ಮೋದಿನು ಬೇಡ, ಸಿದ್ಧರಾಮಯ್ಯನು ಬೇಡ: ಆದರೆ ಇದು ಬೇಕಂತೆ!
ಲೋಕಸಭೆ ಚುನಾವಣೆ 2024ಕ್ಕೆ ಇನ್ನೇನು ಕೆಲ ದಿನಗಳು ಬಾಕಿ ಇದ್ದು, ಅಂತಿಮ ಹಂತದ ಸಿದ್ಧತೆಗಳು ಸಾಗಿವೆ. ಕನ್ನಡಿಗರು ಮತ ಹಾಕಲು ಸಿದ್ಧತೆ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿ ನಾಯಕರು & ಕಾರ್ಯಕರ್ತರು ಸರ್ವ ಪ್ರಯತ್ನ ಆರಂಭಿಸಿದ್ದಾರೆ. ಆದರೆ ಜನಗಳು 'ಮೋದಿನು ಬೇಡ, ಸಿದ್ಧರಾಮಯ್ಯನು ಬೇಡ: ಆದರೆ ಇದು ಬೇಕು' ಅಂತಿದ್ದಾರೆ. ಹಾಗಾದರೆ ಚುನಾವಣೆ ನಡುವೆ ಜನಗಳಿಗೆ ಏನು ಬೇಕಿದೆ ಗೊತ್ತಾ?
ಮಳೆಗಾಗಿ ಕಾದು ಕುಳಿತಿದ್ದ ಕನ್ನಡಿಗರಿಗೆ ಮಳೆರಾಯ ಸತಾಯಿಸುತ್ತಿದ್ದಾನೆ. ಕಳೆದ ವಾರ ಮಳೆ ಒಂದಷ್ಟು ಸುರಿದರೂ, ಈಗ ಮಳೆ ಬೀಳುತ್ತಲೇ ಇಲ್ಲ. ಕಳೆದ ವಾರ ಮಲೆನಾಡು ಭಾಗವೂ ಸೇರಿದಂತೆ ಉತ್ತರ ಕರ್ನಾಟಕದ ಗದಗ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲೂ ಭರ್ಜರಿ ಮಳೆ ಬಂದಿತ್ತು. ಆದರೆ ಈ ವಾರ ಮತ್ತೆ ಮಳೆ ಕೈಕೊಟ್ಟು ಬಿಸಿಲಿನ ಬೇಗೆ ಕೂಡ ಹೆಚ್ಚಾಗಿದೆ. ಹೀಗಾಗಿ ಜನರು ಭರ್ಜರಿ ಬಿಸಿಲು ನೋಡಿ ರೊಚ್ಚಿಗೆದ್ದಿದ್ದಾರೆ. ಹೀಗಿದ್ದಾಗ ಜನ ನಮಗೆ 'ಮೋದಿನು ಬೇಡ, ಸಿದ್ಧರಾಮಯ್ಯನು ಬೇಡ: ಆದರೆ ಇದು ಬೇಕು' ಅಂತಿದ್ದಾರೆ. ಜನ ತಮಗೆ ಏನು ಬೇಕು ಅಂತಾ ಮಾತನಾಡಿರುವ ವಿಡಿಯೋ ನೋಡಲು ಮುಂದೆ ಓದಿ.

ಚುನಾವಣೆ ಅಲ್ಲ ಮಳೆ ಬೇಕಂತೆ!
