Lok Sabha Election 2024: ಡಿಕೆ ಶಿವಕುಮಾರ್​ ಕೈ ಸೇರಿದ 20 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ!

ಬೆಂಗಳೂರು, ಫೆಬ್ರವರಿ 24: ಆಡಳಿತರೂಢ ಕಾಂಗ್ರೆಸ್‌ ಮುಂದಿನ ಲೋಕಸಭಾ ಚುಣಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಎಲ್ಲ ರಾಜಕೀಯ ಪಕ್ಷಗಳು ಈಗಾಗಲೆ ಚುನಾವಣೆ ತಯಾರಿ ಆರಂಭಿಸಿದ್ದು, ಲೋಕಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಉಳಿದಿವೆ.

ಹೌದು, ರಾಜ್ಯದಲ್ಲೂ ಚುನಾವಣಾ ಅಖಾಡ ತಯಾರಿಯಾಗುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​ ಮತ್ತು ಬಿಜೆಪಿ ಚುನಾವಣೆಗೆ ಸಿದ್ಧತೆ ನಡೆಸಿದೆ. ಇತ್ತ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡಲು ಬಿಜೆಪಿ ಜೆಡಿಎಸ್‌ ಮೈತ್ರಿಯಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಎದುರಾಗಿದೆ. ಇತ್ತ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ, 20 ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಟಾರ್ಗೆಟ್‌ ನೀಡಿದೆ.

Lok Sabha Poll: 20 Constituencies Candidates List Held By DK Shivakumar

ಈಗಾಗಲೇ 28 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಂಯೋಜಕರನ್ನ ಹೈಕಮಾಂಡ್‌ ನೇಮಕ ಮಾಡಿದ್ದು, ಆಯಾ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಈಗಾಗಲೆ ಸರ್ವೆ ನಡೆದಿದ್ದು, ಪ್ರಾಥಮಿಕ ಹಂತದ ಪಟ್ಟಿ ಸಿದ್ದವಾಗಿದೆ.

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಭಾರಿ ತಲೆಕೆಡಿಸಿಕೊಂಡಿದ್ದಾರೆ. 20 ಅಭ್ಯರ್ಥಿಗಳ ಪ್ರಾಥಮಿಕ ಪಟ್ಟಿ ಡಿಕೆ ಶಿವಕುಮಾರ್​ ಅವರ ಕೈ ಸೇರಿದೆ. ಇನ್ನೂ ತಮ್ಮ ನಿವಾಸದಲ್ಲಿ ಶುಕ್ರವಾರ ಸಂಜೆ ಸಚಿವರೊಂದಿಗೆ ಡಿ ಕೆ ಶಿವಕುಮಾರ್‌ ಈ ಕುರಿತು ಚರ್ಚೆ ನಡೆಸಿದ್ದು, ಗೆಲ್ಲುವ ಅಭ್ಯರ್ಥಿಗಳ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Lok Sabha Poll: 20 Constituencies Candidates List Held By DK Shivakumar

ಕಾಂಗ್ರೆಸ್‌ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ?

ಬೆಳಗಾವಿ : ಸತೀಶ್ ಜಾರಕಿಹೊಳಿ ಅಥವಾ ಜಾರಕಿಹೊಳಿ ಪುತ್ರಿ

ಚಾಮರಾಜನಗರ: ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಥವಾ ಪುತ್ರ ಸುನೀಲ್‌ ಬೋಸ್‌

