ಮಹದಾಯಿ ಹೋರಾಟಗಾರರಿಗೆ ಬಿಡುಗಡೆ ಭಾಗ್ಯ

Written By:
Subscribe to Oneindia Kannada

ಹುಬ್ಬಳ್ಳಿ, ಆಗಸ್ಟ್, 13: ಮಹದಾಯಿ, ಕಳಸಾ ಬಂಡೂರಿ ಹೋರಾಟದ ವೇಳೆ ಬಂಧನಕ್ಕೆ ಒಳಗಾಗಿದ್ದ ರೈತರಿಗೆ ಅಂತೂ ಬಿಡುಗಡೆ ಭಾಗ್ಯ ಸಿಕ್ಕಿದೆ.

179 ಜನರಿಗೆ ಶುಕ್ರವಾರ ಧಾರವಾಡ ಜಿಲ್ಲಾ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನಂತರ ಚಿತ್ರದುರ್ಗ, ಬಳ್ಳಾರಿ ಜೈಲುಗಳಿಂದ ರೈತರನ್ನು ಶನಿವಾರ ಬೆಳಗ್ಗೆ ಬಿಡುಗಡೆ ಮಾಡಲಾಗಿದೆ. [ನೀರಿಗೆ ಹೋರಾಟ ಮಾಡಿದವರಿಗೆ ಷರತ್ತುಬದ್ಧ ಜಾಮೀನು]

farmers

ಚಿತ್ರದುರ್ಗ ಜಿಲ್ಲೆಯಲ್ಲಿದ್ದ 56 ರೈತರನ್ನು ವೈದ್ಯಕೀಯ ತಪಾಸಣೆ ನಂತರ ಬಿಡುಗಡೆ ಮಾಡಲಾಗಿದೆ. ಬಿಡುಗಡೆ ನಂತರ ರೈತರು ಸರ್ಕಾರದ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಷರತ್ತುಬದ್ಧ ಜಾಮೀನು ನೀಡಿಕೆ ಅಗತ್ಯವನ್ನು ಪ್ರಶ್ನೆ ಮಾಡಿದ್ದಾರೆ.

ಚಿತ್ರದುರ್ಗ ಜೈಲಿನಲ್ಲಿದ್ದ 57 ರೈತರನ್ನು ಹಾಗು ಬಳ್ಳಾರಿ ಜೈಲಿನಲ್ಲಿದ್ದ 129 ರೈತರನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದುರ್ಗದಿಂದ ಧಾರವಾಡದ ನವಲಗುಂದಕ್ಕೆ ತೆರಳಲು ಚಿತ್ರದುರ್ಗದ ಮುರುಘಾ ಮಠದಿಂದ ರೈತರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.[ಮಹದಾಯಿಗಾಗಿ ಕರ್ನಾಟಕ ಸ್ಥಬ್ಧ]

ಸಂಜೆ ವೇಳೆಗೆ ಮಹಾದಾಯಿ ಹೋರಾಟದದ ಸಮಯದಲ್ಲಿ ಬಂಧಿತರಾಗಿದ್ದ ಎಲ್ಲರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನವಲಗುಂದ ತಾಲೂಕಿನ ಅಳಗವಾಡಿ, ಅರೇಕುರಹಟ್ಟಿ, ಯಮನೂರು ಮುಂತಾದ ಗ್ರಾಮಗಳಿಂದ ಬಂಧಿತರಾಗಿದ್ದವರ ಪರ ಧಾರವಾಡ ವಕೀಲರ ಸಂಘ ವಾದ ಮಂಡಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: After the Dharwad session court granted conditional bail Farmers released from Chitradurga and Ballari Jail, on 13 August.
Please Wait while comments are loading...