ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ಕಡೆ ಲೋಕಾದಾಳಿ, 9 ಕೋಟಿ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ಆ.26 : ಮಂಗಳವಾರ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ಒಟ್ಟು 9 ಕೋಟಿ ರೂ.ಗಳಷ್ಟು ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.

ಮಂಗಳವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಮೈಸೂರು ,ಯಾದಗಿರಿ, ಕೋಲಾರ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.

Lokayukta

ಬೆಂಗಳೂರಿನಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಅಮರೇಶ್ ಬಾರಕೇರ್ ನೇತೃತ್ವದಲ್ಲಿ ಬಸವೇಶ್ವರ ಲೇಔಟ್‌ನಲ್ಲಿರುವ ನಗರಾಭಿವೃದ್ಧಿ ಇಲಾಖೆ ಎಇಇ ಸೀತಾರಾಮ್ ಅವರ ನಿವಾಸ ಹಾಗೂ ಹಲಸೂರು ಗೇಟ್ ಬಳಿ ಇರುವ ಕಚೇರಿಯ ಮೇಲೆ ದಾಳಿ ನಡೆಸಲಾಗಿತ್ತು. [ಲೋಕಾಯುಕ್ತ ಬಲೆಗೆ ಬಿದ್ದರೆ ಅಧಿಕಾರಿಗಳು ಅಮಾನತು]

ಮೈಸೂರಿನಲ್ಲಿ ಲೋಕಾಯುಕ್ತ ಎಸ್‌ಪಿ ಜಗದೀಶ್ ಪ್ರಸಾದ್ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಇನ್ನು ಕೋಲಾರದಲ್ಲಿ ನಗರ ಸಭೆ ಆಯುಕ್ತ ಜಗದೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು.

ಶಿವಮೊಗ್ಗದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಕಿರಿಯ ಸಹಾಯಕ ಯು.ಶಿವಾನಂದ ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ತುಮಕೂರಿನಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಥಮ ದರ್ಜೆ ಸಹಾಯಕರಾದ ಉಮೇಶ್ ಮನೆ ಮೇಲೆ ದಾಳಿ ನಡೆಸಲಾಗಿತ್ತು.

ಭ್ರಷ್ಟರ ಆಸ್ತಿ ವಿವರ

ಎನ್‌.ಬಿ.ಸೀತಾರಾಮ್ - 89 ಲಕ್ಷದ 50 ಸಾವಿರ
ಕೆ.ಎನ್.ಜಗದೀಶ್ - 69 ಲಕ್ಷದ 75 ಸಾವಿರ
ರಾಮಕೃಷ್ಣಯ್ಯ - 4 ಕೋಟಿ 52 ಲಕ್ಷ
ಶಿವನಂಜಪ್ಪ - 1 ಕೋಟಿ 15 ಲಕ್ಷ ಉಪ ತಹಶೀಲ್ದಾರ್ [ಬನಶಂಕರಿ ನಾಡಾ ಕಚೇರಿ, ಬೆಂಗಳೂರು]
ಯು.ಶಿವಾನಂದ - 49 ಲಕ್ಷದ 65 ಸಾವಿರ
ಉಮೇಶ್ - 1 ಕೋಟಿ 2 ಲಕ್ಷ
ಭೀಮರಾಯ ಹವಾಲ್ದಾರ - 76 ಲಕ್ಷ 67 ಸಾವಿರ [ಎಇಇ ಪಂಚಾಯತ್ ರಾಜ್ ಇಲಾಖೆ ಶಹಾಪುರ]

English summary
Karnataka Lokayukta police make simultaneous raids on 7 residences/offices of government servants across the State - Bangalore, Mysore, Shimoga, Kolar, Gulbarga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X