ಮಹದಾಯಿ: ಸರ್ವಪಕ್ಷಗಳ ಸಭೆ ತೆಗೆದುಕೊಂಡ ನಿರ್ಧಾರವೇನು?

Subscribe to Oneindia Kannada

ಬೆಂಗಳೂರು, ಆಗಸ್ಟ್, 07: ಮಹದಾಯಿಗೆ ಸಂಬಂಧಿಸಿ ನ್ಯಾಯಾಧಿಕರಣ ನೀಡಿರುವ ಮಧ್ಯಂತರ ತೀರ್ಪಿನ ಕುರಿತು ಚರ್ಚೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ನಡೆದ ಸರ್ವಪಕ್ಷಗಳ ಸಭೆ ಅಂತ್ಯವಾಗಿದೆ.

ವಿಧಾನ ಸೌಧದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಇದು ಕೇವಲ ಒಂದು ಸುತ್ತಿನ ಮಾತುಕತೆ ಮಾತ್ರವಾಗಿದ್ದು ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಇನ್ನು ಒಂದು ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಜತೆ ಚರ್ಚೆ ಮಾಡಿ ಮುಂದಿನ ಹೆಜ್ಜೆ ಇಡುತ್ತೇವೆ ಎಂದು ತಿಳಿಸಿದರು.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಜೆಡಿಎಸ್ ನಾಯಕ ಕುಮಾರಸ್ವಾಮಿ, ಕೇಂದ್ರ ಸಚಿವ ಸದಾನಂದ ಗೌಡ, ಕರ್ನಾಟಕವನ್ನು ಪ್ರತಿನಿಧಿಸುವ ಸಂಸದರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.

ಸರ್ಕಾರದ ಮುಂದೆ ಹಲವು ಆಯ್ಕೆಗಳಿವೆ

ಸರ್ಕಾರದ ಮುಂದೆ ಹಲವು ಆಯ್ಕೆಗಳಿವೆ

ಸರ್ಕಾರದ ಮುಂದೆ ಹಲವಾರು ಆಯ್ಕೆಗಳಿವೆ. ಪಕ್ಕದ ರಾಜ್ಯದವರನ್ನು ಮನವೊಲಿಕೆ ಮಾಡಿ ಕೇಂದ್ರಕ್ಕೆ ಮತ್ತೆ ನಿಯೋಗ ಕೊಂಡೊಯ್ದು ಮನವಿ ಮಾಡುವುದು. ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವುದರ ಬಗ್ಗೆಯೂ ಚರ್ಚೆ ನಡೆಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ಸಿಎಂ ನಿರ್ಧಾರಕ್ಕೆ ಬದ್ಧ

ಸಿಎಂ ನಿರ್ಧಾರಕ್ಕೆ ಬದ್ಧ

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು.

ಪ್ರಕರಣ ವಾಪಸ್ ಗೆ ಮನವಿ

ಪ್ರಕರಣ ವಾಪಸ್ ಗೆ ಮನವಿ

ಕಳಸಾ ಬಂಡೂರಿ ಹೋರಾಟದ ಸಮಯದಲ್ಲಿ ಬಂಧಿಸಿರುವ ರೈತರನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಮನವಿ ಮಾಡಿದವು.

ಒಂದಾಗಿದ್ದೇವೆ

ಒಂದಾಗಿದ್ದೇವೆ

ನೆಲ ಜಲದ ವಿಷಯದಲ್ಲಿ ನಾವೆಲ್ಲ ಒಂದಾಗಿದ್ದೇವೆ. ಇಲ್ಲಿ ರಾಜಕಾರಣದ ಮಾತೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಭೆ ನಂತರ ತಿಳಿಸಿದರು.

ವಾಟಾಳ್ ನಾಗರಾಜ್ ಮನವಿ

ವಾಟಾಳ್ ನಾಗರಾಜ್ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮಹದಾಯಿ ವಿವಾದ ಬಗೆಹರಿಸಲು ಆಗ್ರಹಿಸಿ ಮನವಿ ಸಲ್ಲಿಕೆ ಮಾಡಿದರು. ವಾಟಾಳ್ ನಾಗರಾಜ್ ಅವರಿಗೆ ವಿಧಾನಸೌಧದ ಒಳಕ್ಕೆ ಪ್ರವೇಶ ನೀಡದ ಘಟನೆಯೂ ನಡೆಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka chief minister Siddaramaiah conducted an all-party meeting at the Vidhana Soudha on Sunday to decide on the next course of legal action seeking Mahadayi river for the Kalasa-Banduri Nala drinking water project. Floor leaders of both Houses of the State legislature, State MPs, MLAs, and MLCs expressed their opinion about Mahadayi.
Please Wait while comments are loading...