ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್ ಭವಿಷ್ಯ: ರಾಜ್ಯ ಬಿಜೆಪಿ ನಾಯಕರಲ್ಲಿ ಸಂಭ್ರಮ

|
Google Oneindia Kannada News

Recommended Video

Lok Sabha Elections 2019: ಎಕ್ಸಿಟ್ ಪೋಲ್ ನುಡಿದ ಭವಿಷ್ಯದ ಬಗ್ಗೆ ರಾಜ್ಯ ಬಿಜೆಪಿ ನಾಯಕರ ಪ್ರತಿಕ್ರಿಯೆ

ಬೆಂಗಳೂರು, ಮೇ 20: ಚುನಾವಣೋತ್ತರ ಸಮೀಕ್ಷೆಗಳು ವಿರೋಧಪಕ್ಷಗಳಲ್ಲಿ ಹತಾಶೆ ಮೂಡಿಸಿದ್ದರೆ, ಆಡಳಿತಾರೂಢ ಬಿಜೆಪಿ ಮತ್ತೆ ಗೆದ್ದೇಬಿಟ್ಟಿದ್ದೇವೆ ಎಂಬ ಸಂಭ್ರಮದಲ್ಲಿ ಬೀಗುತ್ತಿದೆ. ಎಕ್ಸಿಟ್ ಪೋಲ್‌ಗಳಲ್ಲಿ ಅಂದಾಜಿಸಿರುವ ಅಂಕಿಗಳು ಬಿಜೆಪಿಗೆ ಖುಷಿ ನೀಡಿವೆ. ಮತ್ತೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದ್ದ ಆಡಳಿತಾರೂಢ ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ. ಆದರೆ, ಎಕ್ಸಿಟ್ ಪೋಲ್‌ಗಳು ತಲೆಕೆಳಗಾದ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಮೇ 23ರ ಅಂತಿಮ ಫಲಿತಾಂಶ ಬರುವವರೆಗೂ ಕಾಯುವುದು ಅನಿವಾರ್ಯ.

ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪರವಾಗಿದೆ. ಹೆಚ್ಚಿನ ಸಮೀಕ್ಷಗಳು ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿವೆ ಎಂದು ತಿಳಿಸಿವೆ. ಕೆಲವು ಸಮೀಕ್ಷೆಗಳು ಮಾತ್ರ ಸರಳ ಬಹುಮತಕ್ಕಿಂತ ಕೆಲವು ಕಡಿಮೆ ಸೀಟುಗಳನ್ನು ಎನ್‌ಡಿಎ ಪಡೆದುಕೊಳ್ಳಲಿದೆ ಎಂದು ಹೇಳಿವೆ.

ಎಕ್ಸಿಟ್ ಪೋಲ್‌ ಫಲಿತಾಂಶದಿಂದ 'ಕೈ' ತಳಮಳ: ಮತ್ತೆ ಇವಿಎಂ ಮೇಲೆ ಆರೋಪ ಎಕ್ಸಿಟ್ ಪೋಲ್‌ ಫಲಿತಾಂಶದಿಂದ 'ಕೈ' ತಳಮಳ: ಮತ್ತೆ ಇವಿಎಂ ಮೇಲೆ ಆರೋಪ

ಕರ್ನಾಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಡೆದುಕೊಳ್ಳಲಿರುವ ಸೀಟುಗಳ ಬಗ್ಗೆ ಸಮೀಕ್ಷೆಗಳು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. ಆದರೆ, ಸಮೀಕ್ಷೆಗಳ ಪ್ರಕಾರ ಬಿಜೆಪಿ ಅತಿ ಕಡಿಮೆ ಎಂದರೂ 15 ಸೀಟುಗಳಲ್ಲಿ ಗೆಲ್ಲಲಿದೆ. ಕೆಲವು ಸಮೀಕ್ಷೆಗಳು 20ರ ಗಡಿ ದಾಟಿವೆ. ಎಕ್ಸಿಟ್ ಪೋಲ್‌ಗಳ ಸರಾಸರಿಯಲ್ಲಿ ಬಿಜೆಪಿ 18 ಸೀಟುಗಳನ್ನು ಗೆಲ್ಲಲಿದೆ. ಈಗಾಗಲೇ ಗೆದ್ದ ಖುಷಿಯಲ್ಲಿ ತೇಲಾಡುತ್ತಿರುವ ರಾಜ್ಯ ಬಿಜೆಪಿ ನಾಯಕರು, ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುವುದರ ಬಗ್ಗೆ ನಿರೀಕ್ಷಿಸುತ್ತಿದ್ದಾರೆ.

ಎಕ್ಸಿಟ್ ಪೋಲ್ ಫಲಿತಾಂಶಗಳ ಕುರಿತು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳು ಇಲ್ಲಿವೆ...

