ್ ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗಠಾಣ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪೊಲೀಸ್ ಕೆಲಸ ತೊರೆದಿರುವ ಅವರು ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.

Hassan JDS Ticket Row : ಹಾಸನ ಟಿಕೆಟ್ ವಿವಾದ, ಮೌನ ಮುರಿದ ಎಚ್‌ಡಿ ರೇವಣ್ಣ! Hassan JDS Ticket Row : ಹಾಸನ ಟಿಕೆಟ್ ವಿವಾದ, ಮೌನ ಮುರಿದ ಎಚ್‌ಡಿ ರೇವಣ್ಣ!

ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಆಕಾಂಕ್ಷಿಯಾಗಿದ್ದಾರೆ. 2018ರ ಚುನಾವಣೆಯಲ್ಲಿಯೂ ಅವರು ಕಣಕ್ಕಿಳಿದಿದ್ದರು, 53,562 ಮತಗಳನ್ನು ಪಡೆದು ಸೋಲು ಕಂಡಿದ್ದರು. ಆದರೆ ಈ ಬಾರಿ ಇತ್ತ ಮಹೇಂದ್ರ ನಾಯಕ್ ಸಹ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಕ್ಷೇತ್ರ ಪ್ರಸ್ತುತ ಜೆಡಿಎಸ್ ವಶದಲ್ಲಿದೆ.

 ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟ ರಾಷ್ಟ್ರೀಯ ನಾಯಕ ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟ ರಾಷ್ಟ್ರೀಯ ನಾಯಕ

ಮಹೇಂದ್ರ ನಾಯಕ್ ರಾಜೀನಾಮೆ

ಮಹೇಂದ್ರ ನಾಯಕ್ ರಾಜೀನಾಮೆ

ಲೋಕಾಯುಕ್ತ ಸಿಪಿಐ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಜನಮನ್ನಣೆಗಳಿಸಿರುವ ಅವರು ರಾಜಕೀಯಕ್ಕೆ ಪಾದಾರ್ಪಣೆ ಮಾಡುವ ಮೂಲಕ ಜನರ ಸೇವೆ ಮಾಡಲು ಮುಂದಾಗಿದ್ದಾರೆ.

ನಾಗಠಾಣ ಲಂಬಾಣಿ ಸಮುದಾಯದ ಪ್ರಭಾವ ಇರುವ ಕ್ಷೇತ್ರವಾಗಿದೆ. ಮಹೇಂದ್ರ ಕುಮಾರ್ ನಾಯಕ್ ಸಹ ಇದೇ ಸಮುದಾಯಕ್ಕೆ ಸೇರಿದವರು. ಆದ್ದರಿಂದ ಕ್ಷೇತ್ರದ ಮುಂದಿನ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

2010ರಲ್ಲಿ ಮಹೇಂದ್ರ ನಾಯಕ್ ಪೊಲೀಸ್ ಇಲಾಖೆಗೆ ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದರು. ಬಾಗಲಕೋಟೆಯಲ್ಲಿ ಲೋಕಾಯುಕ್ತ ಸಿಪಿಐ ಕೆಲಸ ಮಾಡುತ್ತಿದ್ದ ಅವರು ಕೆಲಸಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಮಹೇಂದ್ರ ಕುಮಾರ್ ನಾಯಕ್ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿದ್ದಾರೆ. ಅವರ ಹೆಸರಿನ ಅಭಿಮಾನಿ ಪೇಜ್‌ಗಳು ಸಹ ಹಲವು ಇವೆ. ಅವರು ಕ್ಷೇತ್ರದಲ್ಲಿ ಓಡಾಡುತ್ತಾ, ಜನರನ್ನು, ಯುವ ಸಮುದಾಯದವರನ್ನು ಭೇಟಿ ಮಾಡಿ ಚುನಾವಣಾ ತಯಾರಿ ಆರಂಭಿಸಿದ್ದಾರೆ.

ಶೀಘ್ರವೇ ಬಿಜೆಪಿಗೆ ಮಹೇಂದ್ರ ನಾಯಕ್ ಸೇರ್ಪಡೆ

ಶೀಘ್ರವೇ ಬಿಜೆಪಿಗೆ ಮಹೇಂದ್ರ ನಾಯಕ್ ಸೇರ್ಪಡೆ

ಮಹೇಂದ್ರ ಕುಮಾರ್ ನಾಯಕ್ ರಾಜಕೀಯಕ್ಕೆ ಬರಲು ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ನಾಗಠಾಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ. ಬಿಜೆಪಿಗೆ ಅವರು ಕೆಲವೇ ದಿನಗಳಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವು ನಿರೀಕ್ಷೆ ಇದೆ. ಗೋಪಾಲ ಕಾರಜೋಳ, ಮಹೇಂದ್ರ ನಾಯಕ್ ಯಾರೇ ಅಭ್ಯರ್ಥಿಯಾದರೂ ಹಾಲಿ ಜೆಡಿಎಸ್‌ ಶಾಸಕರಿಗೆ ತೀವ್ರ ಪೈಪೋಟಿ ಎದುರಾಗಲಿದೆ ಎಂಬ ಸುದ್ದಿಗಳಿವೆ.

ದೇವಾನಂದ ಚವ್ಹಾಣ ಶಾಸಕರು

ದೇವಾನಂದ ಚವ್ಹಾಣ ಶಾಸಕರು

ವಿಜಯಪುರ ಜಿಲ್ಲೆಯ ನಾಗಠಾಣ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ನ ದೇವಾನಂದ ಚವ್ಹಾಣ. 2018ರ ಚುನಾವಣೆಯಲ್ಲಿ ಅವರು 59,709 ಮತಗಳನ್ನು ಪಡೆದು ಜಯಗಳಿಸಿದ್ದರು. ಅವರ ಎದುರಾಳಿಯಾಗಿ ಬಿಜೆಪಿಯ ಗೋವಿಂದ ಗೋಪಾಲ ಕಾರಜೋಳ 53,562 ಮತ ಪಡೆದರೆ. ಕಾಂಗ್ರೆಸ್‌ನ ವಿಠ್ಠಲ ಕಟಕದೊಂಡ 54,108 ಮತ ಪಡೆದಿದ್ದರು.

ಕಳೆದ ಚುನಾವಣೆಯಲ್ಲಿಯೇ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಈಗಿನ ಚುನಾವಣಾ ಚಿತ್ರಣ ನೋಡಿದರೆ ಜೆಡಿಎಸ್‌ ಪಕ್ಷಕ್ಕೆ ಈ ಬಾರಿಯೂ ಭಾರೀ ಸವಾಲು ಇದೆ. ಜೆಡಿಎಸ್‌ನಿಂದ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.

English summary
Mahendra Kumar Nayak submitted resignation for the police job to contest for Karnataka assembly elections 2023. He is BJP ticket aspirant from Nagthan seat of Vijayapura district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X