ಬಿಎಸ್‌ವೈ ಬಿಗ್‌ ಬಾಸ್‌: ರಾಜಾಹುಲಿ ಕೈಲಿದೆ ಟಿಕೆಟ್‌ ಆಕಾಂಕ್ಷಿಗಳ ಭವಿಷ್ಯ- ಶೋಭಕ್ಕಗೆ ಟಿಕೆಟ್‌ ಫಿಕ್ಸ್‌?

ಕರ್ನಾಟಕದ ಬಿಜೆಪಿ ಪಾಲಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಿಗ್ ಬಾಸ್ ಎಂಬ ಮಾತು ಈ ಹಿಂದೆ ಕೇಳಿಬರುತ್ತಿತ್ತು. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿದ ನಂತರ ಅವರ ಸ್ಥಾನ ತುಂಬಲು ಬಿಜೆಪಿ ಹೈಕಮಾಂಡ್ ಸಖತ್ ಪ್ರಯತ್ನ ಮಾಡಿತ್ತು. ಇದೆಲ್ಲಾ ವರ್ಕೌಟ್ ಆಗದ ಹಿನ್ನೆಲೆಯಲ್ಲಿ ಈಗಲೂ ಯಡಿಯೂರಪ್ಪ ಅವರೇ ಬಿಗ್ ಬಾಸ್ ಅಂತಿದ್ದಾರೆ ಬಿಎಸ್‌ವೈ ಬೆಂಬಲಿಗರು. ಹಾಗಾದ್ರೆ ಬಿಜೆಪಿ ಕರ್ನಾಟಕದ ಅಭ್ಯರ್ಥಿಗಳನ್ನು ಘೋಷಿಸುವುದು ಯಾವಾಗ?

ಈಗಾಗಲೇ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದ್ದು, ಲೋಕಸಭೆ ಅಖಾಡಕ್ಕೆ ಫಸ್ಟ್ ಎಂಟ್ರಿ ಕೊಟ್ಟು ರಣಕಹಳೆ ಮೊಳಗಿಸಿದೆ. ಹೀಗಿದ್ದಾಗ ಬಿಜೆಪಿ ನಾಯಕರು ಕರ್ನಾಟಕ ಅಭ್ಯರ್ಥಿಗಳ ಪಟ್ಟಿಯನ್ನ ಯಾವಾಗ ಘೋಷಣೆ ಮಾಡ್ತಾರೆ? ಅನ್ನೋ ಪ್ರಶ್ನೆ ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಹೀಗಿದ್ದಾಗಲೇ ಬಿಜೆಪಿ ಕೇಂದ್ರ ನಾಯಕರು ದಿಢೀರ್ ಕರ್ನಾಟಕದ ನಾಯಕರಿಗೆ ಕರೆಕೊಟ್ಟಿದ್ದಾರೆ. ಈ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರು ಕೊಟ್ಟ ಪಟ್ಟಿಯನ್ನೇ ವರಿಷ್ಠರು ಫೈನಲ್ ಮಾಡ್ತಾರೆ ಎನ್ನಲಾಗುತ್ತಿದೆ. ಹಾಗಾದ್ರೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಗುತ್ತಾ?

Lok Sabha Election 2024 Soon BS Yediyurappa May Submit His List To High Command

ಶೋಭಾ ಕರಂದ್ಲಾಜೆಗೆ ಟಿಕೆಟ್?

ಹೌದು ಇದೀಗ ಯಕ್ಷಪ್ರಶ್ನೆಯಾಗಿ ಉಳಿದಿರುವ ವಿಚಾರ ಏನು ಅಂದ್ರೆ, ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಯ ಉಡುಪಿ & ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗುತ್ತಾ? ಸಿಗಲ್ವಾ? ಅಂತಾ. ಈಗಿನ ಲೆಕ್ಕಾಚಾರಗಳ ಪ್ರಕಾರ ಉಡುಪಿ & ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈಗ ಶೋಭಾ ಕರಂದ್ಲಾಜೆ ಅವರ ವಿರುದ್ಧ, ಅಸಮಾಧಾನದ ಹೊಗೆ ಆಡುತ್ತಿದೆ. ಈ ಕಾರಣಕ್ಕೆ 2024 ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಪಕ್ಷದಿಂದ ಶೋಭಾ ಕರಂದ್ಲಾಜೆ ಅವರಿಗೆ ಉಡುಪಿ & ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗಲ್ಲ ಎನ್ನಲಾಗುತ್ತಿದೆ. ಹೀಗಿದ್ದಾಗಲೂ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ಮಾತು ಕೇಳಿಬಂದಿವೆ.

ಯಡಿಯೂರಪ್ಪ ಮಾತೇ ಫೈನಲ್?

ಕರ್ನಾಟಕ ಬಿಜೆಪಿ ಒಳಗೆ ಬಣಗಳು ಇರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿ. ಅದ್ರಲ್ಲೂ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಲು ಹಲವರು ಪ್ರಯತ್ನ ಮಾಡಿದ್ದರು ಎಂಬ ಆರೋಪವೂ ಇದೆ. ಹೀಗಿದ್ದಾಗಲೇ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಹೀನಾಯವಾಗಿ ಕರ್ನಾಟಕದಲ್ಲಿ ಸೋತಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿ ಕೇಂದ್ರ ನಾಯಕರು 2024ರ ಲೋಕಸಭೆ ಚುನಾವಣೆಗೆ ಮೊದಲೇ ಅಲರ್ಟ್ ಆಗಿದ್ದು ಯಡಿಯೂರಪ್ಪ ಅವರ ಕೈ ಬಲಪಡಿಸಿದ್ದಾರೆ. ಇದೇ ಕಾರಣಕ್ಕೆ ಇದೀಗ 2024ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಲಿರುವ ಬಿಜೆಪಿ ಅಭ್ಯರ್ಥಿಗಳನ್ನ ಯಡಿಯೂರಪ್ಪ ಅವರೇ, ಆಯ್ಕೆ ಮಾಡಿ ಪಟ್ಟಿ ರೆಡಿ ಮಾಡಿದ್ದಾರೆ ಎನ್ನಲಾಗಿದೆ.

Lok Sabha Election 2024 Soon BS Yediyurappa May Submit His List To High Command

ಇದೀಗ ಯಡಿಯೂರಪ್ಪ ಅವರು ನೀಡುವ ಪಟ್ಟಿಯನ್ನೇ ಫೈನಲ್ ಮಾಡಿ ಇಂದು ಅಥವಾ ನಾಳೆಯ ಒಳಗೆ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ರಿಲೀಸ್ ಮಾಡಬಹುದು ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಬಿಜೆಪಿ ಕೇಂದ್ರ ನಾಯಕರ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ. ಅಲ್ಲದೆ ಮುಂದೆ ಬಿಜೆಪಿಗೆ ಯಡಿಯೂರಪ್ಪ ಅವರ ಪಟ್ಟಿಯಿಂದ ಬಲ ಸಿಗುತ್ತಾ? ಎಂಬ ಕುತೂಹಲ ಕೆರಳಿದೆ. ಅಲ್ಲದೆ ಯಡಿಯೂರಪ್ಪ ಅವರ ಪುತ್ರ & ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ತಂದೆಯ ಜೊತೆ ಸೇರಿ ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+