ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಅದಾಲತ್‌ನಲ್ಲಿ ದಾಖಲೆಯ 14.77 ಲಕ್ಷ ಕೇಸ್ ಇತ್ಯರ್ಥ, ಮತ್ತೆ ಒಂದಾದ 170 ದಂಪತಿ!

By ಎಸ್ ಎಸ್ ಎಸ್
|
Google Oneindia Kannada News

ರಾಜ್ಯದಾದ್ಯಂತ ನ.14. ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಕೇಸ್ ಸೇರಿ ಒಟ್ಟು ದಾಖಲೆಯ 14.77ಲಕ್ಷ ಪ್ರಕರಣಗಳ ರಾಜಿ ಸಂಧಾನದ ಮೂಲಕ ವಿಲೇವಾರಿಯಾಗಿದೆ.

ಲೋಕ ಅದಾಲತ್ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣದ ಕೇಸುಗಳು ಇತ್ಯರ್ಥವಾಗಿರುವುದು ಇದೇ ಮೊದಲು ಮತ್ತು ಇದು ಹೊಸ ದಾಖಲೆಯಾಗಿದೆ. ಅದಾಲತ್‌ನ ಮತ್ತೊಂದು ವಿಶೇಷ ಎಂದರೆ ಕೌಟುಂಬಿಕ ವ್ಯಾಜ್ಯಗಳಲ್ಲಿ ತೊಡಗಿದ್ದ 170 ಜೋಡಿ ಒಂದಾಗಿರುವುದು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಅದಾಲತ್‌ನಲ್ಲಿ ಆಗಿರುವ ಪ್ರಗತಿಯನ್ನು ವಿವರಿಸಿದರು.

ಜಿಲ್ಲಾ ನ್ಯಾಯಾಲಯಗಳ 1,013 ಪೀಠಗಳು ಹಾಗೂ ಹೈಕೋರ್ಟ್‌ನ 8 ಪೀಠಗಳು ಸೇರಿ ರಾಜ್ಯದಾದ್ಯಂತ ಒಟ್ಟು 1,021 ಪೀಠಗಳು ಅದಾಲತ್ ನಡೆಸಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು 1,76,501 ಪ್ರಕರಣಗಳು ಹಾಗೂ 13,00,784 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ 14,77,285 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿವೆ.

Lok adalat settles 14.77 lakh cases, 170 couples united

ಜತೆಗೆ, ಸಾರ್ವಜನಿಕರಿಗೆ 1,282 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹಿಂದಿನ ಲೋಕ ಅದಾಲತ್‌ಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆಯ ಸಂಖ್ಯೆಯಲ್ಲಿಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ನ್ಯಾ. ಬಿ. ವೀರಪ್ಪ ತಿಳಿಸಿದರು.

ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಕಿವಿಮಾತಿಗೆ ಒಪ್ಪಿ ಒಂದಾದ ಮದ್ದೂರು ಜೋಡಿಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರ ಕಿವಿಮಾತಿಗೆ ಒಪ್ಪಿ ಒಂದಾದ ಮದ್ದೂರು ಜೋಡಿ

1460 ಫ್ಯಾಮಿಲಿ ಕೇಸ್ ಸೆಟಲ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ವೈವಾಹಿಕ ಪ್ರಕರಣಗಳನ್ನು ಹೆಚ್ಚು ಇತ್ಯರ್ಥಪಡಿಸುವಂತೆ ಉತ್ತೇಜಿಸಲಾಗಿತ್ತು. ಈ ಬಾರಿಯ ಲೋಕ ಅದಾಲತ್‌ನಲ್ಲಿ ಒಟ್ಟು 1,460 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಅಂದಾಜು 174 ಪ್ರಕರಣಗಳಲ್ಲಿ ದಂಪತಿ ರಾಜಿ ಸಂಧಾನದಿಂದ ಮತ್ತೆ ಒಂದಾಗಿ ಜೀವನ ನಡೆಸಲು ತೀರ್ಮಾನಿಸಿದ್ದಾರೆ.

ವಿಚ್ಛೇದನ ಬಯಸಿದ್ದ ಬೆಂಗಳೂರಿನ 32, ಮೈಸೂರಿನ 29, ಬೆಳಗಾವಿಯ 18 ಹಾಗೂ ಧಾರವಾಡದ 17 ದಂಪತಿ ಸೇರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ದಂಪತಿಗಳು ಮತ್ತೆ ಒಗ್ಗೂಡಿದ್ದಾರೆ.

ಖಾತೆ ಬದಲಾವಣೆ, ಗುರುತಿನ ಚೀಟಿ ವಿತರಣೆ, ಪಿಂಚಣಿ ಮುಂತಾದ ಕಂದಾಯ ಅಧಿಕಾರಿಗಳ ಮುಂದೆ ಬಾಕಿ ಇದ್ದ ಪ್ರಕರಣಗಳನ್ನೂ ವ್ಯಾಜ್ಯ ಪೂರ್ವ ಪ್ರಕರಣಗಳಾಗಿ ತೆಗೆದುಕೊಂಡು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಸೇವೆಗಳ ಸಮಿತಿಗಳಲ್ಲಿ ಒಟ್ಟು 2,65,391 ಪ್ರಕರಣಗಳನ್ನು ವಿಲೇವಾರಿ ಮಾಡಲು ಕಂದಾಯ ಅಧಿಕಾರಿಗಳೊಂದಿಗೆ ಸೂಚಿಸಲಾಗಿದೆ.

