ಕುಮಾರಣ್ಣ ನಮ್ಗೆ ವಿಷ ಕೊಡಲಿ: ರಾಮನಗರ ಜನತೆ
ರಾಮನಗರ,
ಮಾರ್ಚ್ 22: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಈ ಮಧ್ಯೆ, ರಾಮನಗರ ಶಾಸಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಿಂದ ತಾವೇ ಸ್ಪರ್ಧಿಸುವುದು ಖಚಿತವೆಂದು ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸುಳಿವು ನೀಡಿದ್ದಾರೆ. ಇಂದು ಶನಿವಾರ ಸಂಜೆ ವೇಳೆಗೆ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಬಗ್ಗೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. id="toptextpromo"> id='are-slot-1' class='oiad oi-axt oiadv'>ಇದು
ಸಹಜವಾಗಿಯೇ ರಾಮನಗರದ ಜೆಡಿಎಸ್ ಕಾರ್ಯಕರ್ತರು ಮತ್ತು ಸ್ಥಳೀಯ ಜನತೆಯನ್ನು ಕೆರಳಿಸಿದೆ. ಕ್ಷೇತ್ರ ಬಿಡುವ ಮೊದಲು ಸ್ಥಳೀಯ ಕಾರ್ಯಕರ್ತರಿಗೆ ವಿಷ ಕೊಟ್ಟು ಎಲ್ಲಿಗೆ ಬೇಕಾದರೂ ಹೋಗಲಿ ಎನ್ನುವ ಆಕ್ರೋಶದ ನುಡಿಗಳು ಕಾರ್ಯಕರ್ತರಿಂದ ವ್ಯಕ್ತವಾಗಿದೆ. (ರಾಮನಗರಕ್ಕೆ ನಾನೇ ಸರಕಾರ್: ಎಚ್ ಡಿ ಕುಮಾರಸ್ವಾಮಿ) id='are-slot-2' class='oiad oi-axt oiadv'>ಇಷ್ಟು
ದಿನ ನಾವೇಕೆ ಪಕ್ಷಕ್ಕೆ ಮತ್ತು ಕುಮಾರಣ್ಣ ಶಾಸಕರಾಗುವುದಕ್ಕೆ ದುಡಿದೆವೋ ತಿಳಿಯದಾಗಿದೆ ಎಂದು ಕಾರ್ಯಕರ್ತರು ಪಕ್ಷದ ಸ್ಥಳೀಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ರಾಮನಗರ: ರೇಷ್ಮೆ, ರಣಹದ್ದು, ಶೋಲೆಯ ನೆನಪಿನಂಗಳ)
ಶಾಸಕ ಬಾಲಕೃಷ್ಣ ಆಯೋಜಿಸಿದ್ದ ಪೂರ್ವಭಾವಿ ಸಭೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಭಾಕರ ರೆಡ್ಡಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದು, ಈ ನಿಟ್ಟಿನಲ್ಲಿ ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ನಗರದ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ಆಯೋಜಿಸಲಾಗಿತ್ತು. ಸಭೆ ಆರಂಭವಾಗುತ್ತಿದ್ದಂತೆ ನಾಯಕರಿಗೆ ಮಾತನಾಡಲು ಅವಕಾಶ ನೀಡದೆ ಕಾರ್ಯಕರ್ತರು ಸಭೆಯಲ್ಲಿ ಗದ್ದಲದ ವಾತಾವರಣ ನಿರ್ಮಿಸಿದರು.

ಡಿಕೆಶಿ ಸೋದರರೆದುರು ಉಳಿಗಾಲ ಇಲ್ಲ ಅಷ್ಟೇ:
ಪ್ರಸ್ತುತ ಸ್ಥಳೀಯ ಶಾಸಕರಾದ ಕುಮಾರಸ್ವಾಮಿ ಅವರು ಸಭೆ ಕರೆದು, ಕಾರ್ಯಕರ್ತರ ಒಪ್ಪಿಗೆ ಪಡೆಯಬೇಕು. ಆ ನಂತರವಷ್ಟೇ ಅವರು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಬಗ್ಗೆ ಆಲೋಚಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ ಡಿಕೆಶಿ ಸೋದರರ ಎದುರು ರಾಜಕೀಯ ಮಾಡುವುದು ಹೇಗೆ? ಮುಂದೆ ಇಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಉಳಿಗಾಲ ಇಲ್ಲ ಅಷ್ಟೇ ಎಂದೂ ಕಾರ್ಯಕರ್ತರು ಆತಂಕಅಸಮಾಧಾನ ವ್ಯಕಜ್ತಪಡಿಸಿದರು ಎಂದು ಮೂಲಗಳು ತಿಳಸಿಇವೆ.