ಚಿಕ್ಕೋಡಿ : ಲಕ್ಷ್ಮಣ್ ಸವದಿ ಪುತ್ರ ಅಥವಾ ಗಣೇಶ್ ಹುಕ್ಕೇರಿ ಶಿಫಾರಸ್ಸು ಸಾಧ್ಯತೆ

ಹಾವೇರಿ: ಹೆಚ್​ಕೆ ಪಾಟೀಲ್

ಮಂಗಳೂರು: ಯು ಟಿ ಖಾದರ್‌ ಅಥವಾ ಮಿಥುನ್‌ ರೈ

ಬಾಗಲಕೋಟೆ : ಸರ್ ನಾಯಕ್, ವೀಣಾ ಕಾಶಪ್ಪನವರ್ ಅಥವಾ ಸಂಯುಕ್ತ ಶಿವಾನಂದ ಪಾಟೀಲ್

ಕಲಬುರ್ಗಿ : ಮಲ್ಲಿಕಾರ್ಜುನ್ ಖರ್ಗೆ ಅಳಿಯ, ರಾಧಾಕೃಷ್ಣ ಹೆಸರು ಮುಂಚೂಣಿಯಲ್ಲಿ

Lok Sabha Poll: 20 Constituencies Candidates List Held By DK Shivakumar

ಉತ್ತರಕನ್ನಡ: ಆರ್​ವಿ ದೇಶಪಾಂಡೆ

ಮೈಸೂರು :ಲಕ್ಷ್ಮಣ್ ಹಾಗೂ ಶುಶ್ರುತ್ ಗೌಡ, ಯತೀಂದ್ರ ಸಿದ್ದರಾಮಯ್ಯ

ಬಳ್ಳಾರಿ: ಸೌಪರ್ಣಿಕಾ ತುಕಾರಾಂ ಅಥವಾ ವಿ.ಎಸ್‌.ಉಗ್ರಪ್ಪ

ಬೆಂಗಳೂರು ಉತ್ತರ : ಸಚಿವ ಕೃಷ್ಣಭೈರೇಗೌಡ

ಬೆಂಗಳೂರು ದಕ್ಷಿಣ: ಪ್ರಿಯಾಕೃಷ್ಣ

ಹಾಸನ : ಮಾಜಿ ಸಚಿವ ಬಿ.ಶಿವರಾಂ

ದಾವಣಗೆರೆ: ಸಚಿವ ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅಥವಾ ವಿನಯ್ ಕುಮಾರ್‌

ಚಿತ್ರದುರ್ಗ: ಎಚ್.ಆಂಜನೇಯ

ತುಮಕೂರು: ಮುದ್ದೇಹನುಮೇಗೌಡ

ಶಿವಮೊಗ್ಗ : ನಟ ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌

ಉಡುಪಿ-ಚಿಕ್ಕಮಗಳೂರು : ಜಯಪ್ರಕಾಶ ಶೆಟ್ಟಿ

ಚಿಕ್ಕಬಳ್ಳಾಪುರ: ರಕ್ಷಾ ರಾಮಯ್ಯ

ಬೆಂಗಳೂರು ಗ್ರಾಮಾಂತರ: ಹಾಲಿ ಸದಸ್ಯ ಡಿ.ಕೆ.ಸುರೇಶ್‌

ಬೆಂಗಳೂರು ಕೇಂದ್ರ: ಸಚಿವ ಕೆ.ಜೆ.ಜಾರ್ಜ್‌, ಬಿ ಕೆ ಹರಿಪ್ರಸಾದ್

ಧಾರವಾಡ: ಶಿವಲೀಲಾ ಕುಲಕರ್ಣಿ

ವಿಜಯಪುರ: ಮಾಜಿ ಶಾಸಕ ರಾಜು ಆಲಗೂರ

ಬೀದರ್‌: ಸಾಗರ್‌ ಖಂಡ್ರೆ

ಕೋಲಾರ: ಕೆ.ಎಚ್ ಮುನಿಯಪ್ಪ

ರಾಯಚೂರು : ಬಿವಿ ನಾಯಕ್

ದಕ್ಷಿಣ ಕನ್ನಡ: ಮಾಜಿ ಸಚಿವ ವಿನಯ್‌ ಕುಮಾರ್ ಸೊರಕೆ

ಮಂಡ್ಯ : ಸ್ಟಾರ್‌ ಚಂದ್ರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+