ಅತಿರಥ ಮಹಾರಥರು ಮನೆಗೆ

ಅತಿರಥ ಮಹಾರಥರು ಮನೆಗೆ

ಇವಿಎಂ ಮೇಲೆ ಅನುಮಾನವಿದೆ ಎಂಬ ಪರಮೇಶ್ವರ್ ಹೇಳಿಕೆಯಲ್ಲಿ ಹತಾಶೆ ಇದೆ. ನಮ್ಮ ನಿರೀಕ್ಷೆಗೂ ಮೀರಿ ಜನರ ಬೆಂಬಲ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ಕಿತ್ತಾಟ ಆರಂಭವಾಗಿದೆ. ಮೇ 23ರ ಬಳಿಕ ಏನಾಗುತ್ತದೆ ಕಾದು ನೋಡಬೇಕು. ಮೈತ್ರಿ ಪಕ್ಷದ ಅತಿರಥ ಮಹಾರಥರು ಮನೆಗೆ ಹೋಗಲಿದ್ದಾರೆ ಎಂದು ಬಿ.ಎಸ್ .ಯಡಿಯೂರಪ್ಪ ಹೇಳಿದ್ದಾರೆ.

ಮೋದಿ ಮತ್ತೆ ಪ್ರಧಾನಿ

ಮೋದಿ ಮತ್ತೆ ಪ್ರಧಾನಿ

ಚುನಾವಣೋತ್ತರ ಸಮೀಕ್ಷೆಯಲ್ಲಿ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕಿದೆ. ಕುಂದಗೋಳ, ಚಿಂಚೋಳಿ ಉಪ ಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ. ಸಮೀಕ್ಷೆಗಳ ನಿಜವಾಗಿ, ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ ಎಂದು ಬಿ. ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದಾರೆ.

 ಎಕ್ಸಿಟ್ ಪೋಲ್ ಸತ್ಯವಾದರೆ ಕರ್ನಾಟಕ ಸರ್ಕಾರದ ಕತೆ ಏನು? ಎಕ್ಸಿಟ್ ಪೋಲ್ ಸತ್ಯವಾದರೆ ಕರ್ನಾಟಕ ಸರ್ಕಾರದ ಕತೆ ಏನು?

ಆಗ ಇವಿಎಂ ಸರಿ ಇತ್ತಾ?

ಗೊತ್ತಿದ್ದೇ ನಿಮ್ಮ ಕಾರಣ.. ಮೋದಿ ಸರಿಯಿಲ್ಲ ಆಯ್ತು, ಈಗ EVM ಸರಿ ಇಲ್ಲ. ನೀವು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಘಡ ಗೆದ್ದಾಗ EVM ಸರಿ ಇತ್ತಾ? ಎಂದು ಬಿಜೆಪಿ ಗೆದ್ದರೆ ಇವಿಎಂ ಬಗ್ಗೆ ಅನುಮಾನ ಹೆಚ್ಚಲಿದೆ ಎಂಬ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಹೇಳಿಕೆಗೆ ಈಶ್ವರಪ್ಪ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

'ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ''ಎಕ್ಸಿಟ್ ಪೋಲ್ ನಂಬಬೇಡಿ, ಮೇ 23ಕ್ಕೆ ನಿಮಗೆ ಅಚ್ಚರಿ ಕಾದಿದೆ'

ನಿರೀಕ್ಷಣಾ ಜಾಮೀನಿಗೆ ನೆಪ

ಈಗ್ಲೇ ಹೀಗಾಡುತ್ತಿರುವವರು 23 ರ ಸಂಜೆ ಇನ್ನು ಹ್ಯಾಗಾಡುತ್ತಾರೋ! ಒಟ್ಟಿನಲ್ಲಿ EVM ಇವರಿಗೆ ರಾಜಕೀಯ Anticipatory Bail ತೆಗೆದುಕೊಳ್ಳಲು ನೆವ ಅಷ್ಟೇ! ಅಥವಾ ಫಲಿತಾಂಶ ಬಂದಮೇಲೆ ಮಹಾಘಟಬಂಧನ್ ಪಕ್ಷಗಳದ್ದು ಇನ್ನೇನಾದರೂ ಪ್ರಜಾತಂತ್ರವಿರೋಧಿ ಯೋಜನೆ-ಕಾರ್ಯಕ್ರಮ ಇದೆಯೋ? ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು, ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಎಚ್.ಡಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲಎಬಿಪಿ ನ್ಯೂಸ್ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮುದುಡಲಿದೆ ಕಮಲ

English summary
Lok Sabha Elections 2019: Exit poll results 2019 Karnataka BJP leaders expressed their happiness after survey results shows NDA will gain more seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X