Lok Sabha Election 2024: ಬೆಳಗಾವಿಯಲ್ಲಿ ಅ. 2, 3ರಂದು ಕುರುಬರ ಬೃಹತ್ ಸಭೆ
ಬೆಂಗಳೂರು, ಸೆಪ್ಟಂಬರ್ 28: ಲೋಕಸಭೆ ಚುನಾವಣೆ 2024 ಚುನಾವಣೆ ಎದರಿಸಲು ಎಲ್ಲ ಪಕ್ಷಗಳು ಸಿದ್ಧಗೊಳ್ಳುತ್ತಿವೆ. ಈ ಮಧ್ಯೆ ಕುರುಬ ಸಮುದಾಯದ ಮುಖಂಡರನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿವೆ. ಏಕೆಂದರೆ ಇವರು ಚುನಾವಣಾ ಅಭ್ಯರ್ಥಿಗಳನ್ನು ಬೆಂಬಲಿಸುವಲ್ಲಿ ಸಣ್ಣ ಸಮುದಾಯ ಎನ್ನಲಾಗುವ ಈ ಕುರುಬ ಸಮುದಾಯ ಮಹತ್ವದ ಪಾತ್ರ ವಹಿಸಲಿದೆ.
ಕುರುಬರನ್ನು ಹಿಂದುಳಿದ ಸಮುದಾಯ ಎನ್ನಲಾಗುತ್ತಿದೆ. ದೇಶಾದ್ಯಂತ ಈ ಹಿಂದುಳಿದ ಸಮುದಾಯವು ಸುಮಾರು 11 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ರಾಜಕೀಯವಾಗಿ ಪ್ರಭಾವ ಶಾಲಿಯಾಗಿರುವ ಲಿಂಗಾಯತರು ಹಾಗೂ ಒಕ್ಕಲಿಗ ಸಮುದಾಯಗಳಿಗೆ ಹೋಲಿಸಿದರೆ ಕುರುಬ ಸಮುದಾಯ ರಾಷ್ಟ್ರೀಯವಾಗಿ ಚಿಕ್ಕದಾಗಿದೆ.

ಈ ಮಧ್ಯೆ ರಾಜಕೀಯ ಬಣಗಳನ್ನು ಬಗ್ಗಿಸಲು, ತಮ್ಮೆಡೆಗೆ ಆಕರ್ಷಿಸಲು ಕುರುಬ ಸಮುದಾಯದವರು ಮುಂದಿನ ತಿಂಗಳ ಅಕ್ಟೋಬರ್ 2 ಮತ್ತು 3 ರಂದು ಬೆಳಗಾವಿಯಲ್ಲಿ 09 ವಾರ್ಷಿಕ ಸಭೆ ಹಮ್ಮಿಕೊಂಡಿದ್ದಾರೆ. ಇಲ್ಲಿ ರಾಜ್ಯ ಮಾತ್ರವಲ್ಲದೇ ದೇಶದ ಇನ್ನಿತರ ಪಕ್ಷಗಳ ಕುರುಬ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಈ ಸಭೆ ರಾಜಕೀಯವಾಗಿ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.
