Ration Card and LPG New Updates: ಎಲ್‌ಪಿಜಿ ಸಿಲಿಂಡರ್ & ರೇಷನ್ ಕಾರ್ಡ್ 4 ಹೊಸ ಬದಲಾವಣೆ: ಜೂನ್ 1ರಿಂದಲೇ ಅನ್ವಯ!
Ration Card and LPG New Updates: ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್ ಹಾಗೂ ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಬದಲಾವಣೆಗಳು ಜೂನ್ 1ರಿಂದಲೇ ಅನ್ವಯವಾಗಲಿದೆ. ರೇಷನ್ ಕಾರ್ಡ್ ಹಾಗೂ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ಬದಲಾವಣೆಗಳೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಜನರು ರೇಷನ್ ಕಾರ್ಡ್ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಸುಲಭವಾಗಿ ಪಡೆಯಬೇಕು ಎನ್ನುವ ಉದ್ದೇಶದಿಂದ 4 ಪ್ರಮುಖ ಬದಲಾವಣೆಗಳನ್ನು ತಂದಿದೆ. ರೇಷನ್ ಕಾರ್ಡ್ ಹಾಗೂ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಹೊಸ ಬದಲಾವಣೆಗಳನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಇನ್ನು ಇಲ್ಲಿಯ ವೆರೆಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ವಾರ್ಷಿಕವಾಗಿ ನವೀಕರಣ ಮಾಡಲಾಗುತ್ತಿತ್ತು. ಆದರೆ, ಇನ್ಮುಂದೆ ಆರು ತಿಂಗಳ ಅವಧಿಯಲ್ಲಿ ನವೀಕರಣ ಮಾಡಬಹುದಾಗಿದೆ. ಅಲ್ಲದೇ ಎಲ್‌ಪಿಜಿ ಕನೆಕ್ಷನ್ ಪಡೆಯುವುದು ಹಾಗೂ ನವೀಕರಿಸುವುದು ಹಿಂದಿನಂತೆ ಕಷ್ಟವಾಗುವುದಿಲ್ಲ ಎಂದು ಹೇಳಲಾಗಿದೆ.

ನಾಲ್ಕು ಪ್ರಮುಖ ಬದಲಾವಣೆಗಳು: ಇನ್ನು ಈಗಾಗಲೇ ಹೇಳಿರುವಂತೆ ರೇಷನ್ ಕಾರ್ಡ್ ಹಾಗೂ ಎಲ್‌ಪಿಜಿ ಸಿಲಿಂಡರ್‌ಗೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಬದಲಾವಣೆಗಳು ಆಗಲಿವೆ. ಅವುಗಳಲ್ಲಿ ಮುಖ್ಯವಾಗಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಬೇಕು. ಸಬ್ಸಿಡಿ ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿಕೊಳ್ಳಿ. ಡಿಜಿಟಲ್ ವ್ಯವಸ್ಥೆಗೆ ತಕ್ಕಂತೆ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕು.
ರೇಷನ್ ಕಾರ್ಡ್‌ನಲ್ಲಿ ಹೊಸ ಬದಲಾವಣೆ ಏನು ?
ಹೊಸ ರೇಷನ್ ಕಾರ್ಡ್‌ಗಳನ್ನು ಡಿಜಿಟಲ್ ವ್ಯವಸ್ಥೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದರಿಂದ ರೇಷನ್ ವಿತರಣೆ ಹಾಗೂ ಟ್ರ್ಯಾಕಿಂಗ್ ಸುಲಭವಾಲಿದೆ. ರೇಷನ್ ಅಂಗಡಿಗಳಲ್ಲಿ ರೇಷನ್ ಪಡೆಯುವುದಕ್ಕೆ ಇನ್ಮುಂದೆ ಸರತಿ ಸಾಲಿನಲ್ಲಿ ತಾಸುಗಟ್ಟಲೆ ಕಾಯುವ ಅವಶ್ಯಕತೆ ಇರುವುದಿಲ್ಲ. ಕಡಿಮೆ ಅವಧಿಯಲ್ಲಿ ರೇಷನ್ ಸಿಗಲಿದೆ. ಡಿಜಿಟಲ್ ವ್ಯವಸ್ಥೆ ಜಾರಿ ಮಾಡುವುದರಿಂದ ಅನವಶ್ಯಕ ತಪ್ಪುಗಳು ಹಾಗೂ ವಂಚನೆಗಳಿಗೆ ಬ್ರೇಕ್ ಬೀಳಲಿದೆ. ಆಧಾರ್ ಕಾರ್ಡ್‌ಲಿಂಕ್‌ನಿಂದ ಈ ಸೌಲಭ್ಯ ಫಲಾನುಭವಿಗಳಿಗೆ ಸರಿಯಾಗಿ ಸಿಗಲಿದೆ.
ಹೊಸ ನಿಯಮದ ಪ್ರಯೋಜನಗಳೇನು ?
ಎಲ್‌ಪಿಜಿ ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗುವುದರಿಂದ ನಗದು ನಿರ್ವಹಣೆ ಸುಲಭವಾಗಲಿದೆ. ರೇಷನ್ ವಿತರಣೆಯಲ್ಲಿ ಆಗುವ ತಪ್ಪುಗಳು ಮತ್ತು ವಿಳಂಬಗಳು ಇನ್ಮುಂದೆ ಇರುವುದಿಲ್ಲ. ಅಲ್ಲದೇ ಎಲ್‌ಪಿಜಿ ಬಳಕೆದಾರರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯ ಇರಲಿದೆ. ಡಿಜಿಟಲ್ ವ್ಯವಸ್ಥೆಯಿಂದ ಸರ್ಕಾರಿ ಯೋಜನೆಗಳು ಬೇಗ ಹಾಗೂ ಸುಲಭವಾಗಿ ಸಿಗಲಿದೆ ಎಂದು ಹೇಳಲಾಗಿದೆ.












Click it and Unblock the Notifications