ಸರ್ಕಾರಿ ಪಿಂಚಣಿದಾರರಿಗೆ ಶುಭ ಸುದ್ದಿ ಎಚ್ಡಿಕೆ ಕೈ ಹಿಡಿಯುವರೇ ನೌಕರರು?
ರಾಜ್ಯ ಸರ್ಕಾರಿ ನೌಕರರ ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು ಮೂರು ವರ್ಷ ಕಡಿತಗೊಳಿಸಿ ಸರ್ಕಾರ ಆದೇಶಿಸಿರುವುದು ಲೋಕಸಭೆ ಚುನಾವಣೆ 2019 ಸಂದರ್ಭದಲ್ಲಿ ಜೆಡಿಎಸ್ -ಕಾಂಗ್ರೆಸ್ಸಿಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸುವ ಸಾಧ್ಯತೆಯಿದೆ.
6ನೇ ವೇತನ ಆಯಗದ ಶಿಫಾರಸ್ಸಿನಂತೆ ರಾಜ್ಯದಲ್ಲಿ ಜಾರಿಯಲ್ಲಿರುವ ನೂತನ ಪಿಂಚಣಿ ಯೋಜನೆ ಬಗ್ಗೆ ಸರ್ಕಾರಿ ನೌಕರರು ತಗಾದೆ ತೆಗೆದಿರುವುದು, ಯೋಜನೆಯಲ್ಲಿ ಬದಲಾವಣೆಗಾಗಿ ಹೋರಾಟ ನಡೆಸಿರುವುದು ಗೊತ್ತಿರಬಹುದು. ಈ ಬಗ್ಗೆ ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ಪರಿಶೀಲನೆ ನಡೆಸುತ್ತಿದೆ.
ಈ ಸಂದರ್ಭದಲ್ಲೇ ನೌಕರರ ಪೂರ್ಣಪ್ರಮಾಣದ ನಿವೃತ್ತಿ ವೇತನ ಪಡೆಯಲು ಬೇಕಾದ ಕನಿಷ್ಠ ಸೇವಾವಧಿಯನ್ನು 33 ವರ್ಷದಿಂದ 30 ವರ್ಷಕ್ಕೆ ಇಳಿಸಿ ಸರ್ಕಾರ ಆದೇಶಿಸಿದ್ದು, 2019ರ ಜ.1ರಿಂದಲೇ ಆದೇಶ ಜಾರಿ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರ ಬಹುದಿನದ ಬೇಡಿಕೆ ಈಡೇರಿಸಲಾಗಿದೆ.

ನೌಕರರ ಬೇಡಿಕೆ ಆಧರಿಸಿ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗವೂ ಸೇವಾವಧಿ ಕಡಿತಗೊಳಿಸಲು ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸು ಪರಿಗಣಿಸಿದ ಸರ್ಕಾರ, ರಾಜ್ಯ ಸರ್ಕಾರಿ ನೌಕರರು ಪೂರ್ಣಪ್ರಮಾಣದ ನಿವೃತ್ತಿ ವೇತನ ಸೇವಾವಧಿಯನ್ನು 3 ವರ್ಷ ಕಡಿತಗೊಳಿಸಿ ಜ.11ರಂದು ಆದೇಶಿಸಿದ್ದು, ಇದರಿಂದ ಸುಮಾರು 6.5 ಲಕ್ಷ ನೌಕರರಿಗೆ ಪ್ರಯೋಜನ ಸಿಗಲಿದೆ. ಹಾಲಿ ನೌಕರರಿಗೆ ಸೇವಾವಧಿ ಬಡ್ತಿ, ಮುಂಬರುವ ನೌಕರರಿಗೂ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಜೊತೆಗೆ ಸದ್ಯ ಸರ್ಕಾರ 3 ವರ್ಷ ಸೇವಾವಧಿ ಕಡಿತಗೊಂಡಿದೆ.
ವಿಶೇಷ ಭತ್ಯೆ ಮಂಜೂರಾತಿ ಮತ್ತು ಪರಿಷ್ಕರಣೆ ಕುರಿತಂತೆ 2011ರ ಅಧಿಕಾರಿ ವೇತನ ಸಮಿತಿಯು ಅನುಸರಿಸಿದ ಮಾನದಂಡಗಳನ್ನು 6ನೇ ರಾಜ್ಯ ವೇತನ ಆಯೋಗವು ಮಾನ್ಯ ಮಾಡಿರುತ್ತದೆ. ಒಟ್ಟಾರೆ, ಬೇರೆ ಹುದ್ದೆಗಳಿಗೆ ವರ್ಗಾವಾಗುವವರು, ಹೊಸಬರು ಸರ್ಕಾರಿ ಹುದ್ದೆಗೆ ಸೇರಲು, ನಿವೃತ್ತಿ ಪಿಂಚಣಿ ಪಡೆಯಲು ಇದ್ದ ಕೆಲವು ಅಡಿತಡೆಗಳು ಸದ್ಯಕ್ಕೆ ನಿವಾರಣೆಯಾಗಿವೆ.












Click it and Unblock the Notifications