ಲೋಕಾಯುಕ್ತ ದಾಳಿ : ರೇಣುಕಾಚಾರ್ಯ ಮನೆಯಲ್ಲಿ ಸಿಕ್ಕಿದ್ದೇನು?

ದಾವಣಗೆರೆ, ಮೇ 29 : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸ, ಸಂಬಂಧಿಕರ ಮನೆ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದೆ. 3 ಲಕ್ಷ ಹಣ, 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ.

ರೇಣುಕಾಚಾರ್ಯ ಅವರ ಹೊನ್ನಾಳಿ, ಶಿವಮೊಗ್ಗ ಮತ್ತು ಬೆಂಗಳೂರಿನ ನಿವಾಸ. ಸಂಬಂಧಿಕರ ಮನೆ, ಶಿವಮೊಗ್ಗದ ಬಾಪೂಜಿ ವಿದ್ಯಾಸಂಸ್ಥೆಯ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಹಾಸ್ಟೆಲ್‌ ಮೇಲೆ ಗುರುವಾರ ಏಕಕಾಲಕ್ಕೆ ದಾಳಿ ನಡೆದಿದ್ದು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.[ರೇಣುಕಾಚಾರ್ಯರಿಗೆ 'ಹೊನ್ನಾಳಿ ಹೊಡೆತ']

renukacharya

3 ಲಕ್ಷ ಹಣ ವಶಕ್ಕೆ : ದಾಳಿಯ ವೇಳೆ ಲೋಕಾಯುಕ್ತ ಪೊಲೀಸರು 3 ಲಕ್ಷ ಹಣ, 10 ಲಕ್ಷ ಮೌಲ್ಯದ ಆಭರಣ, 20 ವಿವಿಧ ವಾಹನ ಹಾಗೂ ನಿವೇಶನಗಳ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. [ಅಕ್ರಮ ಆಸ್ತಿ : ರೇಣುಕಾಚಾರ್ಯ ವಿರುದ್ಧ ತನಿಖೆ]

ಕಾಲೇಜಿನ ಮೇಲೆ ದಾಳಿ : ಶಿವಮೊಗ್ಗದ ಬಾಪೂಜಿ ವಿದ್ಯಾಸಂಸ್ಥೆಯ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಹಾಸ್ಟೆಲ್‌ ಮೇಲೆ ದಾಳಿ ನಡೆಸಲಾಗಿದೆ. 10 ವಿವಿಧ ವಾಹನಗಳು ಮತ್ತು ಸುಮಾರು 80 ಲಕ್ಷ ಮೌಲ್ಯದ ಪಿಠೋಪಕರಣಗಳ ಮೌಲ್ಯ ಈ ವೇಳೆ ಪತ್ತೆಯಾಗಿದೆ. [ಕರ್ನಾಟಕದಲ್ಲಿ ಅಕ್ರಮ ಆಸ್ತಿಗಳಿಕೆ ಆರೋಪ ಯಾರ ಮೇಲಿದೆ?]

ಒಂದು ಮನೆ, 5 ಕಾರು : ದಾವಣಗೆರೆಯಲ್ಲಿ ಅವರು ಆಸ್ತಿ ಖರೀದಿ ಮಾಡಿರುವ ಬಗ್ಗೆ ಸದ್ಯಕ್ಕೆ ದಾಖಲೆ ಲಭ್ಯವಾಗಿಲ್ಲ. ಆದರೆ, ಹೊನ್ನಾಳಿಯಲ್ಲಿ ಅವರು ಒಂದು ಮನೆ ಹೊಂದಿದ್ದಾರೆ. 5 ಕಾರು, 1 ಟ್ರಾಕ್ಟರ್ ಇದೆ. ಬೆಂಗಳೂರಿನಲ್ಲಿರುವ ರೇಣುಕಾಚಾರ್ಯ ಅವರ ಮನೆ ತಿಪ್ಪೇಸ್ವಾಮಿ ಎಂಬುವವರ ಹೆಸರಿನಲ್ಲಿದೆ.

ರೇಣುಕಾಚಾರ್ಯ ಅವರು ಹೇಳುವುದೇನು : 'ಲೋಕಾಯುಕ್ತ ಪೊಲೀಸರು ನನ್ನ ಸಹಿ ಪಡೆದುಕೊಂಡು ನಮ್ಮ ಮನೆಗೆ ಪ್ರವೇಶ ಮಾಡಿದರು. ತನಿಖೆಯ ಭಾಗಿವಾಗಿ ಈ ಪರಿಶೀಲನೆ ನಡೆದಿದೆ. ಇದು ರಾಜಕೀಯ ಷಡ್ಯಂತ್ರವಾಗಿದ್ದು, ತನಿಖೆಯಿಂದ ನಾನು ನಿರ್ದೋಷಿ ಎನ್ನುವುದು ಸಾಬೀತಾಗಲಿದೆ' ಎಂದು ರೇಣುಕಾಚಾರ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+