ಮೂರು ತಿಂಗಳಿಗೊಂದು ಚುನಾವಣೆ ಯಾರಿಗೆ ಬೇಕು?
ಶಾಸಕ ಕುಮಾರಸ್ವಾಮಿ ಅವರ ನಡೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ ಹಿರಿಯ ನಾಯಕ ಕೃಷ್ಣಪ್ಪ ಅವರು ಮೂರು ತಿಂಗಳಿಗೊಂದು ಚುನಾವಣೆ ಯಾರಿಗೆ ಬೇಕು? ಮತ್ತೆ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಮೂಲಕ ಮತ್ತೊಂದು ಚುನಾವಣೆಗೆ ಮುಂದಾಗಿದ್ದಾರೆ. ಇವರು ಇಷ್ಟು ದಿನ ಅಧಿಕಾರದಲ್ಲಿದ್ದು ರಾಮನಗರಕ್ಕೆ ನೀಡಿದ ಕೊಡುಗೆ ಏನು? ಇಲ್ಲೊಂದೆರಡು ಕಟ್ಟಡ ಕಟ್ಟಿದ್ದು ಬಿಟ್ಟರೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೆಯೇ ಇದೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತ ಕಷ್ಟವನ್ನು ಶಾಸಕ ಕುಮಾರಸ್ವಾಮಿ ಅವರು ಆಲಿಸಿಲ್ಲ ಎಂದು ತಮ್ಮ ಆಕ್ರೋಶ/ ಅಸಮಾಧಾನ ಹೊರಹಾಕಿದರು.

ಜೆಡಿಎಸ್ ಕಾರ್ಯಕರ್ತ ರವಿ ಕೈಯಲ್ಲಿ ವಿಷದ ಬಾಟಲಿ
ರಾಯರದೊಡ್ಡಿಯ ಜೆಡಿಎಸ್ ಕಾರ್ಯಕರ್ತ ರವಿ ವಿಷದ ಬಾಟಲಿಯೊಂದಿಗೆ ಸಭೆಯಲ್ಲಿ ಪ್ರತ್ಯಕ್ಷರಾಗಿ ಆತಂಕ ತಂದರು. ಎಚ್ ಡಿ ಕುಮಾರಸ್ವಾಮಿ ಅವರು ಯಾವುದೇ ಕಾರಣಕ್ಕೂ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಬಾರದು. ಒಂದು ವೇಳೆ ಅವರು ಅಲ್ಲಿಂದ ಸ್ಪರ್ಧಿಸಿದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷಯದ ಬಾಟಲಿ ಎತ್ತಿ ಹಿಡಿದಾಗ ಸಭೆ ಆತಂಕ ಮಡುವಿಗೆ ಜಾರಿತು.

ಬಿಜೆಪಿ ಹೋಗುತ್ತೇವಷ್ಟೇ:
ಕುಮಾರಸ್ವಾಮಿ ಅವರು ಈಗಲೇ ಎಚ್ಚೆತ್ತು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ವಿಚಾರದಿಂದ ಹಿಂದೆಸರಿಯಬೇಕು. ಇಲ್ಲವಾದಲ್ಲಿ ನಾವು ಬಿಜೆಪಿಗೆ ಹೀಗಿ, ಆ ಪಕ್ಷಕ್ಕೇ ಮತ ಹಾಕುತ್ತೇವಷ್ಟೇ ಎಂದು ಬೆದರಿಕೆ/ ಎಚ್ಚರಿಕೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂ. ಗ್ರಾ. ಅಭ್ಯರ್ಥಿ ಪ್ರಭಾಕರ ರೆಡ್ಡಿಗೆ ಇರುಸುಮುರುಸು, ಮುನಿಸು
ಇನ್ನು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಭಾಕರ ರೆಡ್ಡಿ ಅವರು ಕಾರ್ಯಕರ್ತರ ಮುನಿಸು ಮತ್ತು ಪಕ್ಷದಲ್ಲಿ ಬೆಳವಣಿಗಳಿಂದ ಇರುಸುಮುರುಸುಗೊಂಡಿದ್ದಾರೆ. ಮುಂದೆ ಚುನಾವಣೆಯಲ್ಲಿ ಕಾರ್ಯಕರ್ತರ ಒಲವು ಯಾರತ್ತಲೋ ಎಂದು ಆತಂಕಗೊಂಡಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.












Click it and Unblock the Notifications