ಬಿಜೆಪಿ ಹಾಲಿ ಸಂಸದರಿಗೆ ಮತ್ತೆ ಟಿಕೆಟ್: 75 ದಾಟಿದವರಿಗೆ ಟಿಕೆಟ್‌ ಇಲ್ಲ?- ಹೈಕಮಾಂಡ್‌ ಲೆಕ್ಕಾಚಾರವೇನು?

ಬೆಂಗಳೂರು, ಜನವರಿ 29: 2023 ರ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ತಯಾರಿ ನಡೆಸಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ ಕೊಟ್ಟ ಮಾದರಿಯಲ್ಲಿಯೇ ಲೋಕಸಭಾ ಚುನಾವಣೆಯಲ್ಲೂ ಅದೇ ಮಾದರಿಯನ್ನ ಅನುಸರಿಸಲು ಹೈಕಮಾಂಡ್‌ ಲೆಕ್ಕಾಚಾರವನ್ನ ಹಾಕಿಕೊಂಡಿದೆ.

ಹೌದು, ವಿಧಾನಸಭಾ ಚುನಾವಣೆಯ ತಂದ ಬದಲಾವಣೆಯಂತೆ ವಯೋಮಿತಿಯ ಆಧಾರದ ಮೇಲೆ ಹಾಗೂ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸುವ ಅನಿವಾರ್ಯತೆ ದೃಷ್ಟಿಯಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡದಿರಲು ಬಿಜೆಪಿ ಹೈಕಮಾಂಡ್‌ ಚಿಂತನೆ ನಡೆಸಿದೆ. ಅದರಂತೆ ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಗಾಳ ಟಿಕೆಟ್‌ ನೀಡುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ.

Lok Sabha Elections 2024: BJP to Give LS Tickets to Sitting MPs in Karnataka: Know their strategie

ಬಿಜೆಪಿ ಹಾಲಿ ಸಂಸದರಲ್ಲಿ 75 ವರ್ಷ ವಯಸ್ಸು ದಾಟಿದವರನ್ನು ಬಿಟ್ಟು ಮತ್ತೊಮ್ಮೆ ಗೆಲ್ಲುವ ಸಾಮರ್ಥ್ಯ ಹೊಂದಿರುವ ಹಾಗೂ ಯಾವುದೇ ಕಳಂಕ ಇಲ್ಲದ ಇನ್ನುಳಿದ ಹಿರಿಯ ಸಂಸದರಿಗೆ ಮಣೆ ಹಾಕುವುದು ಸೂಕ್ತ ಎಂಬ ಚಿಂತನೆ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ವ್ಯಕ್ತವಾಗುತ್ತಿದೆ. ಆದರೆ 73 ಮತ್ತು 75 ವರ್ಷದೊಳಗಿನ ಸಂಸದರಿಗೆ ಸಂಸದರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂಬ ಚಿಂತನೆಯನ್ನ ಬಿಟ್ಟು,ಯಾರಿಗೆ ಗೆಲ್ಲುವ ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ನಾಯಕರು ಹೊಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಗೆ ಠಕ್ಕರ್‌ ಕೊಡುವ ನಿಟ್ಟಿನಲ್ಲಿ ಬಿಜೆಪಿಯೂ ಜೆಡಿಎಸ್‌ ನೊಂದಿಗೆ ಮೈತ್ರಿಯಾಗಿದ್ದು, ಹಲವು ಹಿರಿಯ ಸಂಸದರಿಗೆ ವಯೋಮಿತಿಯ ಆಧಾರದ ಮೇಲೆ ಟಿಕೆಟ್‌ ನಿರಾಕರಿಸಿದರೇ ಸೋಲಿಗೂ ಕಾರಣವಾಗಬಹುದು ಎಂಬುದನ್ನ ಲೆಕ್ಕಾಚಾರ ಹಾಕಿರುವ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚಿಸಿದ್ದಾರೆ. 71

70 ವರ್ಷ ದಾಟಿದ ಹಾಲಿ ಸಂಸದರು ಯಾರ್ಯಾರು?

25 ಜನ ಬಿಜೆಪಿ ಹಾಲಿ ಸಂಸದರ ಪೈಕಿ ಎಪ್ಪತ್ತೈದು ವರ್ಷ ದಾಟಿದ ಸಂಸದರಾದ ಚಾಮರಾಜನಗರ ಕ್ಷೇತ್ರದ ಶ್ರೀನಿವಾಸ್ ಪ್ರಸಾದ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಬಿ.ಎನ್.ಬಚ್ಚೇಗೌಡ ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇನ್ನೂ ತುಮಕೂರು ಕ್ಷೇತ್ರದ ಸಂಸದ ಜಿ.ಎಸ್.ಬಸವರಾಜು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನುಳಿದಂತೆ 70 ವರ್ಷ ವಯಸ್ಸು ದಾಟಿರುವ ವಿಜಯಪುರದ ರಮೇಶ್ ಜಿಗಜಿಣಗಿ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ, ಬಳ್ಳಾರಿಯ ದೇವೇಂದ್ರಪ್ಪ, ಕೊಪ್ಪಳದ ಕರಡಿ ಸಂಗಣ್ಣ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್‌ ಅವರ ಪೈಕಿ ಈಗಲೂ ವರ್ಚಸ್ಸು ಹಾಗೂ ಗೆಲ್ಲುವ ಸಾಮರ್ಥ ಹೊಂದಿರುವವರಿಗೆ ಮತ್ತೊಮ್ಮೆ ಟಿಕೆಟ್ ನೀಡುವುದು ಸೂಕ್ತ ಎಂಬ ಮಾತು ಕಮಲ ಪಾಳಯದಲ್ಲಿ ಕೇಳಿ ಬರುತ್ತಿದೆ. ಈ ನಾಯಕರ ಪೈಕಿ ಗೆಲ್ಲುವ ವರ್ಚಸ್ಸು ಇರುವರಿಗೆ ಟಿಕೆಟ್‌ ನೀಡಿದರೇ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಲು ಸುಲಭವಾಗುತ್ತದೆ ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ ಎನ್ನಲಾಗಿದೆ.

Lok Sabha Elections 2024: BJP to Give LS Tickets to Sitting MPs in Karnataka: Know their strategie

ವಯೋಮಿತಿಯ ಆಧಾರದ ಮೇಲೆ ಕೆಲವು ಹಾಲಿ ಸಂಸರಿಗೆ ಟಿಕೆಟ್‌ ಕೊಡುವುದನ್ನ ಹೈಕಮಾಂಡ್‌ ನಿರಾಕರಿಸಿದೆರೇ ಆ ಕ್ಷೇತ್ರದಲ್ಲಿ ಪರ್ಯಾಯ ಸಮರ್ಥ ಅಭ್ಯರ್ಥಿ ಸಿಗದೇ ಇದ್ದಲಿ, ಆ ಸಂಸದರಿಗೆ ಟಿಕೆಟ್‌ ಕೊಡಬೇಕಾ ಎಂಬ ಬಗ್ಗೆಯೂ ಬಿಜೆಪಿ ಸ್ಥಳೀಯ ನಾಯಕರ ಜೊತೆಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ. ವಯಸ್ಸಿನ ಕಾರಣವೊಂದನ್ನೇ ನೆಪವಾಗಿರಿಸಿಕೊಂಡು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವುದು ಬೇಡ ಎಂಬ ಅನಿಸಿಕೆಯನ್ನು ವರಿಷ್ಠರಿಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+