ಅಲ್ಲದೆ, ಪೊಲೀಸರ ಮನವಿಯಂತೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಗಳಿಗೂ ಅಧಿಕ ಬಾಕಿ ವಸೂಲಾತಿ ಪ್ರಕರಣಗಳಲ್ಲಿಲೋಕ ಅದಾಲತ್ ನೋಟಿಸ್ ನೀಡಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 4,18,775 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಲಾಗಿದ್ದು, 23,89,38,021 ರೂ. ದಂಡ ಸಂಗ್ರಹಿಸಲಾಗಿದೆ ಎಂದರು.

Lok adalat settles 14.77 lakh cases, 170 couples united

ಈ ಬಾರಿಯ ಲೋಕ ಅದಾಲತ್‌ನಲ್ಲಿಒಟ್ಟು 3,384 ಮೋಟಾರು ಅಪಘಾತ ಪ್ರಕರಣಗಳನ್ನು 324,37,74,172 ರೂ. ಪರಿಹಾರದೊಂದಿಗೆ ಇತ್ಯರ್ಥಪಡಿಸಲಾಗಿದೆ.

ಕೊಪ್ಪಳದ ಮೊಟಾರು ಅಪಘಾತ ಪರಹಾರ ನ್ಯಾಯಾಧಿಕರಣದಲ್ಲಿ(ಎಂಎಸಿಟಿ) ಬಾಕಿ ಇದ್ದ ಪ್ರಕರಣವೊಂದರಲ್ಲಿ 55 ಲಕ್ಷ ರೂ. ಪರಿಹಾರ ಪಾವತಿಸಿ ಇತ್ಯರ್ಥಪಡಿಸಲಾಗಿದ್ದರೆ, ಕೋಲಾರದ ಮುಳಬಾಗಿಲು ತಾಲೂಕಿನ ಎಂಎಸಿಟಿಯಲ್ಲಿನ ಪ್ರಕರಣವನ್ನು 41 ಲಕ್ಷ ರೂ. ಪರಿಹಾರದೊಂದಿಗೆ ವಿಲೇವಾರಿ ಮಾಡಲಾಗಿದೆ.

ಲೋಕ ಅದಾಲತ್‌ನಲ್ಲಿ ನೆಗೋಷಿಯಬಲ್ ಇನ್ಸ್‌ಟ್ರುಮೆಂಟ್ ಕಾಯ್ದೆಯ (ಚೆಕ್ ಬೌನ್ಸ್) 10,994 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, ಒಟ್ಟು 328,94,26,020 ರೂ. ಪರಿಹಾರ ಕೊಡಿಸಲಾಗಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವೊಂದರಲ್ಲಿ 32 ಕೋಟಿ ಪರಿಹಾರ ಮೊತ್ತದೊಂದಿಗೆ ಪ್ರಕರಣ ಇತ್ಯರ್ಥಪಡಿಸಲಾಗಿದೆ.

ಆದಾಲತ್ ವಿಶೇಷತೆಗಳು:
* ಒಟ್ಟು 2,887 ಪಾರ್ಟಿಷನ್ ಸೂಟ್ (ವಿಭಾಗ ದಾವೆ) ಪ್ರಕರಣಗಳನ್ನು 26 ಕೋಟಿ ರೂ. ಪರಿಹಾರದ ಮೊತ್ತದೊಂದಿಗೆ ವಿಲೇವಾರಿ ಮಾಡಲಾಗಿದೆ.
* ಬ್ಯಾಂಕ್ ವಸೂಲಾತಿಗೆ ಸಂಬಂಧಿಸಿದ 9,383 ಪ್ರಕರಣಗಳಲ್ಲಿ ಒಟ್ಟು 63,52,18,988 ರೂ. ಗಳನ್ನು ವಸೂಲಿ ಮಾಡಿ ಇತ್ಯರ್ಥಪಡಿಸಲಾಗಿದೆ.
* ವಿದ್ಯುತ್ ಬಿಲ್ ವಸೂಲಾತಿಗೆ ಸಂಬಂಧಿಸಿದ 1,28,276 ಪ್ರಕರಣಗಳಲ್ಲಿ 18,00,29,438 ರೂ. ಹಾಗೂ 2,88,977 ನೀರಿನ ಬಿಲ್ ವಸೂಲಾತಿ ಪ್ರಕರಣಗಳಲ್ಲಿ 27,15,80,029 ರೂ. ವಸೂಲಿ ಮಾಡಲಾಗಿದೆ.
* ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಹಾಗೂ ಕರ್ನಾಟಕ ರಿಯಲ್ ಎಸ್ಟೇಟ್ ಮೇಲ್ಮನವಿ ನ್ಯಾಯಾಧಿಕರಣದಲ್ಲಿ (ಕೆ-ರೀಟ್) ಬಾಕಿಯಿದ್ದ ಒಟ್ಟು 175 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 11 ಕೋಟಿ ರೂ. ಪರಿಹಾರ ನೀಡಲಾಗಿದೆ.

English summary
Justice B. Veerappa, a judge of the High Court of Karnataka and Executive Chairperson of the Karnataka State Legal Services Authority (KSLSA) said Lok adalat settles 14.77 lakh cases, 170 couples united.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X