ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳು ಇಲ್ಲಿವೆ?
ಬೆಂಗಳೂರು, ಜನವರಿ 13: ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳನ್ನ ಗೆಲ್ಲುವ ಮೂಲಕ ಭರ್ಜರಿ ವಿಜಯ ಸಾಧಿಸಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾರ್ಯವೈಖರಿ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೂ ಕಾರಣವಾಗಿತ್ತು. ಆದರೆ, ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲವಾಗಿದೆ.
ಹೌದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. 65 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಕಾಂಗ್ರೆಸ್ 135 ಸ್ಥಾನಗಳನ್ನ ಪಡೆದಿದ್ರೆ, ಇತ್ತ ಪ್ರಾದೇಶಿಕ ಪಕ್ಷ ಜೆಡಿಎಸ್ 19 ಸ್ಥಾನಗಳನ್ನ ಪಡೆದುಕೊಂಡಿತ್ತು. ರಾಜ್ಯದಲ್ಲಿ ಸರ್ಕಾರ ರಚಿಸಿರುವ ಆಡಳಿತರೂಢ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ 20 ಕ್ಕೂ ಸ್ಥಾನಗಳನ್ನ ಗೆಲ್ಲುವ ಮೂಲಕ ಮತ್ತೆ ಬಿಜೆಪಿ ಸೋಲಿನ ರುಚಿ ತೋರಿಸಲು ಮುಂದಾಗಿದೆ.

ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಮಣಿ ಹಾಕಿದ್ದು, ಮತ್ತೆ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಆಕ್ಟಿವ್ ಆಗುವಂತೆ ಮಾಡಿದೆ. ಈಗಾಗಲೇ ಹಲವು ಸುತ್ತಿನ ಸಭೆಗಳನ್ನ ನಡೆಸಿರುವ ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆಗೆ ಸಿದ್ದತೆಯನ್ನ ನಡೆಸಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಪ್ರವಾಸಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸಿದ್ದತೆಯನ್ನ ನಡೆಸಿದ್ದಾರೆ.
ಇನ್ನೂ ಬಿಜೆಪಿಯಲ್ಲಿ ಹಲವು ಹಾಲಿ ಸಂಸದರು ವೈಯಕ್ತಿಕವಾಗಿಯೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರು ಉತ್ತರ ಭಾಗದ ಸಂಸದರಾದ ಸದಾನಂದಗೌಡರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದು, ಇದೀಗ ರಾಜ್ಯ ನಾಯಕರ ಒತ್ತಡದ ಮೇಲೆ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಅಲ್ಲದೇ ಚಿಕ್ಕಬಳ್ಳಾಪುರ ಸಂಸದರಾದ ಬಚ್ಚೇಗೌಡ ಅವರು ಸಹ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ಚಾಮರಾಜ ನಗರ ಕ್ಷೇತ್ರದ ಸಂಸದರಾದ ಶ್ರೀನಿವಾಸ್ ಪ್ರಸಾದ್ ಅವರು ಸಹ ಚುನಾವಣಾ ಕಣದಿಂದ ಹಿಂದೆ ಉಳಿಯುವ ಬಗ್ಗೆ ಮಾತನಾಡಿದ್ದು, ಚಾಮರಾಜನಗರ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರ ಅಳಿಯನಿಗೆ ಈ ಬಾರೀ ಟಿಕೆಟ್ ಸಿಗುವ ಸಾಧ್ಯತೆ ಇದೆ. ಅಲ್ಲದೇ ಈ ಬಾರೀ ಚುನಾವಣೆಯಲ್ಲಿ ಬಹುತೇಕ 16 ರಿಂದ 18 ಹಾಲಿ ಸಂಸದರಿಗೆ ಟಿಕೆಟ್ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿಗಳ ಕೊರತೆ ಉಂಟಾಗಿದ್ದು, ಹಾಲಿ ಇರುವ ಸಂಸದರಲ್ಲಿ ಹಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಅಲ್ಲದೇ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯನ್ನ ಈ ಕೆಳಗೆ ನೀಡಲಾಗಿದೆ.
ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳು ಇಲ್ಲಿವೆ?
ಬೆಂಗಳೂರು ದಕ್ಷಿಣ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ
ಶಿವಮೊಗ್ಗ
ತುಮಕೂರು
ಚಿಕ್ಕಮಗಳೂರು
ದಕ್ಷಿಣ ಕನ್ನಡ
ಉತ್ತರ ಕನ್ನಡ
ಮೈಸೂರು
ಕಲಬುರ್ಗಿ
ರಾಮಚೂರು
ಹುಬ್ಬಳ್ಳಿ-ಧಾರವಾಡ
ಚಿಕ್ಕೋಡಿ
ವಿಜಯಪುರ
ಬಾಗಲಕೋಟೆ
ಹಾವೇರಿ
ಚಾಮರಾಜನಗರ
ಕೊಪ್ಪಳ