2023 ಕರ್ನಾಟಕದ ಪಾಲಿಗೆ ದುರದೃಷ್ಟಕರ ವರ್ಷ. ಮುಂಗಾರು ಮಳೆಯೇ ಸರಿಯಾಗಿ ಬೀಳದೆ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಮಳೆಯನ್ನ ಆಶ್ರಯಿಸಿ ಕೃಷಿ ಕೈಗೊಳ್ಳುವ ರೈತರಿಗೆ ಆತಂಕ ಎದುರಾಗಿತ್ತು. ಕರ್ನಾಟಕ ಸೇರಿ ಭಾಗಶಃ ಇಡೀ ದೇಶ ಸಾಕಷ್ಟು ಮಳೆ ಕೊರತೆ ಎದುರಿಸಿ ಒದ್ದಾಡಿದೆ. ಕೆಲವು ರಾಜ್ಯಗಳಲ್ಲಿ ವಿಪರೀತ ಮಳೆ ಬಂದಿದ್ದರೂ ಹಲವಾರು ರಾಜ್ಯಗಳ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ಕಾರಣಕ್ಕೆ ಜನರಿಗೆ 2024ರ ಲೋಕಸಭೆ ಚುನಾವಣೆಗಿಂತ ಮಳೆಯೇ ಮುಖ್ಯ ಆಗಿದ್ದು, 'ಮೋದಿನು ಬೇಡ, ಸಿದ್ಧರಾಮಯ್ಯನು ಬೇಡ ಆದರೆ ಮಳೆ ಬೇಕು ಈಗ' ಅಂತಿದ್ದಾರೆ.
ಒಟ್ನಲ್ಲಿ ಮಳೆಗಾಗಿ ಎಲ್ಲರೂ ಕಾದು ಕುಳಿತಿದ್ದಾರೆ ಯಾಕಂದ್ರೆ ಎಲ್ಲೆಲ್ಲೂ ಮಳೆಗಾಗಿ ಹಾಹಾಕಾರ ಶುರುವಾಗಿದೆ. ಕೆರೆ & ಕಟ್ಟೆ ಸೇರಿದಂತೆ ನದಿಗಳು ಸಂಪೂರ್ಣ ಒಣಗಿ ಹೋಗಿವೆ. ಹೀಗಾಗಿ ಸದ್ಯಕ್ಕೆ ಮಳೆ ಬೀಳದೆ ಹೋದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂಬ ಭಯ ಕೂಡ ಕಾಡ್ತಿದೆ. ಇಂತಹ ಹೊತ್ತಲ್ಲೇ, ಮಳೆ ಬರಲೇಬೇಕಿದೆ. ಚುನಾವಣೆ ಕಾವು ಏರಿಕೆ ಕಂಡಿರುವ ಸಮಯದಲ್ಲೇ ಜನ ಈಗ ಬಿಸಿಲಿನ ಕಾಟಕ್ಕೆ ಕೂಡ ನರಳಿ ಹೋಗಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಯಾವಾಗ?
2024ರ ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ, ಅಭ್ಯರ್ಥಿಗಳೂ ಸಿದ್ಧವಾಗಿ ಕೂತಿದ್ದಾರೆ. ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿ, ರಣಕಹಳೆ ಮೊಗಳಗಿಸಿದೆ. ಇನ್ನೇನು ಕೆಲ ದಿನಗಳಲ್ಲಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಲು ಮತದಾನ ಮಾಡಲಿದ್ದು, ಹಾಗೇ ಇದಕ್ಕೆ ಬೇಕಾದ ತಯಾರಿ ಕೂಡ ಸಾಗಿದ್ದು. ಹಾಗೇ ಕರ್ನಾಟಕದಲ್ಲಿ ಕೂಡ ಎಲ್ಲಾ ರೀತಿ ತಯಾರಿ ನಡೆದಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ಇದ್ದು ಏಪ್ರಿಲ್ 26 ರಂದು & ಮೇ 7ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಚುನಾವಣೆ ಫಲಿತಾಂಶ ಜೂನ್ 4ಕ್ಕೆ ಹೊರಬೀಳುತ್ತೆ. ಈ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿರುವ ಭಾರತದ ಲೋಕಸಭಾ ಚುನಾವಣೆ ಅಂತಿಮ ಹಂತಕ್ಕೆ ತಲುಪುತ್ತಿದೆ.












Click it and Unblock the Notifications