ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

By Mahesh
|
Google Oneindia Kannada News

Recommended Video

ಲೋಕಸಭಾ ಚುನಾವಣೆ 2019: ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 04: ಅಸೆಂಬ್ಲಿ ಚುನಾವಣೆ, ಸ್ಥಳೀಯ ಸಂಸ್ಥೆ ಚುನಾವಣೆ ನಂತರ ಕಾಂಗ್ರೆಸ್, ಈಗ ಲೋಕಸಭೆ ಚುನಾವಣೆಯತ್ತ ನನ್ನ ನೋಟ ನೆಟ್ಟಿದೆ. ಮುಂದಿನ ತಿಂಗಳಿನಿಂದ ಲೋಕಸಭೆ ಚುನಾವಣೆಗಾಗಿ ತಂತ್ರಗಾರಿಕೆ, ಯೋಜನೆ ಸಕ್ರಿಯವಾಗಿ ನಡೆಯಲಿದೆ.

ಸದ್ಯ ಲೋಕಸಭೆ ಚುನಾವಣೆಗೆ ರಾಜ್ಯದ 28 ಕ್ಷೇತ್ರಗಳ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಕೊಪ್ಪಳದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಸೂಚಿಸಲಾಗಿದೆ.

ಲೋಕಸಭೆ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ.

ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!ರಮ್ಯಾ-ಅಂಬರೀಶ್ ಜಗಳದಲಿ ಮಂಡ್ಯ ಕಾಂಗ್ರೆಸ್ ಮಟಾಷ್!

ಸಾಮಾನ್ಯವಾಗಿ ಆಂತರಿಕ ಸಮೀಕ್ಷೆ ಮೂಲಕ ಟಿಕೆಟ್ ಆಕಾಂಕ್ಷಿಗಳ ಹಣೆ ಬರಹ ನಿರ್ಧರಿಸುವ ಕಾಂಗ್ರೆಸ್, ಈ ಬಾರಿ ಬೇರೆ ರೀತಿಯಲ್ಲಿ ಹೆಜ್ಜೆ ಇಡುತ್ತಿದೆ. ಅಭಿಪ್ರಾಯ ಸಂಗ್ರಹವಾದ ಬಳಿಕ, ಹೈಕಮಾಂಡ್ ಗೆ ಸಲ್ಲಿಸಿ, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಎಸ್‌.ಎಂ.ಕೃಷ್ಣ ಪುತ್ರಿ ಶಾಂಭವಿ ಕಾಂಗ್ರೆಸ್‌ ಅಭ್ಯರ್ಥಿ? ಎಸ್‌.ಎಂ.ಕೃಷ್ಣ ಪುತ್ರಿ ಶಾಂಭವಿ ಕಾಂಗ್ರೆಸ್‌ ಅಭ್ಯರ್ಥಿ?

ಚಿತ್ರದುರ್ಗ, ಧಾರವಾಡ ಹಾಗೂ ಹಾವೇರಿ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಈ ಬಗ್ಗೆ ಕೊನೆ ಕ್ಷಣದ ತನಕ ಕುತೂಹಲ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಿಲ್ಲ.

ಟಿಕೆಟ್ ಹಂಚಿಕೆಯಲ್ಲೂ ಮೈತ್ರಿ

ಟಿಕೆಟ್ ಹಂಚಿಕೆಯಲ್ಲೂ ಮೈತ್ರಿ

* ಶಿವಮೊಗ್ಗ: ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್ ಆಕಾಂಕ್ಷಿಗಳಾಗಿದ್ದಾರೆ.
* ದಕ್ಷಿಣ ಕನ್ನಡ : ರಮಾನಾಥ್ ರೈ
* ಉಡುಪಿ- ಚಿಕ್ಕಮಗಳೂರು: ವಿನಯ್ ಕುಮಾರ್ ಸೊರಕೆ ಅಥವಾ ವೀರಪ್ಪ ಮೊಯ್ಲಿ
* ಮಂಡ್ಯ ಹಾಗೂ ಹಾಸನ: ಜೆಡಿಎಸ್ ಬಿಟ್ಟುಕೊಡಲಾಗಿದೆ.
* ಉತ್ತರ ಕನ್ನಡ : ಪ್ರಶಾಂತ್ ದೇಶಪಾಂಡೆ
* ತುಮಕೂರು : ಮುದ್ದಹನುಮೇಗೌಡ.
* ಚಾಮರಾಜನಗರ : ಧ್ರುವನಾರಾಯಣ

