25 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಫೈನಲ್ : ಈ ಐದು ಕ್ಷೇತ್ರದಲ್ಲಿ ಸ್ವಲ್ಪ ಯಾಮಾರಿದ್ರೂ ಗೆಲುವು ಕಾಂಗ್ರೆಸ್ ಗೆ
ದೆಹಲಿ, ಮಾರ್ಚ್ 12: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಈಗಾಗಲೇ ಮೊದಲ ಪಟ್ಟಿಯಲ್ಲಿ 195 ಅಭ್ಯರ್ಥಿಗಳ ಹೆಸರನ್ನ ಬಿಡುಗಡೆ ಮಾಡಿದ್ದು, ಎರಡನೇ ಪಟ್ಟಿ ಬಿಡುಗಡೆ ಕುರಿತು ದೆಹಲಿ ನಾಯಕರ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆಯುತ್ತಿದೆ.
ಇನ್ನೂ ಕರ್ನಾಟಕದ 28 ಕ್ಷೇತ್ರಗಳ ಫೈಕಿ ಈಗಾಗಲೇ ಕಾಂಗ್ರೆಸ್ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಬಿಜೆಪಿ ಹೈಕಮಾಂಡ್ ರಾಜ್ಯದ ಕ್ಷೇತ್ರಗಳ ಕುರಿತು ನಿರಂತರ ಸಭೆ ನಡೆಸುತ್ತಿದೆ. ಈ ಕುರಿತು ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಜೆ.ಪಿ.ನಡ್ಡಾ ಹಾಗೂ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮೊದಲ ಪಟ್ಟಿಯಲ್ಲಿ 195 ರಣಕಲಿಗಳನ್ನ ಘೋಷಿಸಿದ್ದ ಬಿಜೆಪಿ 2ನೇ ಪಟ್ಟಿಯಲ್ಲಿ 150ಕ್ಕೂ ಹೆಚ್ಚು ಅಭ್ಯರ್ಥಿಗಳನ್ನ ಘೋಷಣೆ ಮಾಡೋ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 18 ರಿಂದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಘೋಷಿಸುವ ಸಾಧ್ಯತೆ ಇದೆ.

ಇನ್ನೂ ಸಭೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ನಾಳೆ- ನಾಡಿದ್ದು ಲೋಕಸಭಾ ಚುನಾವಣೆ ಸಂಬಂಧಿಸಿದ ರಾಜ್ಯದ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಅವರು ಭಾಗವಹಿಸಿದ್ದರು. ಚುನಾವಣೆಗೆ ಸಂಬಂಧಿಸಿ ಎಲ್ಲ ಅಭ್ಯರ್ಥಿಗಳ ಕುರಿತು ಚರ್ಚೆ ನಡೆದಿದೆ ಎಂದರು.
ಮೊದಲ ಹಂತದಲ್ಲಿ ಎಷ್ಟು ಅಭ್ಯರ್ಥಿಗಳನ್ನು ಘೋಷಿಸಬಹುದು ಎಂಬ ಪ್ರಶ್ನೆಗೆ 'ಅದ್ಯಾವುದೂ ಮಾಹಿತಿ ಇಲ್ಲ. 28 ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಚರ್ಚೆ ಆಗಿದೆ. ಅಪೇಕ್ಷಿತರ ಕುರಿತು ಚರ್ಚೆ ಆಗಿದೆ. ಅಂತಿಮವಾಗಿ ಕೇಂದ್ರದ ವರಿಷ್ಠರು ಕುಳಿತು ನಿರ್ಧಾರ ಮಾಡುತ್ತಾರೆ. ಬಹುಶಃ ಇನ್ನು ಎರಡ್ಮೂರು ದಿನಗಳಲ್ಲಿ ತಮ್ಮ ನಿರ್ಧಾರ ಘೋಷಿಸುತ್ತಾರೆ ಎಂದು ಉತ್ತರ ನೀಡಿದರು.
ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ
* ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
* ಬೆಂಗಳೂರು ಸೆಂಟ್ರಲ್: ಪಿ.ಸಿ.ಮೋಹನ್
* ಬೀದರ್ : ಭಗವಂತ್ ಖೂಬಾ
* ಕಲಬುರಗಿ : ಉಮೇಶ್ ಜಾಧವ್
* ಬಾಗಲಕೋಟೆ : ಪಿ.ಸಿ.ಗದ್ದಿಗೌಡರ್
* ರಾಯಚೂರು : ರಾಜಾ ಅಮರೇಶ್ವರ್ ನಾಯಕ
* ಹುಬ್ಬಳ್ಳಿ-ಧಾರವಾಡ: ಪ್ರಹ್ಲಾದ್ ಜೋಶಿ
* ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
* ಬಳ್ಳಾರಿ: ಬಿ.ಶ್ರೀರಾಮುಲು
* ಶಿವಮೊಗ್ಗ : ಬಿ.ವೈ.ರಾಘವೇಂದ್ರ
* ಚಾಮರಾಜನಗರ : ಡಾ.ಮೋಹನ್ ಕುಮಾರ್
* ಬೆಂಗಳೂರು ಉತ್ತರ : ಸಪ್ತಗಿರಿಗೌಡ ಡಿ.ವಿ.ಸದಾನಂದ ಗೌಡ
* ಬೆಂಗಳೂರು ಗ್ರಾಮಾಂತರ : ಡಾ.ಸಿ.ಎನ್.ಮಂಜುನಾಥ್
* ಬೆಳಗಾವಿ : ಜಗದೀಶ್ ಶೆಟ್ಟರ್
* ಚಿಕ್ಕೋಡಿ : ಅಣ್ಣಾ ಸಾಹೇಬ್ ಜೊಲ್ಲೆ ರಮೇಶ್ ಕತ್ತಿ
* ವಿಜಯಪುರ : ರಮೇಶ್ ಜಿಗಜಿಣಗಿ ಗೋವಿಂದ ಕಾರಜೋಳ
* ಕೊಪ್ಪಳ : ಸಂಗಣ್ಣ ಕರಡಿ ಡಾ.ಬಸವರಾಜ್ ಕ್ಯಾವಟರ್
* ಹಾವೇರಿ : ಬಸವರಾಜ ಬೊಮ್ಮಾಯಿ , ಕೆ.ಇ.ಕಾಂತೇಶ್, ಬಿ.ಸಿ.ಪಾಟೀಲ್
* ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್, ನಿರ್ಮಲಾ ಸೀತಾರಾಮನ್
* ಉತ್ತರ ಕನ್ನಡ : ಅನಂತ ಕುಮಾರ್ ಹೆಗಡೆ , ವಿಶ್ವೇಶ್ವರ ಹೆಗಡೆ ಕಾಗೇರಿ, ಗೋಪಾಲ್
* ಚಿತ್ರದುರ್ಗ : ಎ ನಾರಾಯಣಸ್ವಾಮಿ, ಮಾದಾರ ಚನ್ನಯ್ಯ ಸ್ವಾಮೀಜಿ
* ದಾವಣಗೆರೆ : ಜಿ.ಎಂ.ಸಿದ್ದೇಶ್ವರ್, ಎಂ.ಪಿ.ರೇಣುಕಾಚಾರ್ಯ
* ತುಮಕೂರು : ವಿ.ಸೋಮಣ್ಣ , ಜೆ.ಸಿ ಮಾಧುಸ್ವಾಮಿ
* ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್ , ಅಲೋಕ್ ವಿಶ್ವನಾಥ್
* ಮೈಸೂರು : ಪ್ರತಾಪ್ ಸಿಂಹ , ಯದುವೀರ್ ಒಡೆಯರ್
ಐದು ಕ್ಷೇತ್ರಗಳು ಬಿಜೆಪಿಗೆ ಟಿಕೆಟ್ ತೆಲೆ ಬಿಸಿ
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ. ಪ್ರತಾಪ್ ಸಿಂಹ ಅವರ ಬದಲಿಗೆ ಯದುವೀರ್ ಕೃಷ್ಣದತ್ತ ಒಡೆಯರ್ ಅವರ ಹೆಸರು ಬಿಜೆಪಿ ಟಿಕೆಟ್‌ಗೆ ಕೇಳಿಬರುತ್ತಿದೆ. ಇದರಿಂದ ಬಿಜೆಪಿ ಕಾರ್ಯಕರ್ತರು ರಾಜ್ಯ ಬಿಜೆಪಿ ನಾಯಕರ ಮೇಲೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕಾರ್ಯಕರ್ತರು ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದು, ಮೈಸೂರು ಜಿಲ್ಲೆಯ ಕೆಲವು ಪ್ರಮುಖ ಬಿಜೆಪಿ ನಾಯಕರು ಪ್ರತಾಪ್ ಸಿಂಹಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಅವರಿಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಆಗ್ರಹಿಸುತ್ತಿದ್ದು, ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾಕ್ಕಾ ಎನ್ನುವ ಅಭಿಮಾನ ಶುರುವಾಗಿದೆ. ಇತ್ತ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಘೋಷಣೆ ಸವಾಲಾಗಿದೆ. ತುಮಕೂರು ಕ್ಷೇತ್ರದ ಹಾಲಿ ಸಂಸದ ಜಿಎಸ್ ಬಸವರಾಜು ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದು, ಮಾಜಿ ಸಚಿವ ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಬಿಜೆಪಿ ನಡೆಗೆ ಮಾಜಿ ಸಚಿವ ಜೆಸಿ ಮಾಧುಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ಅವರು ರಾಜಕೀಯ ನಿವೃತ್ತಿ ಪಡೆದಿದ್ದು, ಹಾವೇರಿ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅಲ್ಲದೇ ಮಾಜಿ ಸಚಿವ ಬಿಸಿ ಪಾಟೀಲ್ ಕೂಡ ಟಿಕೆಟ್ ಪಟ್ಟು ಹಿಡಿದಿದ್ದು, ಬಿಜೆಪಿ ಹೈಕಮಾಂಡ್ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದ್ದು, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಬಂಡಾಯಕ್ಕೆ ಕಾರಣವಾಗಿದೆ.
ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಇಬ್ಬರು ಬಿಜೆಪಿ ನಾಯಕರು ತೀವ್ರ ಫೈಪೋಟಿ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಡಾ ಕೆ ಸುಧಾಕರ್ ಅವರು ಪ್ರಬಲ ಆಕಾಂಕ್ಷಿಯಾಗಿದ್ದು, ಸುಧಾಕರ್‌ಗೆ ಪ್ರಬಲ ಪೈಪೋಟಿ ಎಂಬಂತೆ ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಅವರು ಕೂಡ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಐದು ಕ್ಷೇತ್ರದಲ್ಲಿ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಯನ್ನ ಆಯ್ಕೆ ಮಾಡಬೇಕಾಗಿದೆ. ಇನ್ನವಾದರೇ ಈ ಕ್ಷೇತ್ರಗಳಲ್ಲಿ ಸ್ವಲ್ಪ ಯಾಮಾರಿದ್ರು ಗೆಲುವು ಕಾಂಗ್ರೆಸ್ ಪಕ್ಷದಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications