LPG Cylinder Price Down: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಇಳಿಕೆ!
LPG Cylinder Price Down: ಸಾಮಾನ್ಯವಾಗಿ ತಿಂಗಳ ಪ್ರತಿ ಮೊದಲ ದಿನವೂ ಕೆಲವೊಂದು ವಸ್ತುಗಳ ಬೆಲೆ ಇಳಿಕೆ ಆಗುವುದು ಇದೆ. ಅದೇ ರೀತಿ ಜೂನ್ 1ಕ್ಕೆ ಕೆಲವೊಂದು ಪ್ರಮುಖ ವಸ್ತುಗಳ ಬೆಲೆ ಇಳಿಕೆಯಾಗಿದೆ. ಅದರಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯೂ ಒಂದಾಗಿದೆ. ತೈಲ ಮಾರುಕಟ್ಟೆಯ ಕಂಪನಿಗಳು ಸಿಲಿಂಡರ್ ಬೆಲೆಯನ್ನು ಭರ್ಜರಿ ಇಳಿಕೆ ಮಾಡಿವೆ. ಹಾಗಾದರೆ ಜೂನ್ 1ರಿಂದ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯನ್ನು ಭರ್ಜರಿ ಇಳಿಕೆ ಮಾಡಿವೆ. ಆದರೆ, ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 19 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 24 ರೂಪಾಯಿ ಇಳಿಕೆಯಾಗಿದೆ. ಇಂದಿನಿಂದಲೇ 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಆದರೆ ಮನೆಯಲ್ಲಿ ಬಳಸುವ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಆಗಿಲ್ಲ.

ಇಳಿಕೆಯಾಗದ ಗೃಹ ಬಳಕೆ ಸಿಲಿಂಡರ್ ಬೆಲೆ: ಇನ್ನು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿಲ್ಲ. ಇದೇ ವರ್ಷ ಏಪ್ರಿಲ್‌ನಿಂದಲೂ ಮನೆ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತಿಲ್ಲ. ಹೀಗಾಗಿ, ಜನ ದುಬಾರಿ ಬೆಲೆಗೆ ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಂತೆ ಆಗಿದೆ. ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಗಣನೀಯ ಇಳಿಕೆಯಾಗಿಲ್ಲ. ಇನ್ನು 14 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಇಳಿಕೆಯಾಗಿಲ್ಲ.
ಹೊಸ ಗ್ಯಾಸ್ ಸಿಲಿಂಡರ್ ಬೆಲೆ ಏನಿದೆ ?
ಜೂನ್ 1ರಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1723.50 ರೂಪಾಯಿ ಆಗಿದೆ. ಮೊದಲ ಬೆಲೆಯು 1747.50 ರೂಪಾಯಿ ಇತ್ತು. ಬೆಂಗಳೂರಿನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯು 1,796 ರೂಪಾಯಿ ಆಗಿದೆ.
ಎಟಿಎಂ ವಿತ್ ಡ್ರಾ ಹೊಸ ಕಾನೂನು: ಇನ್ನು ಜೂನ್ 1 ರಿಂದ ಹಲವು ಹೊಸ ಬದಲಾವಣೆಗಳು ಆಗುತ್ತಿವೆ. ಅದರಲ್ಲಿ ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಗಳು ಸಹ ಸೇರಿವೆ. ಎಟಿಎಂ ವಿತ್ ಡ್ರಾ / ಎಟಿಎಂನಿಂದ ಹಣ ತೆಗೆಯುವುದು ಇಂದಿನಿಂದ ನಿಮಗೆ ದುಬಾರಿ ಆಗಲಿದೆ. ಇಂದಿನಿಂದ ಎಟಿಎಂಗಳಲ್ಲಿ 5 ವಿತ್ ಡ್ರಾಗಳು ಉಚಿತವಾಗಿ ಇರಲಿದೆ. ಖಾಸಗಿ ಬ್ಯಾಂಕ್‌ಗಳಲ್ಲಿ ಮೂರು ಉಚಿತ ವಹಿವಾಟುಗಳು ಮಾತ್ರ ಲಭ್ಯವಿರಲಿದೆ. ಇದಾದ ಮೇಲೆ ಮಾಡುವ ವಿತ್ ಡ್ರಾಗೆ ಶುಲ್ಕ ಆಗಲಿದೆ. ಇನ್ಮುಂದೆ ಉಚಿತ ವಿತ್ ಡ್ರಾಗೆ ಮಿತಿ ಇರಲಿದ್ದು ಇದಾದ ಮೇಲೆ ಎಟಿಎಂನಿಂದ ಹಣ ವಿತ್ ಡ್ರಾ ಮಾಡಿದರೆ 21 ರೂಪಾಯಿ ಶುಲ್ಕ ಆಗಲಿದೆ.












Click it and Unblock the Notifications