ಯಡಿಯೂರಪ್ಪಗೆ ಮತ್ತೆ 5 ಡಿನೋಟಿಫಿಕೇಷನ್ ಕಂಟಕ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 06: ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮತ್ತೆ ಡಿ ನೋಟಿಫಿಕೇಷನ್ ಕಂಟಕ ಶುರುವಾಗಿದೆ. ಐದು ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಿರಾಜಿನ್ ಬಾಷಾ ಅವರು ಮತ್ತೆ ದೂರು ಸಲ್ಲಿಸಿದ್ದಾರೆ.

ಐದು ಅಕ್ರಮ ಡಿ-ನೋಟಿಫಿಕೇಷನ್‌ ಪ್ರಕರಣಗಳಲ್ಲಿ ಹಿಂದಿನ ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರು ನೀಡಿದ್ದ ಪೂರ್ವಾನುಮತಿಯನ್ನು ಕೋರ್ಟ್‌ ರದ್ದುಪಡಿಸಿದೆ.

2010ರ ಜನವರಿ 22 ಮತ್ತು 24ರಂದು ಸಿರಾಜಿನ್ ಬಾಷಾ ಅವರು 5 ಪ್ರತ್ಯೇಕ ಖಾಸಗಿ ದೂರುಗಳನ್ನು ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2011ರಲ್ಲಿ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಅವರು ಯಡಿಯೂರಪ್ಪ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು.

ರಾಜ್ಯಪಾಲರ ಕ್ರಮವನ್ನು ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ವಿನೀತ್ ಸರಣ್ ಅವರಿದ್ದ ಪೀಠ ರಾಜ್ಯಪಾಲರು ನೀಡಿರುವ ಪೂರ್ವಾನುಮತಿ ಕಾನೂನು ಬಾಹಿರವಾಗಿದೆ ಎಂದು ಹೇಳಿತ್ತು.

#1 ರಾಚೇನಹಳ್ಳಿ ಡಿನೋಟಿಫಿಕೇಷನ್

#1 ರಾಚೇನಹಳ್ಳಿ ಡಿನೋಟಿಫಿಕೇಷನ್

* ರಾಚೇನಹಳ್ಳಿಯಲ್ಲಿ 1 ಎಕರೆ 2 ಗುಂಟೆ ಭೂಮಿ ಡಿನೋಟಿಫಿಕೇಷನ್ ಮಾಡಿ ಕುಟುಂಬ ಸದಸ್ಯರಿಗೆ ಮಂಜೂರು.
* ಸರ್ವೆ ನಂ 56ರಲ್ಲಿನ 16 ಗುಂಟೆ ಜಾಗವನ್ನು ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಪ್ರೈವೇಟ್‌ ಲಿಮಿಟೆಡ್‌ಗೆ ವರ್ಗಾವಣೆ
* ಯಡಿಯೂರಪ್ಪ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ. ಆರ್.ಎನ್, ಸೋಹನ್ ಕುಮಾರ್ ಆರೋಪಿಗಳು

#2 ಅರಕೆರೆ ಡಿನೋಟಿಫಿಕೇಷನ್

#2 ಅರಕೆರೆ ಡಿನೋಟಿಫಿಕೇಷನ್

* ಅರಕೆರೆಯಲ್ಲಿ 2.5 ಎಕರೆಗೆ ಭೂಮಿಯನ್ನು ಬೇನಾಮಿ ಹೆಸರಿಗೆ ಅಕ್ರಮವಾಗಿ ಡಿನೋಟಿಫಿಕೇಷನ್
* ದೇವರಚಿಕ್ಕನಹಳ್ಳಿಯಲ್ಲಿ ಕೆ.ಮಂಜುನಾಥ್ ಅವರಿಗೆ 1.7 ಎಕರೆ ಡಿ ನೋಟಿಫಿಕೇಷನ್
* ಗೆದ್ದಲಹಳ್ಳಿಯಲ್ಲಿ ಮಂಜುನಾಥ್ ಮತ್ತು ಕೆ.ಶಿವಪ್ಪ ಎನ್ನುವವರಿಗೆ 4 ಎಕರೆ ಅಕ್ರಮವಾಗಿ ಡಿ ನೋಟಿಫಿಫೈ
* ಬಿಎಸ್​ವೈ, ಎನ್.ಅಕ್ಕಮಹಾದೇವಿ, ಎನ್.ಎಸ್.ಮಹಾಬಲೇಶ್ವರ, ಸತ್ಯಕುಮಾರಿ, ಮೋಹನ ರಾಜ್ ಮುಂತಾದವರು ಆರೋಪಿಗಳು.

