ಲೋಕಸಭೆ ಚುನಾವಣೆ 2024; 28 ಕ್ಷೇತ್ರಕ್ಕೆ ವೀಕ್ಷಕರಾಗಿ ಸಚಿವರ ನೇಮಕ
ಬೆಂಗಳೂರು, ಸೆಪ್ಟೆಂಬರ್ 24; ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ 2024ರ ಲೋಕಸಭೆ ಚುನಾವಣೆಯ ಸಿದ್ಧತೆಯನ್ನು ಆರಂಭಿಸಿದೆ. 2019ರ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಪಕ್ಷ ಗೆದ್ದಿರುವುದು 1 ಸ್ಥಾನ ಮಾತ್ರ. ಮುಂಬರುವ ಚುನಾವಣೆಯಲ್ಲಿ 20 ಪ್ಲಸ್ ಸ್ಥಾನಗಳಲ್ಲಿ ಜಯಗಳಿಸುವ ಗುರಿಯನ್ನು ಪಕ್ಷ ಹೊಂದಿದೆ.
ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ 28 ಲೋಕಸಭಾ ಕ್ಷೇತ್ರಗಳಿಗೆ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಸಚಿವರಿಗೆ ನೀಡಿರುವ ಕ್ಷೇತ್ರಗಳಿಗೆ ಉಸ್ತುವಾರಿಗಳಾಗಿ ಭೇಟಿ ನೀಡಿ, ಸ್ಥಳೀಯ ನಾಯಕರ ಜೊತೆ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.

ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರ ಜೊತೆ ಸಭೆಗಳನ್ನು ನಡೆಸಿ 2024ರ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರು ಮಾಡಿ ರಾಜ್ಯ ಕಾಂಗ್ರೆಸ್ ಘಟಕಕ್ಕೆ ಸಲ್ಲಿಕೆ ಮಾಡಲಿದ್ದಾರೆ. ರಾಜ್ಯದ ನಾಯಕರು ಬಳಿಕ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಕಾಂಗ್ರೆಸ್ ಈಗಾಗಲೇ ಲೋಕಸಭಾ ಚುನಾವಣೆ ಸಿದ್ಧತೆ ಆರಂಭಿಸಿದೆ. ಕಳೆದ ಚುನಾವಣೆಯ ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದೆ. ಅಲ್ಲದೇ ಜೆಡಿಎಸ್ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿ ಸೀಟು ಹಂಚಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್‌ಗೆ ಸವಾಲು ಎದುರಾಗಿದೆ.
ಎಐಸಿಸಿ ಅಧ್ಯಕ್ಷರು ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದೆ. ಆದ್ದರಿಂದ 28 ಕ್ಷೇತ್ರಗಳ ಪೈಕಿ ಕನಿಷ್ಠ 20ರಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್ ಪಕ್ಷ ಗುರಿ ಹೊಂದಿದೆ. ಇದಕ್ಕಾಗಿ ತಂತ್ರಗಳನ್ನು ರೂಪಿಸುತ್ತಿದೆ.
ಈಗಾಗಲೇ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಚಿವರ ಜೊತೆ ಸಭೆಗಳನ್ನು ನಡೆಸಿ, ಲೋಕಸಭೆ ಚುನಾವಣೆಯ ಕುರಿತು ಸೂಚನೆಗಳನ್ನು ನೀಡಿದ್ದಾರೆ.
ಯಾವ ಕ್ಷೇತ್ರಕ್ಕೆ ಯಾರು ಉಸ್ತುವಾರಿ
1. ಬಾಗಲಕೋಟೆ - ಪ್ರಿಯಾಂಕ್ ಖರ್ಗೆ
2. ಬೆಂಗಳೂರು ಕೇಂದ್ರ - ಎನ್. ಎಸ್. ಬೋಸರಾಜ್
3. ಬೆಂಗಳೂರು ಉತ್ತರ - ಡಾ. ಜಿ. ಪರಮೇಶ್ವರ
4. ಬೆಂಗಳೂರು ಗ್ರಾಮಾಂತರ - ಕೆ. ವೆಂಕಟೇಶ್
5. ಬೆಂಗಳೂರು ದಕ್ಷಿಣ - ಡಾ. ಶರಣ ಪ್ರಕಾಶ್ ಪಾಟೀಲ್
6. ಬೆಳಗಾವಿ - ಶಿವರಾಜ್ ಎಂ. ತಂಗಡಗಿ
7. ಕಲಬುರಗಿ - ಬಿ. ನಾಗೇಂದ್ರ
8. ಬೀದರ್- ಸಂತೋಷ್ ಎಸ್. ಲಾಡ್
9. ವಿಜಯಪುರ - ಸತೀಶ್ ಜಾರಕಿಹೊಳಿ
10. ಚಾಮರಾಜನಗರ - ದಿನೇಶ್ ಗುಂಡೂರಾವ್
11. ಚಿಕ್ಕಬಳ್ಳಾಪುರ - ಜಮೀರ್ ಅಹ್ಮದ್ ಖಾನ್
12. ಚಿಕ್ಕೋಡಿ - ಡಿ. ಸುಧಾಕರ್
13. ಚಿತ್ರದುರ್ಗ - ಡಾ. ಎಚ್. ಸಿ. ಮಹದೇವಪ್ಪ
14. ದಕ್ಷಿಣ ಕನ್ನಡ - ಮಧು ಬಂಗಾರಪ್ಪ
15. ದಾವಣಗೆರೆ - ಈಶ್ವರ ಖಂಡ್ರೆ
16. ಧಾರವಾಡ - ಲಕ್ಷ್ಮೀ ಹೆಬ್ಬಾಳ್ಕರ್
17. ಬಳ್ಳಾರಿ - ಶಿವಾನಂದ ಪಾಟೀಲ್
18. ಹಾಸನ - ಚೆಲುವರಾಯಸ್ವಾಮಿ
19. ಹಾವೇರಿ - ಎಸ್. ಎಸ್. ಮಲ್ಲಿಕಾರ್ಜುನ
20. ಕೋಲಾರ - ರಾಮಲಿಂಗಾ ರೆಡ್ಡಿ
21. ಕೊಪ್ಪಳ - ಆರ್. ಬಿ. ತಿಮ್ಮಾಪುರ
22. ಮಂಡ್ಯ - ಡಾ. ಎಂ. ಸಿ. ಸುಧಾಕರ್
23. ಮೈಸೂರು - ಬೈರತಿ ಸುರೇಶ್
24. ರಾಯಚೂರು - ಕೆ. ಎಚ್. ಮುನಿಯಪ್ಪ
25. ಶಿವಮೊಗ್ಗ - ಕೆ. ಎನ್. ರಾಜಣ್ಣ
26. ತುಮಕೂರು - ಕೃಷ್ಣ ಬೈರೇಗೌಡ
27. ಉಡುಪಿ-ಚಿಕ್ಕಮಗಳೂರು - ಮಂಕಾಳ ವೈದ್ಯ
28. ಉತ್ತರ ಕನ್ನಡ - ಎಚ್. ಕೆ. ಪಾಟೀಲ್












Click it and Unblock the Notifications