ಲೋಕಸಭಾ ಕ್ಷೇತ್ರಗಳ ಬಿಜೆಪಿ ಸಂಭವನೀಯ ಅಭ್ಯರ್ಥಿ ಇಲ್ಲಿದೆ
ಬೆಂಗಳೂರು ಕೇಂದ್ರ; ಪಿ ಸಿ ಮೋಹನ್
ತುಮಕೂರು: ವಿ ಸೋಮಣ್ಣ
ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರ : ಡಿ ವಿ ಸದಾನಂದಗೌಡ
ಬೆಂಗಳೂರು ಗ್ರಾಮಾಂತರ: ಸಿ ಪಿ ಯೋಗೇಶ್ವರ್
ಮೈಸೂರು: ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್
ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್ ಅಳಿಯ ಡಾ. ಮೋಹನ್, ಕೊಳ್ಳಗಾಲ ಎನ್ ಮಹೇಶ್
ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
ದಾವಣಗೆರೆ: ಜಿ ಎಂ ಸಿದ್ದೇಶ್ವರ್
ಶಿವಮೊಗ್ಗ: ಬಿ ವೈ ರಾಘವೇಂದ್ರ
ಹಾವೇರಿ: ಬಸವರಾಜ ಬೊಮ್ಮಾಯಿ, ಕೆ ಎಸ್ ಈಶ್ವರಪ್ಪ ಪುತ್ರ ಕಾಂತೇಶ್
ಚಿಕ್ಕಬಳ್ಳಾಪುರ: ಡಾ. ಕೆ ಸುಧಾಕರ್, ಅಲೋಕ್ ವಿಶ್ವನಾಥ್, ಎಂಟಿಬಿ ಪುತ್ರ ನಿತೀನ್ ಪುರುಷತ್ತಮ್
ಉತ್ತರ ಕನ್ನಡ: ಅನಂತ ಕುಮಾರ್ ಹೆಗ್ಡೆ, ವಿಶ್ವೇಶ್ವರ ಹೆಗಡೆ ಕಾಗೇರಿ
ದಕ್ಷಿಣ ಕನ್ನಡ: ನಳಿನ್ ಕುಮಾರ್ ಕಟೀಲ್
ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ
ಚಿತ್ರದುರ್ಗ: ಎ ನಾರಾಯಣಸ್ವಾಮಿ
ಬಾಗಲಕೋಟೆ: ಪಿ. ಸಿ. ಗದ್ದಿಗೌಡರ್
ಬಳ್ಳಾರಿ: ಶ್ರೀರಾಮುಲು
ಕೊಪ್ಪಳ: ಕರಡಿ ಸಂಗಣ್ಣ
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರ್ಗಿ: ಉಮೇಶ್ ಜಾದವ್
ಬೆಳಗಾವಿ: ಮಂಗಳ ಸುರೇಶ್, ರಮೇಶ ಕತ್ತಿ
ಬೀದರ್;: ಭಗವಂತ್ ಖೂಬಾ
ಚಿಕ್ಕೋಡಿ: ಅಣ್ಣಾಸಾಹೇಬ ಜೊಲ್ಲೆ
ರಾಯಚೂರು : ರಾಜಾ ಅಮರೇಶ್ವರ












Click it and Unblock the Notifications