ಜೆಡಿಎಸ್ ಭದ್ರಕೋಟೆಗೆ ನುಗ್ಗಲು ಇತರ ಪಕ್ಷಗಳು ವಿಫಲ

ಬೆಂಗಳೂರು, ಮೇ 16 : ಹಾಸನ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. 1 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಅರಕಲಗೋಡು ಮಂಜು ಅವರಿಗೆ ಸೋಲುಣಿಸಿರುವ ಗೌಡರು, ಹಾಸನದಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ.

2004, 2009ರ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದ್ದ ಎಚ್.ಡಿ.ದೇವೇಗೌಡರು 2014ರ ಚುನಾವಣೆಯಲ್ಲಿಯೂ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಕಾಂಗ್ರಸ್ ಅಭ್ಯರ್ಥಿ ಅರಕಲಗೋಡು ಮಂಜು ಮತ್ತು ಬಿಜೆಪಿಯ ಸಿ.ಎಚ್.ವಿಜಯಶಂಕರ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

HD Deve Gowda

ಮೈಸೂರಿನಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದ ಸಿ.ಎಚ್.ವಿಜಯಶಂಕರ್ ಹಾಸನದಲ್ಲಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದಿಂದ ಅಕರಲಗೋಡು ಶಾಸಕ ಎ. ಮಂಜು ಕಣದಲ್ಲಿದ್ದರು. ಅಂತಿಮವಾಗಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು 1,00,462 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. [ಕರ್ನಾಟಕದಲ್ಲಿ ಸೋತು ಗೆದ್ದವರು ಯಾರು]

ಹಾಸನ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಎಚ್.ಡಿ.ದೇವೇಗೌಡ 1
ಜೆಡಿಎಸ್ 5,09,841
ಅರಕಲಗೂಡು ಮಂಜು
2
ಕಾಂಗ್ರೆಸ್ 4,09,379
ಸಿ.ಎಚ್.ವಿಜಯ ಶಂಕರ್
3
ಬಿಜೆಪಿ 1,65,688
ಎ.ಪಿ.ಅಹಮದ್ 4 ಬಿಎಸ್ಪಿ 18,905
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+