ಬೆಂಗಳೂರು ನಾಲ್ಕು ಕ್ಷೇತ್ರಗಳು

ಬೆಂಗಳೂರು ನಾಲ್ಕು ಕ್ಷೇತ್ರಗಳು

* ಬೆಂಗಳೂರು ಕೇಂದ್ರ -ಸಾಂಗ್ಲಿಯಾನ, ರೋಷನ್ ಬೇಗ್, ರಿಜ್ವಾನ್ ಅರ್ಷದ್ ಆಕಾಂಕ್ಷಿಗಳಾಗಿದ್ದು, ರೋಷನ್ ಬೇಗ್ ಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.
* ಬೆಂಗಳೂರು ಗ್ರಾಮಾಂತರ್: ಡಿ. ಕೆ ಸುರೇಶ್
* ಬೆಂಗಳೂರು ದಕ್ಷಿಣ : ಪ್ರಿಯಾಕೃಷ್ಣ ಅಥವಾ ರಾಮಲಿಂಗಾರೆಡ್ಡಿ
* ಬೆಂಗಳೂರು ಉತ್ತರ : ನಾರಾಯಣಸ್ವಾಮಿ ಹೆಸರು ಕೇಳಿ ಬಂದಿದ್ದು, ಜೆಡಿಎಸ್ ಗೆ ಬಿಟ್ಟುಕೊಡುವ ಸಾಧ್ಯತೆಯಿದೆ.

ಮೈಸೂರಿನಿಂದ ಯಾರು ಸ್ಪರ್ಧೆ

ಮೈಸೂರಿನಿಂದ ಯಾರು ಸ್ಪರ್ಧೆ

* ಚಿತ್ರದುರ್ಗ: ಮಾಯಕೊಂಡದ ಮಾಜಿ ಶಾಸಕ ಶಿವಮೂರ್ತಿ ನಾಯಕ್ ಅವರು ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಮೇಲೆ ಒತ್ತಡ ತಂದಿದ್ದಾರೆ. ಮಾಜಿ ಸಚಿವ ಎಚ್ ಆಂಜನೇಯ ಹಾಗೂ ಚಂದ್ರಪ್ಪ ಕೂಡಾ ಸ್ಪರ್ಧಿಗಳು.
* ಮೈಸೂರು: ಸಿದ್ದರಾಮಯ್ಯ, ಅಂಬರೀಷ್ ಹಾಗೂ ಸಿಎಚ್ ವಿಜಯ್ ಶಂಕರ್ ಹೆಸರು ಕೇಳಿ ಬಂದಿದ್ದು, ವಿಜಯ್ ಶಂಕರ್ ಅವರಿಗೆ ಟಿಕೆಟ್ ಅಂತಿಮವಾಗಲಿದೆ.
* ಹಾವೇರಿ : ಸಲೀಂ ಅಹ್ಮದ್ ಹಾಗೂ ಶಿವಣ್ಣ ನಡುವೆ ಟಿಕೆಟ್ ಗಾಗಿ ಪೈಪೋಟಿ.
* ಬಳ್ಳಾರಿ : ಸಂತೋಷ್ ಲಾಡ್, ಬಸನಗೌಡ ಬಾದರ್ಲಿ ಹಾಗೂ ವಿರೂಪಾಕ್ಷಪ್ಪ ಅವರು ತಮ್ಮ ಶಿಫಾರಸ್ಸಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
* ರಾಯಚೂರು : ಬಿ.ವಿ ನಾಯಕ್

ಬೀದರ್ ನಲ್ಲಿ ಯಾರಿಗೆ ಟಿಕೆಟ್

ಬೀದರ್ ನಲ್ಲಿ ಯಾರಿಗೆ ಟಿಕೆಟ್

* ಬೀದರ್ - ಅಶೋಕ್ ಖೇಣಿ ಅಥವಾ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಕುಟುಂಬದವರು ಕಣಕ್ಕಿಳಿದರೆ ಅವರಿಗೆ ಮೀಸಲು. ಶರಣ ಪ್ರಕಾಶ್, ಅಲ್ಲಮಪ್ರಭು ಕೂಡಾ ಆಕಾಂಕ್ಷಿಗಳು
* ಬೆಳಗಾವಿ: ವಿವೇಕ್ ರಾವ್ ಅಥವಾ ಫಿರೋಜ್ ಸೇಠ್
* ಕೋಲಾರ : ಮುನಿಯಪ್ಪ್
* ಬಾಗಲಕೋಟೆ : ಅಜಯ್ ಕುಮಾರ್ ಸರ್ ನಾಯಕ್
* ವಿಜಯಪುರ: ಪ್ರಕಾಶ್ ರಾಥೋಡ್
* ದಾವಣಗೆರೆ : ಎಸ್ ಎಸ್ ಮಲ್ಲಿಕಾರ್ಜುನ
* ಚಿಕ್ಕೋಡಿ : ಪ್ರಕಾಶ್ ಹುಕ್ಕೇರಿ

English summary
Lok Sabha Elections 2019 : Congress Probable list is prepared after getting opinions from district level leaders. This list will be sent to High command.Former CM Siddaramaiah likely to contest from Koppal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X