ಮಾಡಾಳ್ ವಿರೂಪಾಕ್ಷಪ್ಪಗೆ ಬಿಜೆಪಿ ಟಿಕೆಟ್ ಮಿಸ್!? ಚನ್ನಗಿರಿಗೆ ಆರ್‌ಎಸ್‌ಎಸ್ ಫೈನಲ್ ಮಾಡಿದ 'ಕೇಸರಿ ಕಲಿ' ಯಾರು?
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಲಿದ್ದು, ಆರ್ ಎಸ್ ಎಸ್ ಅಂತಿಮಗೊಳಿಸಿದ ಅಭ್ಯರ್ಥಿಗೆ ಟಿಕೆಟ್ ನೀಡಲಾಗುವುದು
ದಾವಣಗೆರೆ,ಮಾರ್ಚ್8: ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಸಿದ್ದತೆಯನ್ನ ಮಾಡಿಕೊಂಡಿವೆ. ಈ ನಡುವೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದು, ಚುನಾವಣೆ ಹೊತ್ತಲಿ ಇದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಇತ್ತ ವಿಪಕ್ಷಗಳಿಗೆ ಇದೆ ಚುನಾವಣೆಯಲ್ಲಿ ಅಸ್ತ್ರವಾಗಲಿದ್ದು, ಈ ಡ್ಯಾಮೇಜ್ ಕಂಟ್ರೋಲ್ ಗೆ ಬಿಜೆಪಿ ಚಿಂತನೆ ನಡೆಸಿದೆ.
ಈಗಾಗಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಇನ್ನೂ ವಿಧಾನಸಭಾ ಚುನಾವಣೆ ಹೊತ್ತಲಿ ಪಕ್ಷ ಟಿಕೆಟ್ ನೀಡಿದ್ರೆ ಸಾಕಷ್ಟು ಡ್ಯಾಮೇಜ್ ಆಗುತ್ತದೆ ಎಂದು ಈ ಬಾರಿ ಟಿಕೆಟ್ ನೀಡದಿರಲೂ ಚಿಂತನೆ ನಡೆಸಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಹೇಳಿರುವ ಆ 6 ಜನರ ಫೈಕಿ ಮಾಡಾಳ್ ವಿರೂಪಾಕ್ಷಪ್ಪ ಅವರೂ ಒಬ್ಬರಾಗಿದ್ದು, ಈ ಬಾರಿ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್ ಬಹುತೇಕ ಸಿಗುವುದೇ ಡೌಟ್ ಎನ್ನಲಾಗಿದೆ.
ಈಗಾಗಲೇ ಕ್ಷೇತ್ರದಲ್ಲೂ ಸಹ ಟಿಕೆಟ್ ಗಾಗಿ ಪೈಪೋಟಿ ಏರ್ಪಟ್ಟಿದ್ದು, ಆರ್ ಆರ್ ಎಸ್ ಹಿನ್ನಲೆ ವುಳ್ಳ ಹಾಗೂ ಪಕ್ಷದ ನಿಷ್ಠವಂತನಿಗೆ ಟಿಕೆಟ್ ಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಆರ್‌ಎಸ್‌ಎಸ್ ಅಂತಿಮಗೊಳಿಸಿದ ಆ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ವಲಯದಲ್ಲಿ ಗುರುತಿಸಿಕೊಂಡಿದ್ದು, ಹಲವು ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.

ಆರ್ ಎಸ್ಎಸ್ ಅಂತಿಮಗೊಳಿಸಿದ ಆ ಅಭ್ಯರ್ಥಿ ಯಾರು.?
ಲಂಚ ಪ್ರಕರಣದಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟಣೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈ ಬಾರ ಟಿಕೆಟ್ ಮಿಸ್ ಆಗಲಿದ್ದು, ವಿರೂಪಾಕ್ಷಪ್ಪ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಆರ್ ಎಸ್ ಎಸ್ ಚಿಂತನೆ ನಡೆಸಿದ್ದು, ಈ ಬಾರಿ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಧನಂಜಯ ಸರ್ಜಿ ಅವರನ್ನ ಕಣಕ್ಕಿಳಿಸಲು ತಿರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ನಗರ ಟಿಕೆಟ್ ಗಾಗಿ ಸಾಕಷ್ಟು ಪೈಪೋಟಿ ನಡೆಸಿದ್ದ ಡಾ. ಧನಂಜಯ ಸರ್ಜಿ ಅವರನ್ನ ಚನ್ನಗಿರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದು, ಈ ಕುರಿತು ಮಂಗಳವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್ ಸಂತೋಷ್ ಅವರು ಸಭೆ ನಡೆಸಿದ್ದು, ಪಕ್ಷಕ್ಕಾಗಿ ಒಟ್ಟಾಗಿ ಕೆಲಸ ಮಾಡಿ ಎಂದು ಹೇಳಿದ್ದಾರೆ. ಅಲ್ಲದೆ ಡಾ. ಧನಂಜಯ ಸರ್ಜಿ ಅವರ ಪರವಾಗಿ ಆರ್ ಎಸ್ ಎಸ್ ಹಾಗೂ ಬಿಜೆಪಿಯ ಸ್ಥಳೀಯ ನಾಯಕರು ಒಲವು ತೋರಿದ್ದು, ಬಹುತೇಕ ಡಾ. ಧನಂಜಯ ಸರ್ಜಿ ಅವರೇ ಚನ್ನಗಿರಿಯ ಮುಂದಿನ ಅಭ್ಯರ್ಥಿ ಎನ್ನಲಾಗಿದೆ.

