Lok Sabha Election Result: ಕರ್ನಾಟಕದ ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಸಂಪೂರ್ಣ ಪಟ್ಟಿ!
ಬೆಂಗಳೂರು, ಜೂನ್ 04: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯ ಆಗಿದ್ದು, ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿದೆ. ಪ್ರಮುಖ ಸಂಸ್ಥೆಗಳು ನಡೆಸಿರುವ ಎಕ್ಸಿಟ್ ಪೋಲ್‌ಗಳು ಶನಿವಾರ ಪ್ರಕಟವಾಗಿದ್ದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತವನ್ನ ಪಡೆದರೇ ಕರ್ನಾಟಕದಲ್ಲಿ ಬಿಜೆಪಿ ಮೈತ್ರಿ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಯನ್ನ ಎದುರಿಸಿದರು ಸಹ ಬಿಜೆಪಿ ತನ್ನ ಕ್ಲೀನ್ ಸ್ವೀಪ್ ಗುರಿಯನ್ನು ತಲುಪುವುದಿಲ್ಲ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ, ಇತ್ತ 20 ಕ್ಷೇತ್ರಗಳನ್ನ ಗೆಲ್ಲುವ ಗುರಿಯನ್ನ ಹಾಕಿಕೊಂಡಿದ್ದ ಕಾಂಗ್ರೆಸ್ ಸಮೀಕ್ಷೆಗಳು ಶಾಕ್ ನೀಡಿದ್ದು, ಈ ಎಕ್ಸಿಟ್ ಪೋಲ್ ಗಳು ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಎದುರಿಸಿವೆ. ಬಿಜೆಪಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇತ್ತ ಆಡಳಿತರೂಢ ಕಾಂಗ್ರೆಸ್ 28 ಕ್ಷೇತ್ರಗಳಲ್ಲೂ ಸ್ಪರ್ಧಿಸಿತ್ತು. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ರೆ, ಇತ್ತ ಕಾಂಗ್ರೆಸ್ 20ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿತ್ತು. ಆದರೆ, ಯಾವ ಪಕ್ಷದ ಅಭ್ಯರ್ಥಿ ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಪಟ್ಟಿ
* ಚಿಕ್ಕೋಡಿ - ಅಣ್ಣಾ ಸಾಹೇಬ್ ಜೊಲ್ಲೆ - ಬಿಜೆಪಿ
* ಬೆಳಗಾವಿ - ಜಗದೀಶ್ ಶೆಟ್ಟರ್ - ಬಿಜೆಪಿ
* ಬಾಗಲಕೋಟೆ - ಪಿಸಿ ಗದ್ದಿಗೌಡರ್ - ಬಿಜೆಪಿ
* ವಿಜಯಪುರ - ರಮೇಶ್ ಜಿಗಜಿಣಗಿ - ಬಿಜೆಪಿ
* ಕಲಬುರಗಿ - ರಾಧಾಕೃಷ್ಣ ದೊಡ್ಮನಿ - ಕಾಂಗ್ರೆಸ್
* ರಾಯಚೂರು - ರಾಜಾ ಅಮರೇಶ್ವರ ನಾಯಕ - ಬಿಜೆಪಿ
* ಬೀದರ್ - ಸಾಗರ್ ಖಂಡ್ರೆ - ಕಾಂಗ್ರೆಸ್
* ಕೊಪ್ಪಳ - ಡಾ ಬಸವರಾಜ ಕ್ಯಾವಟೂರು - ಬಿಜೆಪಿ
* ಬಳ್ಳಾರಿ - ಬಿ ಶ್ರೀರಾಮುಲು - ಬಿಜೆಪಿ
* ಹಾವೇರಿ - ಬಸವರಾಜ ಬೊಮ್ಮಾಯಿ - ಬಿಜೆಪಿ
* ಧಾರವಾಡ - ಪ್ರಹ್ಲಾದ್ ಜೋಶಿ - ಬಿಜೆಪಿ
* ಉತ್ತರ ಕನ್ನಡ - ವಿಶ್ವೇಶ್ವರ ಹೆಗಡೆ ಕಾಗೇರಿ - ಬಿಜೆಪಿ
* ದಾವಣಗೆರೆ - ಗಾಯತ್ರಿ ಸಿದ್ದೇಶ್ವರ್ - ಬಿಜೆಪಿ
* ಶಿವಮೊಗ್ಗ - ಬಿವೈ ರಾಘವೇಂದ್ರ - ಬಿಜೆಪಿ
* ಹಾಸನ - ಪ್ರಜ್ವಲ್ ರೇವಣ್ಣ - ಜೆಡಿಎಸ್
* ದಕ್ಷಿಣ ಕನ್ನಡ - ಬ್ರಿಜೇಶ್ ಚೌಟಾ - ಬಿಜೆಪಿ
* ಉಡುಪಿ - ಚಿಕ್ಕಮಗಳೂರು - ಕೋಟಾ ಶ್ರೀನಿವಾಸ ಪೂಜಾರಿ - ಬಿಜೆಪಿ
* ಚಿತ್ರದುರ್ಗ - ಬಿಎನ್ ಚಂದ್ರಪ್ಪ - ಕಾಂಗ್ರೆಸ್
* ತುಮಕೂರು - ಮುದ್ದಹನುಮೇಗೌಡ - ಕಾಂಗ್ರೆಸ್
* ಮಂಡ್ಯ - ಎಚ್‌ಡಿ ಕುಮಾರಸ್ವಾಮಿ - ಜೆಡಿಎಸ್
* ಮೈಸೂರು - ಯದುವೀರ್ ಒಡೆಯರ್ - ಬಿಜೆಪಿ
* ಚಾಮರಾಜನಗರ - ಸುನೀಲ್ ಬೋಸ್ - ಕಾಂಗ್ರೆಸ್
* ಬೆಂಗಳೂರು ಗ್ರಾಮಾಂತರ - ಡಿಕೆ ಸುರೇಶ್ - ಕಾಂಗ್ರೆಸ್
* ಬೆಂಗಳೂರು ಉತ್ತರ - ಶೋಭಾ ಕರಂದ್ಲಾಜೆ - ಬಿಜೆಪಿ
* ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್ - ಬಿಜೆಪಿ
* ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ - ಬಿಜೆಪಿ
* ಚಿಕ್ಕಬಳ್ಳಾಪುರ - ಡಾ ಕೆ ಸುಧಾಕರ್ - ಬಿಜೆಪಿ
* ಕೋಲಾರ - ಮಲ್ಲೇಶ್ ಬಾಬು - ಜೆಡಿಎಸ್












Click it and Unblock the Notifications