LPG Subsidy: ಎಲ್‌ಪಿಜಿ ಸಬ್ಸಿಡಿ ಹಣ ಬರಲು ಇದು ಕಡ್ಡಾಯ, ಇಲ್ಲದಿದ್ದರೆ ರದ್ದು!

ಎಲ್‌ಪಿಜಿ ಸಿಲಿಂಡರ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ ಇಲ್ಲಿದೆ. ಕೇಂದ್ರ ಸರ್ಕಾರವು ಸಾರ್ವಜನಿಕರ ಹೊರೆ ತಗ್ಗಿಸಲು ಎಲ್‌ಪಿಜಿಗೆ ಸಬ್ಸಿಡಿ ಘೋಷಣೆ ಮಾಡಿದೆ. ಇದು ಗ್ರಾಹಕರ ಖಾತೆಗೆ ನೇರವಾಗಿ ಜಮೆ ಕೂಡ ಆಗುತ್ತಿದೆ. ಆದರೆ ಇನ್ನು ಮುಂದೆ ನಿಮಗೆ ಸಬ್ಸಿಡಿ ಹಣ ಸಿಗಬೇಕಾದರೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿರಲೇಬೇಕು. ಇಲ್ಲದಿದ್ದರೆ ನಿಮ್ಮ ಸಬ್ಸಿಡಿ ರದ್ದಾಗುವ ಸಾಧ್ಯತೆ ಇದೆ. ಏನು ಈ ಹೊಸ ನಿಯಮ ಮಾಹಿತಿ ತಿಳಿಯಲು ಮುಂದೆ ಓದಿ.

ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ ಎಲ್‌ಪಿಜಿ ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಈ ಹಣಕಾಸು ವರ್ಷದಿಂದ ಪ್ರಾರಂಭಿಸಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಗ್ರಾಹಕರು ಸೇರಿದಂತೆ ಸಬ್ಸಿಡಿ ಪಡೆಯುವ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯಗೊಳಿಸುವುದಾಗಿ ಹೇಳಿವೆ. ಸಬ್ಸಿಡಿ ಪಡೆಯುವುದನ್ನು ಮುಂದುವರಿಸಲು ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣಕ್ಕೆ ಒಳಗಾಗಬೇಕು. ಈ ಬಗ್ಗೆ ಗೃಹಬಳಕೆ ಎಲ್‌ಪಿಜಿ ಗ್ರಾಹಕರಿಗೆ ತಿಳಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈಗಾಗಲೇ ಒಎಂಸಿಗಳಿಗೆ ನಿರ್ದೇಶನ ಸಹ ನೀಡಿದೆ.

LPG Subsidy Update e-KYC Mandatory For All No Verification No Subsidy

ಹೀಗಾಗಿ ಇನ್ನು ಮುಂದೆ ಮರುಪೂರಣ ಖರೀದಿಗಳ ಮೇಲೆ ಸಬ್ಸಿಡಿ ಪಡೆಯುವ ದೇಶೀಯ ಎಲ್‌ಪಿಜಿ ಗ್ರಾಹಕರು ಬಯೋಮೆಟ್ರಿಕ್ ಆಧಾರ್ ದೃಢೀಕರಣಕ್ಕೆ ಒಳಗಾಗದೆ ಇದ್ದರೆ ಯಾವುದೇ ಸಬ್ಸಿಡಿ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್‌ಪಿಜಿ ದುರುಪಯೋಗ ಮತ್ತು ಸೋರಿಕೆಯನ್ನು ತಡೆಗಟ್ಟಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಒಎಂಸಿಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಇ-ಕೆವೈಸಿ ಮಾಡದವರಿಗೆ ಸಬ್ಸಿಡಿ ನಿಲ್ಲಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.

ಎಲ್‌ಪಿಜಿ ಸಬ್ಸಿಡಿ ಪಡೆಯುವ ಗ್ರಾಹಕರು ಪ್ರತಿ ವರ್ಷವೂ ಈ ಕೆವೈಸಿಗೆ ಒಳಗಾಗಬೇಕು ಎಂದು ತೈಲ ಕಂಪನಿಗಳು ಸ್ಪಷ್ಟವಾಗಿ ಹೇಳಿವೆ. ಈ ಹಣಕಾಸು ವರ್ಷದ ಇ-ಕೆವೈಸಿ ಮಾರ್ಚ್ 31ರೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡರೆ ಮಾತ್ರವೇ ಸಬ್ಸಿಡಿ ಹಣ ಮರುಪಾವತಿಸಲಾಗುತ್ತದೆ. ಇಲ್ಲದಿದ್ದರೆ, ಅದನ್ನು ಶಾಶ್ವತವಾಗಿ ರದ್ದು ಮಾಡುವುದಾಗಿ ಹೇಳಿವೆ. ಅಲ್ಲದೆ ಕೂಡಲೇ ಈ ಪ್ರಕ್ರಿಯೆಯನ್ನು ಡೆಡ್‌ಲೈನ್‌ವೊಳಗೆ ಪೂರ್ಣಗೊಳಿಸಬೇಕು ಎಂದು ತೈಲ ಕಂಪನಿಗಳು ಹೇಳಿದೆ.

ಇನ್ನು ಮುಂದೆ ಪ್ರತಿ ಹಣಕಾಸು ವರ್ಷದಲ್ಲಿ ಒಮ್ಮೆ ಇ-ಕೆವೈಸಿಗೆ ಮಾಡಿಸುವುದು ಕಡ್ಡಾಯ. ಕೇಂದ್ರ ಸರ್ಕಾರವು ವರ್ಷಕ್ಕೆ ಗರಿಷ್ಠ 9 ಸಿಲಿಂಡರ್‌ಗಳಿಗೆ ಈ ಸಬ್ಸಿಡಿ ನೀಡುತ್ತಿದೆ. ಹೀಗಾಗಿ ಹಣ ಬಿಡುಗಡೆ ಮಾಡುವ ಮುನ್ನ ಪರಿಶೀಲನೆ ಪೂರ್ಣಗೊಳಿಸಿದ ನಂತರ 8 ಮತ್ತು 9ನೇ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡುತ್ತಿದೆ. ಒಂದು ವೇಳೆ ಪರಿಶೀಲನೆ ತಡವಾದರೆ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ಇ-ಕೆವೈಸಿ ಮಾಡಿಸುವುದು ಹೇಗೆ?

ಎಲ್‌ಪಿಜಿ ಗ್ರಾಹಕರು ಚಿಂತೆಪಡಬೇಕಿಲ್ಲ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ನೀವು ಸಮೀಪದ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಬಹುದು. ಲಭ್ಯವಿರುವ ಅಪ್ಲಿಕೇಶನ್‌ ಮೂಲಕವೂ ಇದನ್ನು ಮಾಡಬಹುದು. ಸಬ್ಸಿಡಿ, ಇ-ಕೆವೈಸಿ ಪ್ರಕ್ರಿಯೆ ಅಥವಾ ಬಯೋಮೆಟ್ರಿಕ್ ಪರಿಶೀಲನಾ ವಿಧಾನಗಳ ಕುರಿತು ಸಂಪೂರ್ಣ ವಿವರಗಳನ್ನು ತಿಳಿಯಲು http://www.pmuy.gov.in/e-kyc.html ವೆಬ್‌ಸೈಟ್‌ಗೆ ಕೂಡ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+