ಅಭ್ಯರ್ಥಿಯಾಗಲಿರುವ ಡಾ. ಧನಂಜಯ ಸರ್ಜಿ ಯಾರು ?
ಡಾ. ಧನಂಜಯ ಅವರು ವೃತ್ತಿಯಲ್ಲಿ ಖ್ಯಾತ ಮಕ್ಕಳ ವೈದ್ಯರಾಗಿದ್ದು, ಸಾಮಾಜಿಕ ಕಳಕಳಿಯನ್ನ ಹೊಂದಿದ್ದಾರೆ. ಮೊದಲು ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆತಲ್ಲಿ ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ ಧನಂಜಯ ಸರ್ಜಿ ಅವರು ನಂತರದ ದಿನಗಳಲ್ಲಿ ಶಿವಮೊಗ್ಗದಲ್ಲಿ ಸ್ವಂತ ಮಕ್ಕಳ ಆಸ್ಪತ್ರೆಯನ್ನ ಆರಂಭಿಸಿದರು.
ವೃತ್ತಿಯಲ್ಲಿ ವೈದ್ಯರಾಗಿರುವ ಧನಂಜಯ ಸರ್ಜಿಯವರು, ಇದೀಗ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಹಲವು ವರ್ಷಗಳಿಂದ ಬಿಜೆಪಿಗಾಗಿ ಶ್ರಮಿಸುತ್ತಿದ್ದ ಧನಂಜಯ ಸರ್ಜಿ ಅವರು ಪ್ರತಿ ಚುನಾವಣೆ ವೇಳೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿದ್ದು, ಶಿವಮೊಗ್ಗ ಜಿಲ್ಲೆಯ ಪ್ರಭಾವಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಯಾದ ಬಿ.ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರ ಜೊತೆಗೂ ಉತ್ತಮ ಒಡನಾಟ ಹೊಂದಿದ್ದಾರೆ.

ಮಗನಿಗೆ ಟಿಕೆಟ್ ಕೊಡಿಸಲು ಮಾಡಾಳ್ ವಿರೂಪಾಕ್ಷಪ್ಪ ಸರ್ಕಸ್
ಈಗಾಗಾಲೇ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷದಿಂದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಉಚ್ಚಾಟನೆ ಮಾಡಿದ್ದು, ಈ ಬಾರಿ ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರಿದ್ದಾರೆ ಎನ್ನಲಾಗಿದೆ.
ಚನ್ನಗಿರಿ ಕ್ಷೇತ್ರ ತಮ್ಮ ಹಿಡಿತದಿಂದ ಎಲ್ಲಿ ಕೈ ತಪ್ಪುತ್ತೋ ಎನ್ನುವ ಆತಂಕ ಶುರುವಾಗಿದೆ. ಹೀಗಾಗಿ ತಮ್ಮ ಹಿರಿಯ ಪುತ್ರ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಚನ್ನಗಿರಿ ಬಿಜೆಪಿ ಟಿಕೆಟ್ಗಾಗಿ ಇನ್ನಿಬರು ಕಸರತ್ತು
ಯಾವಾಗ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುತ್ತೋ ಎನ್ನುವ ಮಾಹಿತಿ ಖಚಿತವಾಗುತ್ತಿದ್ದಂತೆ ಚನ್ನಗಿರಿಯ ಕ್ಷೇತ್ರದ ಇಬ್ಬರು ನಾಯಕರು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಒಂದು ಕಡೆ ಡಾ. ಧನಂಜಯ ಸರ್ಜಿ ಅವರನ್ನ ಕಣಕ್ಕಿಳಿಸಲು ಆರ್ ಎಸ್ ಎಸ್ ನಾಯಕರು ಚಿಂತನೆ ನಡೆಸಿದ್ರೆ, ಇತ್ತ ಟಿಕೆಟ್ ಗಾಗಿ ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್ ಹಾಗೂ ತಿಪ್ಪಗೊಂಡನ ಹಳ್ಳಿಯ ಟಿವಿ ರಾಜು ಪಟೇಲ್ ಸ್ಪರ್ಧೆಗೆ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಒಟ್ನಾಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟಿದ್ದ ಬಿಜೆಪಿಗೆ ಆರಂಭದಲ್ಲಿ ವಿಘ್ನ ಎದುರಾಗಿದ್ದು, ಚನ್ನಗಿರಿ ಟಿಕೆಟ್ ವಿಚಾರದಲ್ಲಿಆರ್ ಎಸ್ ಎಸ್ ನಿರ್ಧಾರವೇ ಅಂತಿಮವಾಗುತ್ತಾ? ಇತ್ತ ಮಾಡಾಳ್ ವಿರೂಪಾಕ್ಷಪ್ಪ ನವರು ಕ್ಷೇತ್ರ ಉಳಿಸಿಕೊಳುವ ಪ್ರಯತ್ನ ಯಶಸ್ವಿಯಾಗುತ್ತಾ ಅಂತ ಕಾದುನೋಡ್ಬೇಕಾಗಿದೆ.












Click it and Unblock the Notifications