ಡಾ. ಕೆ. ಸುಧಾಕರ್ ಅವರ ಪರ ಮತ ಹಾಕಲು, ದೂರದ ಆಸ್ಟ್ರೇಲಿಯಾ ದೇಶದಿಂದ ಬರುತ್ತಿದ್ದಾರೆ ಈ ಯುವಕ!

ಲೋಕಸಭೆ ಚುನಾವಣೆ 2024 ಬಂದೇ ಬಿಟ್ಟಿದೆ, ಇನ್ನೇನು ಕೆಲವೇ ದಿನಗಳಲ್ಲಿ ಮತದಾನವು ನಡೆಯಲಿದೆ. ಅದರಲ್ಲಿಯೂ ತೀವ್ರ ಕುತೂಹಲ ಕೆರಳಿಸಿರುವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು, ಗೆಲ್ಲುವ ಸಾಲಿನಲ್ಲಿ ಮುಂದೆ ನುಗ್ಗುತ್ತಿದ್ದಾರೆ. ಹೀಗಿದ್ದಾಗ ದೂರದ ಆಸ್ಟ್ರೇಲಿಯಾದಿಂದ ಡಾ. ಸುಧಾಕರ್ ಅವರಿಗೆ ಬೆಂಬಲ ನೀಡಲು ಚಿಕ್ಕಬಳ್ಳಾಪುರದ ಯುವಕ ಭಾರತಕ್ಕೆ ಬರುತ್ತಿದ್ದಾರೆ. ವಿಡಿಯೋ ನೋಡಲು ಮುಂದೆ ಓದಿ.

ಡಾ. ಕೆ. ಸುಧಾಕರ್ ಸಚಿವರಾಗಿ ಸಾಕಷ್ಟು ಹೆಸರು ಮಾಡಿದ್ದರು. ಅದರಲ್ಲೂ ಕೊರೊನಾ ಸಮಯದಲ್ಲಿ ಕರ್ನಾಟಕದಲ್ಲಿ ಆರೋಗ್ಯ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರವು ಕೂಡ ಮೆಚ್ಚುಗೆ ಸೂಚಿಸಿತ್ತು. ಡಾ. ಕೆ. ಸುಧಾಕರ್ ಅವರು ಸಚಿವರಾಗಿ, ಉತ್ತಮ ಕೆಲಸಗಳನ್ನು ಮಾಡಿದ್ದರು. ಹೀಗಾಗಿ ಈ ಬಾರಿ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನ ಕೊಟ್ಟಿದೆ ಬಿಜೆಪಿ ಹೈಕಮಾಂಡ್.

Lok Sabha Election 2024 Indian Origin Young Man Who Settled In Australia Is Coming To India To Vote

ಮತ್ತೊಂದು ಕಡೆ ಡಾ. ಕೆ. ಸುಧಾಕರ್ ಅವರಿಗೆ ಈಗ ಭರ್ಜರಿ ಗೆಲುವು ಸಿಗುವ ನಿರೀಕ್ಷೆ ಇದೆ. ಹೀಗಿದ್ದಾಗ ಆಸ್ಟ್ರೇಲಿಯಾದಲ್ಲಿ ಇರುವ ಭಾರತ ಮೂಲದ ಯುವಕರೊಬ್ಬರು ಸಿಡ್ನಿ ನಗರದಿಂದ ವಿಶೇಷ ವಿಡಿಯೋ ಒಂದನ್ನ ಶೇರ್ ಮಾಡಿ ಡಾ. ಕೆ. ಸುಧಾಕರ್ ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ತಾವು ಡಾ. ಸುಧಾಕರ್ ಅವರಿಗೆ ಬೆಂಬಲ ನೀಡಲು ಭಾರತಕ್ಕೆ ಬರ್ತಾ ಇದ್ದೀನಿ ಎಂದು ತಿಳಿಸಿದ್ದಾರೆ. ಆ ಯುವಕನ ವಿಶೇಷ ವಿಡಿಯೋ ನೋಡಲು ಮುಂದೆ ಓದಿ.

ಆಸ್ಟ್ರೇಲಿಯಾ ಟು ನಮ್ಮ ಭಾರತ!

ಈಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಭಾರತ ಮೂಲದ ಯುವಕ, ಡಾ. ಕೆ. ಸುಧಾಕರ್ ಅವರ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ತಾವು ಭಾರತಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ನಿಡಿದ್ದಾರೆ. ಇನ್ನು ಇದೇ ವಿಡಿಯೋದಲ್ಲಿ ಯುವಕ ಹೇಳಿರುವಂತೆ, ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಾಗಿದ್ದಾರೆ. ಡಾ. ಕೆ. ಸುಧಾಕರ್ ಅವರನ್ನು ಬೆಂಬಲಿಸುವುದಕ್ಕೆ ಲೋಕಸಭೆ ಚುನಾವಣೆ 2024ರ ಸಮಯಕ್ಕೆ ಅವರು ಭಾರತಕ್ಕೆ ಬರಲಿದ್ದಾರಂತೆ. ಆ ಬಗ್ಗೆ ಯುವಕ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ ಭರ್ಜರಿ ಪ್ರಚಾರ

ಡಾ. ಕೆ. ಸುಧಾಕರ್ ಅವರು ಇದೀಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಪ್ತಿಯಲ್ಲಿ ತಮ್ಮ ಚುನಾವಣಾ ಪ್ರಚಾರ ಕಾರ್ಯ ಆರಂಭ ಮಾಡಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಸೇರಿ, ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ ಚಿಕ್ಕಬಳ್ಳಾಪುರದ ಮತದಾರರ ಜೊತೆಗೂ ಚರ್ಚೆ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಪಕ್ಷದ ಭದ್ರಕೋಟೆ ಆಗಿದೆ. ಹೀಗಾಗಿಯೆ ಡಾ. ಕೆ. ಸುಧಾಕರ್ ಅವರು 2024ರ ಲೋಕಸಭೆ ಚುನಾವಣೆ ಅಖಾಡದಲ್ಲಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿ ಇದ್ದಾರೆ. ಸುಧಾಕರ್ ಅವರಿಗೆ ಇದೀಗ ಸ್ಥಳೀಯ ಮುಖಂಡರು & ನಾಯಕರ ಬೆಂಬಲ ಕೂಡ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+