Lok Sabha Election 2024: ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಭೇಟಿ ಪರ ಅಬ್ಬರದ ಪ್ರಚಾರ ನಡೆಸಿದ ಸಂತೋಷ್ ಲಾಡ್
ಧಾರವಾಡ, ಏಪ್ರಿಲ್ 12: ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರು, ಹರಿಹರ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಗುರುಪೀಠ ರಾಜನಹಳ್ಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ವೇಳೆ ಜಗದ್ಗುರು ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹಾಗೂ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಯವರಿಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಜುಟ್ಟಲ್, ಮೌನೇಶ ಗುಡಸಲಮನಿ, ಮಂಜುನಾಥ ವೀರಪ್ಪನವರ, ಯಲ್ಲಪ್ಪ ದಾಸರ, ಮಂಜುನಾಥ ಹುಡೇದ, ಬಿ ಎಚ್ ಅಶೋಕ, ಆಕಾಶ ಕೊನೇರಿ, ಮಂಜು ಜಾಧವ, ಗುರುಶಾಂತ ಪಾಟೀಲ, ಮಂಜುನಾಥ ಭೋವಿ ಮತ್ತು ಪಕ್ಷದ, ಇತರ ಸಮಾಜದ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಅಭ್ಯರ್ಥಿ ಅಸೂಟಿ ಪರವಾಗಿ ಸಂತೋಷ್ ಲಾಡ್ ಸಭೆ
ಧಾರವಾಡ ಲೋಕಸಭಾ ಚುನಾವಣೆಯ ಪ್ರಚಾರ ದಿನೇ ದಿನೇ ರಂಗೇರುತ್ತಿದೆ. ಬಿಸಲ ಕಾವು ಜೋರಾಗಿದ್ದರೂ ಪ್ರಚಾರ ಕಳೆಗುಂದಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಚಾರ ಸಭೆಗಳಿಗೆ ಸೇರುತ್ತಿದ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಅಸೂಟಿ ಅವರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ಅವರು ಸಾಕಷ್ಟು ಸಭೆಗಳನ್ನು ನಡೆಸುತ್ತಿದ್ದಾರೆ. ಇಂದೂ ಸಹ ಹಲವಾರು ಕಾರ್ಯಕ್ರಮಗಳಲ್ಲಿ ಅಸೂಟಿ ಅವರೊಂದಿಗೆ ಪಾಲ್ಗೊಂಡಿದ್ದರು.
ಅಸೂಟಿ ಅವರ ಪರವಾಗಿ ಧಾರವಾಡದ ಮಯೂರ್ ಹೋಟೆಲ್‌ನಲ್ಲಿ ಧಾರವಾಡ ಜಿಲ್ಲಾ ಎನ್‌ಎಸ್‌ಯುಐ ಪದಾಧಿಕಾರಿಗಳ ಸಭೆಯನ್ನು ಸಚಿವ ಲಾಡ್ ಅವರು ನಡೆಸಿದರು. ಚುನಾವಣಾ ಪ್ರಚಾರ, ಕಾರ್ಯತಂತ್ರ, ಇತರೆ ಚಟುವಟಿಕೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಅಭ್ಯರ್ಥಿ ವಿನೋದ ಅಸೂಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ಸೇರಿದಂತೆ ಹಲವರು ಯುವ ಮುಖಂಡರು ಉಪಸ್ಥಿತರಿದ್ದರು.
ವಕೀಲರ ಸಂಘದ ಪದಾಧಿಕಾರಿಗಳ ಸಭೆ
ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸೂಟಿ ಅವರ ಪರ ಪ್ರಚಾರದ ಅಂಗವಾಗಿ ಧಾರವಾಡದ ಸಿವಿಲ್ ಕೋರ್ಟ್ ನಲ್ಲಿ ಧಾರವಾಡ ವಕೀಲರ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಬಳಿಕ ಸಚಿವ ಸಂತೋಷ್ ಲಾಡ್ ಅವರು ಮಾತನಾಡಿ, ವಕೀಲರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜಿಲ್ಲೆಯ ಸಮಸ್ತ ವಕೀಲರು ಕಾಂಗ್ರೆಸ್ ಅನ್ನು ಬೆಂಬಲಿಸಲಿದ್ದಾರೆ ಎಂಬ ಭರವಸೆ ನಮ್ಮದು ಎಂದು ತಿಳಿಸಿದರು.
ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆ
ಧಾರವಾಡದ ಮಯೂರ್ ಹೋಟೆಲ್ ಆವರಣದಲ್ಲಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆ ನಡೆಸಿ ಬಳಿಕ ಸಂತೋಷ್ ಲಾಡ್ ಅವರು ಮಾತನಾಡಿ, ಈ ಸಭೆಯಲ್ಲಿ ಅಭ್ಯರ್ಥಿ ವಿನೋದ್ ಅಸೂಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಇನ್ನೂ ಚುನಾವಣಾ ಪ್ರಚಾರದ ಅಂಗವಾಗಿ ಲಾಲ್‌ಗುಡಿ ಹನುಮಂತ ದೇವರ ದೇವಸ್ಥಾನದಿಂದ ಗಣೇಶ ಗುಡಿ ಸಿ ಟಿ ಮಾರ್ಕೆಟ್ ನವಲಗುಂದದವರೆಗೆ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಸಚಿವ ಲಾಡ್ ಅವರು ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಗಮನಸೆಳೆದರು.












Click it and Unblock the Notifications