ಕಳಸಾ ಬಂಡೂರಿಗಾಗಿ ಮತ್ತೆ ಕರ್ನಾಟಕ ಸ್ತಬ್ಧ

Written By:
Subscribe to Oneindia Kannada

ಬೆಂಗಳೂರು, ಜುಲೈ, 27: ಮತ್ತೊಂದು ಕರ್ನಾಟಕ ಬಂದ್ ಗೆ ಸಿದ್ಧವವಾಗಬೇಕಿದೆ. ನಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವನ್ನು ಮತ್ತೆ ಮುಂದುವರಿಸಬೇಕಾಗಿದೆ.

ಮಹದಾಯಿ ನೀರು ಹಂಚಿಕೆ ಕುರಿತಂತೆ ನ್ಯಾಯಮಂಡಳಿ ನೀಡಿರುವ ಮಧ್ಯಂತರ ತೀರ್ಪಿನ ಪರಿಣಾಮ ರಾಜ್ಯದಲ್ಲಿ ನಾಳೆ ಅಂದರೆ ಜುಲೈ 28 ರಂದು ಮತ್ತೊಂದು ಬಂದ್ ನಡೆಯಲಿದೆ. ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕಳಸಾ ಬಂಡೂರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಬಂದ್‌ ಗೆ ಕರೆ ನೀಡಿವೆ. [ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ರೈತರ ಆಕ್ರೋಶ]

ಇನ್ನೊಂದೆಡೆ ಕನ್ನಡ ಸಂಘಟನೆಗಳ ಒಕ್ಕೂಟದ ವಾಟಾಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ವಿವಿಧ ಹೋರಾಟಗಾರರು ಜುಲೈ 30 ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]

ಆದರೆ ಈಗಾಗಲೇ ಉತ್ತರ ಕರ್ನಾಟಕದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಪರಿಣಾಮ ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ನಾಳೆ ಸಹ ಉತ್ತರ ಕರ್ನಾಟಕಲ್ಲಿ ಬಂದ್ ಪರಿಸ್ಥಿತಿ ಮುಂದುವರಿಯುವುದರಲ್ಲಿ ಯಾವ ಅನುಮಾನ ಇಲ್ಲ.

ಬಸ್ ಇರುತ್ತಾ?

ಬಸ್ ಇರುತ್ತಾ?

ಕೆಎಸ್ ಆರ್ ಟಿಸಿ ನೌಕರರು ನಡೆಸುತ್ತಿದ್ದ ಮುಷ್ಕರ ಈಗಷ್ಟೇ ಅಂತ್ಯವಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಬಂದ್ ಪರಿಸ್ಥಿತಿ ಎದುರಾದರೆ ಬಸ್ ಸೇವೆ ಕಷ್ಟ ಸಾಧ್ಯ.

ಚಂದ್ರಶೇಖರ್ ಕರೆ

ಚಂದ್ರಶೇಖರ್ ಕರೆ

ಮಹಾದಾಯಿ ತೀರ್ಪು ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದ್ದು ಗುರುವಾರ ರಾಜ್ಯದ ನಾಗರಿಕರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿ ಒತ್ತಡ ತರಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಶಾಲಾ ಕಾಲೇಜುಗಳು

ಶಾಲಾ ಕಾಲೇಜುಗಳು

ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಗೆ ಶಾಲೆಗೆ ರಜೆ ನೀಡುವ ಅಧಿಕಾರ ನೀಡಲಾಗಿದೆ. ಆದರೆ ಈಗಾಗಲೇ ಮೂರು ದಿನದ ರಜಾ ಮಜಾವನ್ನು ವಿದ್ಯಾರ್ಥಿಗಳು ಅನುಭವಿಸಿದ್ದು ನಾಳೆಯೂ ರಜೆ ಸಿಕ್ಕರೆ ಆಶ್ಚರ್ಯವಿಲ್ಲ.

ಚಿತ್ರೋದ್ಯಮ ಬಂದ್

ಚಿತ್ರೋದ್ಯಮ ಬಂದ್

ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಕನ್ನಡ ಚಿತ್ರೋದ್ಯಮವನ್ನು ಸಹ ಜುಲೈ 30 ರಂದು ಬಂದ್ ಮಾಡುತ್ತಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದ ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಸ್ಥಬ್ಧ

ಉತ್ತರ ಕರ್ನಾಟಕ ಸ್ಥಬ್ಧ

ಕಳಸಾ ಬಂಡೂರಿ ಹೋರಾಟ ಒಂದು ವರ್ಷದಿಂದ ನಡೆಯುತ್ತಿದ್ದು ಜುಲೈ 16 ಒಂದು ವರ್ಷ ತುಂಬಿತ್ತು, ಈ ಹಿನ್ನೆಲೆಯಲ್ಲಿ ರೈತರು ಧಾರವಾಡ, ಗದಗ, ಬೆಳಗಾವಿ ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಯನ್ನು ಬಂದ್ ಮಾಡಿದ್ದರು.

ವಾಟಾಳ್ ಕರೆ

ವಾಟಾಳ್ ಕರೆ

ಕನ್ನಡ ಸಂಘಟನೆಗಳ ಒಕ್ಕೂಟದ ವಾಟಾಳ್ ನಾಗರಾಜ್, ಸಾರಾ ಗೋವಿಂದು ಸೇರಿದಂತೆ ವಿವಿಧ ಹೋರಾಟಗಾರರು ಜುಲೈ 30 ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi Water Disputes Tribunal on Wednesday rejected the Karnataka government interim petition seeking permission to utilize 7 TMC feet of water for drinking water purposes. Kalasa Banduri Horata Samiti and many kannada organizations called for Karnataka Bandh on 28, July, 2016
Please Wait while comments are loading...