Belagavi Border row: ಬೆಳಗಾವಿ ಗಡಿಯಲ್ಲಿ ಮಹಾರಾಷ್ಟ್ರದ ಶಿವಸೇನಾ, ಬೆಳಗಾವಿಯಲ್ಲಿ ಎಂಇಎಸ್ ಮಾಡಿದ್ದೇನು
Belagavi border dispute: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಿದ್ದು, ಅಧಿವೇಶನದ ಮೊದಲ ದಿನವೇ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಹಾಗೂ ಮಹಾರಾಷ್ಟ್ರದ ಶಿವಸೇನಾ ಪುಂಡಾಟ ಮೆರೆದಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬೆಳಗಾವಿ ಗಡಿ ವಿವಾದವಿದೆ. ಗಡಿ ವಿವಾದ ವಿಷಯವನ್ನು ಜೀವಂತವಾಗಿ ಇರಿಸಲು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಹಾಗೂ ಎಂಇಎಸ್ ಪ್ರಯತ್ನಿಸುತ್ತಲ್ಲೇ ಇದೆ. ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಚಳಿಗಾಲದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಎಂಇಎಸ್ ಹಾಗೂ ಶಿವಸೇನೆ ಒಂದಾಗಿ ತನ್ನ ಬುದ್ಧಿ ಪ್ರದರ್ಶನ ಮಾಡುತ್ತದೆ. ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ತೆಗೆದುಕೊಂಡಿದೆ. ಇಷ್ಟಾದರೂ ಬೆಳಗಾವಿ ಅಧಿವೇಶನದ ಸಮಯದಲ್ಲಿ ಪುಂಡಾಟ ಮೆರೆದಿದ್ದು ಪೊಲೀಸರು ಬುದ್ಧಿ ಕಲಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆಯೇ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿನ ಸುವರ್ಣ ಸೌಧದ ಹೊರ ಭಾಗದಲ್ಲಿ ಧಿಕ್ಕಾರಗಳ ಕೂಗೇ ಹೆಚ್ಚಾಗಿದೆ. ಕರ್ನಾಟಕದ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್ ನಡೆಸಲು ಎಂಇಎಸ್ ಮುಖಂಡರು ಮುಂದಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಬೆಳಗಾವಿ ನಗರದ ಸಂಭಾಜಿ ವೃತ್ತದ ಬಳಿ ಪೊಲೀಸರ ವಶಕ್ಕೆ ಪಡೆದಿದ್ದಾರೆ. 20ಕ್ಕೂ ಅಧಿಕ ಎಂಇಎಸ್ ನಾಯಕರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಎಂಇಎಸ್ ಮುಖಂಡ ಮನೋಹರ ಕಿಣೇಕರ, ಆರ್ ಎಂ. ಪಾಟೀಲ್, ಪ್ರಕಾಶ ಶಿರೋಲಕರ್ ಹಾಗೂ ಪ್ರಕಾಶ ಮರ್ಗಾಳೆ ಎನ್ನುವವರನ್ನು ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದು, ಭಾಗದಲ್ಲಿ ಪೊಲೀಸರು ಹಾಗೂ ಎಂಇಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭದ ಬೆನ್ನಲ್ಲೇ ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್ ನಡೆಸಲು ಮುಂದಾಗಿತ್ತು. ಆದರೆ, ಪೊಲೀಸರು ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಗಡಿಯಲ್ಲಿ ಶಿವಸೇನೆ ಪುಂಡರು ಪುಂಡಾಟ ಪ್ರದರ್ಶಿಸುತ್ತಿದ್ದಾರೆ. ಕರ್ನಾಟಕದ ಗಡಿಯಲ್ಲಿ ಶಿವಸೇನೆ ಉದ್ಧವ ಠಾಕ್ರೆ ಬಣ ಪುಂಡಾಟ ಮೆರೆಯುತ್ತಿದೆ. ಶಿವಸೇನೆ ಮುಖಂಡ ವಿಜಯ ಧವಣೆ ನೇತೃತ್ವದಲ್ಲಿ ಕರ್ನಾಟಕದ ಗಡಿಯತ್ತ ಪ್ರಯಾಣ ಮಾಡಿರುವುದು ವರದಿಯಾಗಿದೆ.
ಬೆಳಗಾವಿ ಕೊಲ್ಲಾಪುರ ಗಡಿಯಲ್ಲಿ ಶಿವಸೇನೆಯಿಂದ ರಸ್ತೆ ತಡೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದೆ ಎನ್ನಲಾಗಿದ್ದು, ಕೂಗನೊಳ್ಳಿ ಚೆಕ್ ಗಡಿಯಲ್ಲಿ ಶಿವಸೇನೆ ಪುಂಡಾಟ ಜೋರಾಗಿದೆ.

11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಇಂದು 11 ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಸುವರ್ಣ ಸೌಧದ ಸಮೀಪದ ಸುವರ್ಣ ಗಾರ್ಡ್‌ನಲ್ಲಿ ಹಾಗೂ ಕೊಂಡಸಕೊಪ್ಪ ಬೆಟ್ಟದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಕರ್ನಾಟಕ ರೈತ ಸಂಘದ ಹಸಿರು ಬ್ರಿಗೇಡ್, ಅಖಿಲ ಕರ್ನಾಟಕ ರೈತ ಸಂಘ, ಜೈನ ಸಮಾಜಕ್ಕೆ ನಿಗಮ ಮಂಡಳಿ ನೀಡುವಂತೆ ಹಾಗೂ KSRTC ನಿಗಮದ ಕಾರ್ಮಿಕ ಒಕ್ಕೂಟ ಸೇರಿ ಒಟ್ಟು 11 ಪ್ರಮುಖ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇನ್ನು ಚಳಿಗಾಲ ಅಧಿವೇಶನಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬೆಳಗಾವಿ ನಗರ ಡಿಐಜಿ ಯಡಾ ಮಾರ್ಟಿನ್ ನೇತೃತ್ವದಲ್ಲಿ 7 ಎಸ್ಪಿ, 12 ಎಎಸ್ ಪಿ, 43 ಡಿಎಸ್ಪಿ , 123 ಸಿಪಿಐ ಸೇರಿದಂತೆ ಒಟ್ಟು 4156 ಪೋಲಿಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 35 KSRP, 10 ಡಿ ಆರ್ ತುಕಡಿ,10 ಡ್ರೋನ್ ಕ್ಯಾಮರಾ ಜೊತೆ 300 ಬಾಡಿ ಕ್ಯಾಮೆರಾಗಳನ್ನು ಬಳಕೆ ಮಾಡಲಾಗ್ತಿದೆ.












Click it and Unblock the Notifications