ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಕ್ಷೇತ್ರಗಳಿಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

By Prasad
|
Google Oneindia Kannada News

ನವದೆಹಲಿ, ಮಾ. 8 : ಹದಿನಾರನೇ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆಗಿಳಿಯಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಪ್ರಕಟಿಸಿದ್ದು, 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಿಗಾಗಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗ ಪಡಿಸಿದೆ.

ನವದೆಹಲಿಯಲ್ಲಿ ಶನಿವಾರ ಮಧ್ಯಾಹ್ನ ಚುನಾವಣಾ ಸಮಿತಿ ಸಭೆಯ ನಂತರ, ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಓದಿ ಹೇಳಿದರು. ಉಳಿದ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಎರಡನೇ ಪಟ್ಟಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.

Lok Sabha Election - Karnataka BJP first list announced

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಪ್ರಕಟಿಸಲಾದ ಈ ಇಪ್ಪತ್ತು ಕ್ಷೇತ್ರಗಳಲ್ಲಿ ಯಾವ ಮಹಿಳೆಯ ಹೆಸರೂ ಕೇಳಿಬಂದಿಲ್ಲ. ನಿರೀಕ್ಷೆಯಂತೆ ಶಿವಮೊಗ್ಗದಿಂದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟಿಕೆಟ್ ಗಿಟ್ಟಿಸಿದ್ದಾರೆ. ಬೆಂಗಳೂರು ಉತ್ತರಕ್ಕೆ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಸ್ಪರ್ಧಿಸಲಿದ್ದಾರೆ. ಕಳೆದ ಬಾರಿಯ ಸಂಸದ ಡಿಬಿ ಚಂದ್ರೇಗೌಡ (78) ಅವರನ್ನು ಕಡೆಗಣಿಸಲಾಗಿದೆ.

ಚುನಾವಣಾ ಸಮಿತಿ ಸಭೆಯಲ್ಲಿ ಹಿರಿಯ ನಾಯಕರಾದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಎಲ್ ಕೆ ಅಡ್ವಾಣಿ ಅವರು ಹಾಜರಿದ್ದರು. ಬಲ್ಲ ಮೂಲಗಳ ಪ್ರಕಾರ, ಸುಷ್ಮಾ ಸ್ವರಾಜ್ ಅವರು ಸಭೆಯ ಮಧ್ಯದಲ್ಲಿಯೇ ಹೊರನಡೆದರು. ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಕರ್ನಾಟಕದಲ್ಲಿ ಮತದಾನ ನಡೆಯಲಿದೆ. ಮೇ 16ರಂದು ಫಲಿತಾಂಶ ಹೊರಬೀಳಲಿದೆ.


ಅಭ್ಯರ್ಥಿಗಳ ಹೆಸರುಗಳು ಕೆಳಗಿನಂತಿವೆ

ಬೆಂಗಳೂರು ಉತ್ತರ - ಡಿವಿ ಸದಾನಂದ ಗೌಡ
ಬೆಂಗಳೂರು ದಕ್ಷಿಣ : ಅನಂತ್ ಕುಮಾರ್
ಬೆಂಗಳೂರು ಸೆಂಟ್ರಲ್ - ಪಿಸಿ ಮೋಹನ್
ಬೆಂಗಳೂರು ಗ್ರಾಮಾಂತರ - ಮುನಿರಾಜು ಗೌಡ
ಚಿತ್ರದುರ್ಗ - ಜನಾರ್ದನ ಸ್ವಾಮಿ
ಗುಲಬರ್ಗ - ರೇವೂ ನಾಯಕ್ ಬೆಳಮಗಿ
ಹಾವೇರಿ - ಶಿವಕುಮಾರ್ ಉದಾಸಿ
ಧಾರವಾಡ - ಪ್ರಹ್ಲಾದ್ ಜೋಶಿ
ದಾವಣಗೆರೆ - ಜಿಎಂ ಸಿದ್ದೇಶ್
ಚಿಕ್ಕೋಡಿ - ರಮೇಶ್ ಕತ್ತಿ
ಬಿಜಾಪುರ - ರಮೇಶ್ ಜಿಗಜಿಣಗಿ
ರಾಯಚೂರು - ಶಿವನಗೌಡ ನಾಯಕ್
ಬೆಳಗಾವಿ - ಸುರೇಶ್ ಅಂಗಡಿ
ಕೊಪ್ಪಳ್ಳ - ಸಂಗಣ್ಣ ಕರಡಿ
ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
ಬಾಗಲಕೋಟೆ - ಗದ್ದಿಗೌಡರ್
ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್
ಶಿವಮೊಗ್ಗ - ಯಡಿಯೂರಪ್ಪ
ಚಾಮರಾಜನಗರ - ಎಆರ್ ಕೃಷ್ಣಮೂರ್ತಿ
ಚಿಕ್ಕಬಳ್ಳಾಪುರ- ಬಚ್ಚೇಗೌಡ

English summary
Bharatiya Janata Party has announced names of 20 candidates from Karnataka for Lok Sabha Election 2014. The list was announced by Ananth Kumar in the presence of Rajnath Singh, Narendra Modi, LK Advani. The election will take place on April 17 in Karnataka in one phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X