#3 ಉತ್ತರಹಳ್ಳಿ ಡಿನೋಟಿಫಿಕೇಷನ್

#3 ಉತ್ತರಹಳ್ಳಿ ಡಿನೋಟಿಫಿಕೇಷನ್

* ರಾಚೇನಹಳ್ಳಿಯಲ್ಲಿ 9 ಎಕರೆ ಜಮೀನನ್ನು ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ಡಿ ನೋಟಿಫೈ
* ಉತ್ತರಹಳ್ಳಿಯಲ್ಲಿ ಹೇಮಚಂದ್ರ ಸಾಗರ್ ಹೆಸರಿಗೆ 10 ಎಕರೆಗೆ ಅಕ್ರಮವಾಗಿ ಡಿ ನೋಟಿಫೈ
* ಯಡಿಯೂರಪ್ಪ, ಪ್ರವೀಣ್ ಚಂದ್ರ, ಎಸ್.ಎಸ್.ಉಗೇಂದ್ರ, ನಮ್ರತಾ ಶಿಲ್ಪಿ, ಆರ್.ಸುಗುಣಾ, ಹೇಮಚಂದ್ರ ಸಾಗರ್ ಮುಂತಾದವರು ಆರೋಪಿಗಳು.

#4 ಶ್ರೀರಾಂಪುರದಲ್ಲಿ ಡಿನೋಟಿಫಿಕೇಷನ್

#4 ಶ್ರೀರಾಂಪುರದಲ್ಲಿ ಡಿನೋಟಿಫಿಕೇಷನ್

* ಪ್ರಕಾಶ್ ಶೆಟ್ಟಿ ಎಂಬುವವರಿಗೆ ನಗರದ ವಿವಿಧೆಡೆ 3.35 ಎಕರೆ ಭೂಮಿ ಅಕ್ರಮವಾಗಿ ಡಿ ನೋಟಿಫೈ
* ಶ್ರೀರಾಂಪುರದಲ್ಲಿ ಡಾ.ಬಿ.ಆರ್.ಶೆಟ್ಟಿಗೆ 11.25 ಎಕರೆ ಅಕ್ರಮವಾಗಿ ಡಿನೋಟಿಫೈ

* ಬಿಎಸ್‌ವೈ, ಧವಳಗಿರಿ ಪ್ರಾಪರ್ಟೀಸ್, ಆದರ್ಶ ಡೆವಲಪರ್ಸ್, ಕರುಣೇಶ್ ಆರೋಪಿಗಳು

#5 ನಾಗರಭಾವಿಯಲ್ಲಿ ಡಿನೋಟಿಫಿಕೇಷನ್

#5 ನಾಗರಭಾವಿಯಲ್ಲಿ ಡಿನೋಟಿಫಿಕೇಷನ್

* ನಾಗರಭಾವಿಯಲ್ಲಿ 5.13 ಎಕರೆ ಅಕ್ರಮ ಡಿ ನೋಟಿಫೀಕೇಷನ್,

* ಸಂಸದರಾಗಿದ್ದ ಬಿ.ವೈ.ರಾಘವೇಂದ್ರ ಹಾಗೂ ಶಾಸಕಿಯಾಗಿದ್ದ ಭಾರತಿ ಶೆಟ್ಟಿ ಅವರಿಗೆ ಆರ್.ಎಂ.ವಿ. ಲೇಔಟ್ ನಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ,

* ಬಿಎಸ್​ವೈ, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಆರ್.ಎನ್.ಸೋಹನ್​ಕುಮಾರ್, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮುಂತಾದವರು ಆರೋಪಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lokayukta Special Court today received a private complaint against former CM BS Yeddyurappa in five denotification cases. On January 21, 2011 then governor H.R Bharadwaj gave prosecution sanction against Yeddyurappa.
Please Wait while comments are loading...