ಮಹದಾಯಿ ಹೋರಾಟ, ಬಿಜೆಪಿ ಹೈಕಮಾಂಡ್ ಗರಂ!

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 26 : ಮಹದಾಯಿ ಹೋರಾಟ ಕರ್ನಾಟಕ ಬಿಜೆಪಿ ಪಾಲಿಗೆ ಬಿಸಿ ತುಪ್ಪವಾಗಿದೆ. ವಿವಾದ ಇತ್ಯರ್ಥ ಮಾಡುತ್ತೇವೆ ಎಂದು ಘೋಷಿಸಿದ ನಾಯಕರು ಈಗ ಪೇಚಿಗೆ ಸಿಲುಕಿದ್ದಾರೆ. ಪಕ್ಷದ ಹೈಕಮಾಂಡ್‌ ಸಹ ರಾಜ್ಯ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಮಹದಾಯಿ : ಬಿಜೆಪಿ ಕಚೇರಿ ಮುಂದೆ 4ನೇ ದಿನ ಧರಣಿ

ಕರ್ನಾಟಕ ಬಿಜೆಪಿ ಕಚೇರಿ ಮುಂದೆ ನೂರಾರು ರೈತರು ನಾಲ್ಕು ದಿನದಿಂದ ಧರಣಿ ನಡೆಸುತ್ತಿದ್ದಾರೆ.ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ವರದಿ ಹೈಕಮಾಂಡ್‌ ನಾಯಕರಿಗೆ ತಲುಪಿದ್ದು, ರಾಜ್ಯ ನಾಯಕರಿಂದ ವಿವರಣೆ ಕೇಳಿದ್ದಾರೆ.

ಪರಿಕ್ಕರ್ ಪತ್ರ ಮಂಡಳಿ ಮುಂದಿಟ್ಟರೆ ಮಧ್ಯಂತರ ಪರಿಹಾರ: ಯಡಿಯೂರಪ್ಪ

Mahadayi issue : BJP high command to seek explanation from state leaders

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಪಿಯೂಷ್ ಘೋಯಲ್ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಪಕ್ಷದ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸಭೆ ಸ್ಥಳ ಬದಲು :ಪಕ್ಷದ ಕೋರ್ ಕಮಿಟಿ ಸಭೆ ಪಕ್ಷದ ಕಚೇರಿಯಲ್ಲಿ ನಡೆಯುವುದು ವಾಡಿದೆ. ಆದರೆ, ಮಹದಾಯಿ ಹೋರಾಟಗಾರರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ. ಆದ್ದರಿಂದ, ಯಡಿಯೂರಪ್ಪ್ರ ನಿವಾಸಕ್ಕೆ ಸಭೆಯ ಸ್ಥಳ ಬದಲಾವಣೆಯಾಗಿದೆ.

ಪಕ್ಷದ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಇಂದು ಬಿಡುವು. ಬಿ.ಎಸ್.ಯಡಿಯೂರಪ್ಪ ಬೆಂಗಳೂರಿಗೆ ಆಗಮಿಸಿದ್ದಾರೆ. ಕೋರ್ ಕಮಿಟಿ ಸಭೆಯ ಬಳಿಕ ಅವರು ರೈತರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP high-command is not happy the way state unit of the party has reacted for Mahadayi issue. Farmers protesting outside the Bharatiya Janata Party (BJP) office at Malleswaram, Bengaluru from 4 days. So high command seek explanation from state leaders.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