ರಾಜಕೀಯ ಸಾಧಕರಿಗೆ ಸನ್ಮಾನ
ಹೆಚ್ಚಿನ ರಾಜ್ಯಗಳಲ್ಲಿ ಕುರುಬರನ್ನು ಹಿಂದುಳಿದವರು ಎಂದು ಪರಿಗಣಿಸಲಾಗುತ್ತದೆ. ಇನ್ನೂ ರಾಜಕೀಯವಾಗಿ ಪಕ್ಷಗಳು ಮತ್ತು ಅಭ್ಯರ್ಥಿಗಳನ್ನು ಬೆಂಬಲಿಸುವ ಸಂದರ್ಭದಲ್ಲಿ ಇತರ ಸಣ್ಣ ಹಿಂದುಳಿದ ಸಮುದಾಯಗಳು ಕುರುಬರನ್ನು ಅನುಸರಣೆ ಮಾಡುತ್ತಾರೆ. ಇದೆಲ್ಲ ಕಾರಣಗಳಿಂದ ವಾರ್ಷಿಕ ಸಭೆಯಲ್ಲಿ ಕುರುಬರು ತಮ್ಮ ರಾಜಕೀಯ ಬಣಗಳ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನೆನ್ನ ಬುಧವಾರ ಬೆಂಗಳೂರಿನಲ್ಲಿ ಕುರುಬ ಸಮುದಾಯದ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸಭೆ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಶದ ಹರಿಯಾಣ ರಾಜ್ಯಪಾಲ ಬಂಡಾರು ದತ್ತಾತ್ರೇಯ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಕೇಂದ್ರ ಸಚಿವರಾದ SP ಸಿಂಗ್ ಭಾಗೇಲ್ ಮತ್ತು ಫಗ್ಗನ್ ಕುಲಸ್ತೆ, ಉತ್ತರ ಪ್ರದೇಶದ ಸಚಿವರಾದ ರಾಜಕೀಯ ಸಾಧಕರನ್ನು ಸಭೆಯಲ್ಲಿ ನಾವು ಸನ್ಮಾನಿಸಲಿದ್ದೇವೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ಸಚಿವ ಉಷಾಶ್ರೀ ಚರಣ್, ಗುಜರಾತ್ ಶಾಸಕ ಮಾವ್ಜಿಭಾಯಿ ದೇಸಾಯಿ, ಯುಪಿ ಶಾಸಕ ಪ್ರೇಂಪಾಲ್ ಸಿಂಗ್ ಧಂಗರ್, ಅಜಿತ್ ಸಿಂಗ್ ಪಾಲ್, ದೆಹಲಿ ಶಾಸಕ ದಿನೇಶ್ ಮೊಂಗಿಯಾ, ತೆಲಂಗಾಣ ಎಂಎಲ್‌ಸಿ ಯೆಗ್ಗಿ ಮಲ್ಲೇಶಂ, ಗುಜರಾತ್‌ನ ರಾಜ್ಯಸಭಾ ಸಂಸದ ಬಾಬುಭಾಯ್ ದೇಸಾಯಿ ಸೇರಿದಂತೆ ಹಲವರು. ಕುರುಬ ನಾಯಕರು ವಿವಿಧ ರಾಜಕೀಯ ಪಕ್ಷಗಳಲ್ಲಿ ಸಕ್ರಿಯರಾಗಿದ್ದಾರೆ.
ಭಿನ್ನಾಭಿಪ್ರಾಯ ಮೀರಿ ಕುರುಬರು ಒಂದಾಗಬೇಕಿದೆ
ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಶನಲ್‌ನ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಮತ್ತು ಬಿಜೆಪಿ ವಿಧಾನಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಅವರು ಜವಾಬ್ದಾರಿಯಲ್ಲಿ ಸಭೆ ನಡೆಯಲಿದೆ. ಸಂಕುಚಿತ ಪಕ್ಷಗಳ ಬಾಂಧವ್ಯ ಮತ್ತು ಭಾಷೆಯಲ್ಲಿನ ಭಿನ್ನಾಭಿಪ್ರಾಯಗಳನ್ನು ಮೀರಿ ಎಲ್ಲರೂ ಒಂದಾಗಬೇಕಿದೆ. ನಮ್ಮಲ್ಲಿಯೇ ಸದೃಢತೆ ನಿರ್ಮಾಣ ಮಡುವ ಉದ್ದೇಶದಿಂದ ನಾವೆಲ್ಲರು ಒಂದಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ಸಭೆ ಹಾಜರಾಗುವ ಸಂಬಂಧ ಅನೇಕ ಸಮುದಾಯದ ಸದಸ್ಯರು ಬೆಳಗಾವಿ ಮಾತ್ರವಲ್ಲದೇ ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಈಗಾಗಲೇ ಹೋಟೆಲ್‌ಗಳು ಮತ್ತು ಲಾಡ್ಜ್‌ಗಳಲ್ಲಿ ತಂಗಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂದರು.












Click it and Unblock the Notifications